Ambika NEET Academy: ಅಂಬಿಕಾ ನೀಟ್ ಅಕಾಡೆಮಿ ಪ್ರಾಂಶುಪಾಲರಾಗಿ ಕೇಶವ ಕಿಶೋರ್ ಆಯ‍್ಕೆ

Ambika NEET Academy: ಅಂಬಿಕಾ ನೀಟ್ ಅಕಾಡೆಮಿ ಪ್ರಾಂಶುಪಾಲರಾಗಿ ಕೇಶವ ಕಿಶೋರ್ ಆಯ‍್ಕೆಯಾಗಿದ್ದಾರೆ.

Jul 17, 2026 - 11:04
Jul 17, 2026 - 11:06
Ambika NEET Academy: ಅಂಬಿಕಾ ನೀಟ್ ಅಕಾಡೆಮಿ ಪ್ರಾಂಶುಪಾಲರಾಗಿ ಕೇಶವ ಕಿಶೋರ್ ಆಯ‍್ಕೆ
ಪುತ‍್ತೂರು: ಇಲ್ಲಿನ ನಟ‍್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತತ ಅಂಬಿಕಾ ನೀಟ್ ಅಕಡೆಮಿಗೆ (Ambika NEET Academy) ನೂತನ ಪ್ರಾಂಶುಪಾಲರಾಗಿ ಕೇಶವ ಕಿಶೋರ್ (Keshav Kishore) ನೇಮಕಗೊಂಡಿರುತ‍್ತಾರೆ. 
 
ಅಂಬಿಕಾ ಸಮೂಹ ಶಿಕ್ಷಣ ಸಂಸ‍್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ‍್ಟೋಜ (Subrahmanya Nattoja) ಅವರು, ಬಪ್ಪಳಿಗೆಯಲ‍್ಲಿನ ಅಂಬಿಕಾ ಶಿಕ್ಷಣ ಸಂಸ‍್ಥೆಯಲ‍್ಲಿ ಕೇಶವ ಕಿಶೋರ್ ಅವರನ‍್ನು ಪ್ರಾಂಶುಪಾಲರಾಗಿ ಘೋಷಿಸಿ, ಅಭಿನಂದಿಸಿದರು. 
 
ಆ ಬಳಿಕ ಮಾತನಾಡಿ, ಕಳೆದ ಕೆಲ ವರ್ಷಗಳಿಂದ ಅಂಬಿಕಾ ನೀಟ್ ಅಕಾಡೆಮಿಯು ಉಜ್ವಲ ಭವಿಷ್ಯದ ಕನಸು ಕಟ‍್ಟಿಕೊಂಡು ಬಂದ ವಿದ‍್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಹಾಗೂ ಗುಣಮಟ್ಟದ ಮಟ್ಟದ ಶಿಕ್ಷಣವನ‍್ನು ನೀಡುತ್ತಿದೆ. ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ಪಡೆಯಲು ಉತ‍್ಸಾಹವಿರುವ ವಿದ‍್ಯಾರ್ಥಿಗಳನ‍್ನು ನೀಟ್ & ಜೆಇ ಪರೀಕ‍್ಷೆಗೆ ಸಜ‍್ಜುಗೊಳಿಸಲಾಗುತ್ತಿದೆ ಎಂದು ಹೇಳಿದರು.  
 
ಅಂಬಿಕಾ ಶಿಕ್ಷಣ ಸಂಸ‍್ಥೆಗಳು ಆರಂಭದಿಂದಲೂ ವಿದ‍್ಯಾರ್ಥಿಗಳ ಕಲಿಕಾ ಸಾಮರ್ಥ್ಯಕ‍್ಕೆ ತಕ್ಕಂತೆ ಶಿಕ್ಷಣ ನೀಡುವ ಕೆಲಸ ಮಾಡುತ್ತಿವೆ. ಅಂಬಿಕಾ ನೀಟ್ ಅಕಾಡೆಮಿಯು ಇದರ ಮಂದುವರಿದ ಭಾಗವಾಗಿದೆ. ಸ್ಪರ್ಧಾತ್ಮಕ ಪರೀಕ‍್ಷೆಗಳಿಗೆ ವಿದ‍್ಯಾರ್ಥಿಗಳನ‍್ನು ಸಿದ್ಧಗೊಳಿಸುವಲ್ಲಿ ಆಡಳಿತ ಮಂಡಳಿ ಮಾರ್ಗದರ್ಶನದಲ‍್ಲಿ ಶಿಕ್ಷಕರು, ವಿವಿಧ ರೀತಿಯ ತರಬೇತಿಗಳನ್ನು ನೀಡುತ್ತಿದ‍್ಧಾರೆ. ಸಂಸ‍್ಥೆಯು ವರ್ಷದಿಂದ ವರ್ಷಕ‍್ಕೆ ಫಲಿತಾಂಶದಲ‍್ಲಿ ಗಮನಾರ್ಹ ಪ್ರಗತಿಯನ‍್ನು ಸಾಧಿಸುತ್ತಿದೆ ಎಂದು ತಿಳಿಸಿದರು.
 
ವಿದ‍್ಯಾರ್ಥಿಗಳು ದೇಶದ ಸಂಪನ‍್ಮೂಲ ಬಳಸಿಕೊಂಡು ವಿದ‍್ಯಾರ್ಜನೆಯ ನಂತರ, ವಿದೇಶಗಳಿಗೆ ತೆರಳುವುದಕ‍್ಕೆ ಆದ್ಯತೆ ನೀಡಬಾರದು. ರಾಷ್ಟ್ರದ ಹಿತಕ್ಕೆ ಬೇಕಾಗುವ ಕ‍್ಷೇತ್ರಗಳಲ‍್ಲಿ ತೊಡಗಿಕೊಂಡು, ದೇಶ ಸೇವೆ ಮಾಡಬೇಕು ಎಂದು ಹೇಳಿದರು. 
 
ಅಂಬಿಕಾ ನೀಟ್ ಅಕಾಡೆಮಿಯ ನೂತನ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಕೇಶವ ಕಿಶೋರ್ ಮಾತನಾಡಿ, ಆಡಳಿತ ಮಂಡಳಿ, ಉಪನ‍್ಯಾಸಕರು, ಪೋಷಕರು ಹಾಗೂ ವಿದ‍್ಯಾರ್ಥಿಗಳ ಸಹಕಾರದೊಂದಿಗೆ ಅಕಾಡೆಮಿ ಇನ್ನಷ‍್ಟು ಉತ್ತಮ ಸಾಧನೆ ಮಾಡುವ ವಿಶ‍್ವಾಸವಿದೆ ಎಂದರು. 
 
ಅಂಬಿಕಾ ಸಮೂಹ ಶಿಕ್ಷಣ ಸಂಸ‍್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಉಪನ‍್ಯಾಸಕರಾದ ಶೈನಿ, ಜಯಶ್ರೀ, ರಾಮಪ್ರಸಾದ್ ಹಾಗೂ ಜಯಂತಿ ಪಿ ಇತರರು ಇದ್ದರು.