Today Gold Price: ಇಂದು ಚಿನ್ನದ ದರ ಎಷ್ಟಿದೆ?
Today Gold Price: ದೇಶದ ಚಿನಿವಾರ ಪೇಟೆಯಲ್ಲಿ ಇಂದು (ಗುರುವಾರ) ಚಿನ್ನದ ಬೆಲೆ ಅತ್ಯಲ್ಪ ಇಳಿಕೆಯಾಗಿದೆ. ಆದಾಗ್ಯೂ ಪ್ಲಾಟಿನಂ ಏರಿಕೆಯಾಗಿದ್ದು, ಬೆಳ್ಳಿ ದರ ಮಾತ್ರ ಸ್ಥಿರವಾಗಿದೆ.
ಬೆಂಗಳೂರು: ಚಿನಿವಾರ ಪೇಟೆಯಲ್ಲಿ ಇಂದು (ಗುರುವಾರ) ಚಿನ್ನದ ಬೆಲೆ ಅತ್ಯಲ್ಪ ಇಳಿಕೆಯಾಗಿದೆ. ಆದಾಗ್ಯೂ ಪ್ಲಾಟಿನಂ ಏರಿಕೆಯಾಗಿದ್ದು, ಬೆಳ್ಳಿ ದರ ಮಾತ್ರ ಸ್ಥಿರವಾಗಿದೆ.
ಬೆಂಗಳೂರಿನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.280 ಕಡಿಮೆಯಾಗಿ ರೂ.1,43,290 ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.250 ಇಳಿಕೆಯಾಗಿ ರೂ.1,31,350ಕ್ಕೆ ಬಂದಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.200 ಕಡಿಮೆಯಾಗಿ ರೂ.1,07,470 ಆಗಿದೆ. 10 ಗ್ರಾಂ ಪ್ಲಾಟಿನಂ ಬೆಲೆ ರೂ.920 ಏರಿಕೆಯಾಗಿ ರೂ.51,510ಕ್ಕೆ ತಲುಪಿದೆ. 1 ಕೆಜಿ ಬೆಳ್ಳಿ ರೂ.2,35,000 ದರದಲ್ಲಿ ಮಾರಾಟವಾಗುತ್ತಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.280 ಇಳಿಕೆಯಾಗಿ ರೂ.1,43,440 ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.250 ಕಡಿಮೆಯಾಗಿ ರೂ.1,31,500ಕ್ಕೆ ತಲುಪಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.200 ಇಳಿಕೆಯಾಗಿ ರೂ.1,07,620 ಆಗಿದೆ. 10 ಗ್ರಾಂ ಪ್ಲಾಟಿನಂ ಬೆಲೆ ರೂ.920 ಹೆಚ್ಚಳವಾಗಿ ರೂ.51,510ಕ್ಕೆ ಬಂದಿದೆ. 1 ಕೆಜಿ ಬೆಳ್ಳಿಯನ್ನು ರೂ.2,35,000 ದರದಲ್ಲಿ ಮಾರಲಾಗುತ್ತಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.280 ಕಡಿಮೆಯಾಗಿ ರೂ.1,43,290 ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.250 ಇಳಿಕೆಯಾಗಿ ರೂ.1,31,350ಕ್ಕೆ ಬಂದಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.200 ಕಡಿಮೆಯಾಗಿ ರೂ.1,07,470 ಆಗಿದೆ. 10 ಗ್ರಾಂ ಪ್ಲಾಟಿನಂ ಬೆಲೆ ರೂ.920 ಏರಿಕೆಯಾಗಿ ರೂ.51,510ಕ್ಕೆ ತಲುಪಿದೆ. 1 ಕೆಜಿ ಬೆಳ್ಳಿ ರೂ.2,35,000 ದರದಲ್ಲಿ ಮಾರಾಟವಾಗುತ್ತಿದೆ.
ಷೇರುಪೇಟೆ ವಹಿವಾಟು ಚೇತರಿಕೆ:
ಭಾರತದ ಷೇರುಪೇಟೆ ವಹಿವಾಟು ಇಂದು (ಗುರುವಾರ) ಚೇತರಿಕೆಯಾಗಿದೆ. ಸೆನ್ಸೆಕ್ಸ್ 184.38 ಅಂಕಗಳು ಏರಿಕೆಯಾಗಿ 77,369.81 ಅಂಕಗಳಿಗೆ ತಲುಪಿದೆ. ನಿಫ್ಟಿ 42.40 ಅಂಕಗಳು ಹೆಚ್ಚಳವಾಗಿ 24,120.90 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.
ಸದ್ಯ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಹೆಚ್ಚು-ಕಮ್ಮಿ ಸ್ಥಿರವಾಗಿದ್ದು, ರೂ.96.24 ಇದೆ. ಹೆಚ್‌ಸಿಎಲ್ ಟೆಕ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಹಿಂಡಾಲ್ಕೊ ಹಾಗೂ ವಿಪ್ರೋ ಕಂಪನಿ ಷೇರುಗಳು ಲಾಭದಲ್ಲಿವೆ. ಎಸ್‌ಬಿಐ ಲೈಫ್ ಇನ್ಶೂರೆನ್ಸ್, ಒಎನ್‌ಜಿಸಿ ಮತ್ತು ಬಜಾಜ್ ಫಿನ್‌ಸರ್ವ್ ಷೇರುಗಳು ನಷ್ಟದಲ್ಲಿವೆ.


