ಬೆಂಗಳೂರು: ಮಾನವ ರತ್ನ, ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭ

Bengaluru Manav Ratna and Rani Chennamma Award Presentation Ceremony: ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಓರಿಯೆಂಟಲ್ ಫೌಂಡೇಶನ್ & ಕನ್ನಡ ಮತ್ತೆ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಾನವ ರತ್ನ ಹಾಗೂ ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

Jul 13, 2026 - 13:02
ಬೆಂಗಳೂರು: ಮಾನವ ರತ್ನ, ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು: ಇಲ್ಲಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಓರಿಯೆಂಟಲ್ ಫೌಂಡೇಶನ್ & ಕನ್ನಡ ಮತ್ತೆ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಾನವ ರತ್ನ ಹಾಗೂ ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ರಾಜ್ಯಾದ್ಯಂತ ಸುಮಾರು 90ಕ್ಕೂ ಹೆಚ್ಚು ಸಾಧಕರಿಗೆ, ಪುರಸ್ಕಾರ ನೀಡಿ ಗೌರವಿಸಲಾಯಿತು.
 
ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತ್ಯ ಅಧ್ಯಕ್ಷ, ಖ್ಯಾತ ಚಲನಚಿತ್ರ ನಟ ಹಾಗೂ ರಂಗಭೂಮಿ ಕಲಾವಿದ ಸುಚೆಂದ್ರ ಪ್ರಸಾದ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆ ಬಳಿಕ ಕನ್ನಡ ನಾಡು ನುಡಿಯ ವೈಶಿಷ್ಟ್ಯಗಳ ಕುರಿತು ಮಾತಾಡಿದರು. 
  
ಒರಿಯಂಟಲ್ ಫೌಂಡೇಶನ್ ಸಂಸ್ಥಾಪಕ ರವಿಕುಮಾರ್ ಮಾತನಾಡಿ, ತಮ್ಮ ಕೆಲಸ ನಾಡಿನ ಎಲ್ಲರಿಗೂ ತಲುಪಬೇಕು. ಆದಷ್ಟು ಜನರಿಗೆ ತಾವು ಸಹಾಯ ಮಾಡಬೇಕು ಎಂದು ಹೇಳಿದರು. 
 
ಖ್ಯಾತ ಸಮಾಜ ಸೇವಕ ಶ್ಯಾಮಸುಂದರ ಹೆಗಡೆ 'ಮಾನವ ರತ್ನ ಪ್ರಶಸ್ತಿ' ಸ್ವೀಕರಿಸಿ, ನಾಡಿನ ರೈತರಿಗೆ ಅರ್ಪಿಸಿದರು. 'ಮಾವು ಬೆಳೆದ ರೈತರು ನಮ್ಮನ್ನು ಸಂಪರ್ಕಿಸಿದರೆ, ಉತ್ತಮ ಬೆಲೆಯನ್ನು ದೊರಕಿಸಿ ಕೊಡುತ್ತೇನೆ ಎಂದರು.
 
ಹಲವಾರು ವರ್ಷಗಳಿಂದ ರವಿಕುಮಾರ್ ಅವರು, ನಾಡಿನ ಎಲೆ ಮರೆ ಕಾಯಿಯಂತೆ ಇರೋ ಸಾಧಕರಿಗೆ ಗುರಿತಿಸಿ ಸನ್ಮಾನ ಕಾರ್ಯಕ್ರಮ ನಡೆಸುತ್ತಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
 
ಈ ಕಾರ್ಯಕ್ರಮದಲ್ಲಿ ಡಾ.ರೇವಣ್ಣ, ಗೋವಿಂದ ರಾಜು, ರಾಮಾಚಾರಿ, ಉತ್ಸವ ಚಂದ್ರಪ್ಪ, ನಾಗರಾಜು ಹಾಗೂ ಬರಿಣಿ ರಾಜು ಇತರರು ಇದ್ದರು. 

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.