Today Gold Price: ಇಂದು ಬಂಗಾರದ ಬೆಲೆ ಏರಿಕೆ

Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಬುಧವಾರ) ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನಂ ಬೆಲೆಯು ಭಾರೀ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

Aug 5, 2026 - 12:27
Today Gold Price: ಇಂದು ಬಂಗಾರದ ಬೆಲೆ ಏರಿಕೆ

ಬೆಂಗಳೂರು: ಸದ್ಯ ಆಷಾಢ ಮಾಸವಿದೆ. ಯಾವುದೇ ಶುಭ ಕಾರ್ಯಗಳು ಮಾಡದ ಹಿನ್ನೆಲೆ, ಬಂಗಾರದ ಬೆಲೆಯು ಇಳಿಕೆಯಾಗುವುದು ವಾಡಿಕೆ. ಆದರೆ, ಈ ಬಾರಿ ದಿನದಿಂದ ದಿನಕ್ಕೆ ಆಭರಣದ ಬೆಲೆ ಹೆಚ್ಚಳವಾಗುತ್ತಿದೆ.  

ಚಿನಿವಾರ ಪೇಟೆಯಲ್ಲಿ ಇಂದು (ಬುಧವಾರ) ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನಂ ಬೆಲೆಯು ಭಾರೀ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. 

ರಾಜ್ಯದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.1,750 ಹೆಚ್ಚಳವಾಗಿ ರೂ.1,45,750 ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.1,600 ಏರಿಕೆಯಾಗಿ ರೂ.1,33,600ಕ್ಕೆ ತಲುಪಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.1,310 ಹೆಚ್ಚಳವಾಗಿ ರೂ.1,09,310 ಆಗಿದೆ. 

ಅದೇ ರೀತಿಯಲ್ಲಿ 1 ಕೆಜಿ ಬೆಳ್ಳಿ ರೂ.5,000 ಬೆಲೆ ಏರಿಕೆಯಾಗಿ ರೂ.2,40,000ಕ್ಕೆ ಬಂದಿದೆ. 10 ಗ್ರಾಂ ಪ್ಲಾಟಿನಂ ರೂ.3390 ಹೆಚ್ಚಳವಾಗಿ ರೂ.53630 ದರದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. 

ಷೇರುಪೇಟೆ ಇಂದು ಸಕಾರಾತ್ಮಕ ವಹಿವಾಟು:

ಭಾರತದ ಷೇರುಪೇಟೆ ವಹಿವಾಟು ಸಕಾರಾತ್ಮಕವಾಗಿದೆ. ಸೆನ್ಸೆಕ್ಸ್ 397.61 ಅಂಕಗಳು ಏರಿಕೆಯಾಗಿ 78,826.56 ಅಂಕಗಳಿಗೆ ತಲುಪಿದೆ. ನಿಫ್ಟಿ 12.05 ಅಂಕಗಳು ಹೆಚ್ಚಳವಾಗಿ 24,626.95 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.

ಟ್ರೆಂಟ್, ಕೋಟಕ್ ಬ್ಯಾಂಕ್, ಟೆಕ್ ಮಹೀಂದ್ರಾ, ಎಟರ್ನಲ್, ಏಷ್ಯನ್ ಪೇಂಟ್ ಹಾಗೂ ಆಕ್ಸಿಸ್ ಬ್ಯಾಂಕ್ ಹಾಗೂ ಇನ್ಫೋಸಿಸ್ ಷೇರುಗಳು ಲಾಭದಲ್ಲಿವೆ. ಸನ್ ಫಾರ್ಮಾ, ಬಿಇಎಲ್ ಮತ್ತು ಟೈಟಾನ್ ಷೇರುಗಳು ನಷ್ಟದಲ್ಲಿವೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.