ಹಿತ್ತಲ ಗಿಡ ಮದ್ದು: ತ್ರಿವೃತ್

Medicine Plant Trivrit: ತ್ರಿವೃತ್ ಆಯುರ್ವೇದದ ಶ್ರೇಷ್ಠ ರೇಚಕ ಮೂಲಿಕೆಯಾಗಿದ್ದು, ಆರೋಗ್ಯವನ್ನು ವೃದ್ಧಿಸುತ್ತದೆ.

Jul 17, 2026 - 09:45
ಹಿತ್ತಲ ಗಿಡ ಮದ್ದು: ತ್ರಿವೃತ್

ತ್ರಿವೃತ್ ಆಯುರ್ವೇದದ ಶ್ರೇಷ್ಠ ರೇಚಕ ಮೂಲಿಕೆಯಾಗಿದೆ. ಇದರ ವೈಜ್ಞಾನಿಕ ಹೆಸರು Operculina turpethum ಮತ್ತು ಹಿಂದಿಯಲ್ಲಿ ನಿಶೋತ್ತರ, ಕನ್ನಡದಲ್ಲಿ ಬಿಳಿ ತಿಗಡೆ ಎಂದು ಕರೆಯುತ್ತಾರೆ. 
 
ಬಹುಮುಖ್ಯವಾಗಿ ಎರಡು ವಿಧ, ಬಿಳಿ ತ್ರಿವೃತ್ ಸೌಮ್ಯ ಮತ್ತು ಕೃಷ್ಣ ತ್ರಿವೃತ್ ತೀಕ್ಷ್ಣ. ಇದರ ಬೇರಿನ ತೊಗಟೆಯನ್ನು ಔಷಧವಾಗಿ ಬಳಸಲಾಗುತ್ತದೆ. ಇದು ಕಟು, ತಿಕ್ತ ರಸ, ಉಷ್ಣ ವೀರ್ಯವುಳ್ಳದ್ದು. ವಾತ-ಕಫ ನಾಶಕವಾಗಿ ಮಲಬದ್ಧತೆ, ಹೊಟ್ಟೆ ಉಬ್ಬರ, ಜಲೋದರ, ಪಾಂಡುರೋಗ, ಚರ್ಮರೋಗ, ಸಂಧಿವಾತ ಹಾಗೂ ಸ್ಥೂಲಕಾಯಕ್ಕೆ ಹಿತಕರವಾಗಿದೆ. ಕರುಳನ್ನು ಶುದ್ಧೀಕರಿಸಲಿದ್ದು, ಪಂಚಕರ್ಮದ ವಿರೇಚನಕ್ಕೆ ಅತ್ಯುತ್ತಮವಾಗಿದೆ. 
 
ಸಾಮಾನ್ಯವಾಗಿ ಮೂರರಿಂದ ಆರು ಗ್ರಾಂ ಚೂರ್ಣವನ್ನು ಜೇನುತುಪ್ಪ ಅಥವಾ ತ್ರಿಫಲಾ ಕಷಾಯದೊಂದಿಗೆ ಸೇವಿಸಬೇಕು. ಅತಿಯಾದ ಸೇವನೆಯಿಂದ ನಿರ್ಜಲೀಕರಣ ಮತ್ತು ಹೊಟ್ಟೆ ನೋವು ಉಂಟಾಗಬಹುದು ಆದ್ದರಿಂದ ಆಯುರ್ವೇದ ವೈದ್ಯರ ಮಾರ್ಗದರ್ಶನ ಅತ್ಯಗತ್ಯವಾಗಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.