FIFA-2026: ಅರ್ಜೆಂಟಿನಾಗೆ ಗೆಲುವು.. ಫೈನಲ್‌ಗೆ ಲಗ್ಗೆ

FIFA-2026: ಫಿಫಾ ವಿಶ್ವಕಪ್‌ನ 2ನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಹಾಲಿ ಚಾಂಪಿಯನ್ ಅರ್ಜೆಂಟಿನಾ ಜಯ ಗಳಿಸಿದೆ.

Jul 16, 2026 - 11:37
FIFA-2026: ಅರ್ಜೆಂಟಿನಾಗೆ ಗೆಲುವು.. ಫೈನಲ್‌ಗೆ ಲಗ್ಗೆ

ಅಮೆರಿಕ: ಇಲ್ಲಿನ ಅಟ್ಲಾಂಟಾ ಕ್ರೀಡಾಂಗಣದಲ್ಲಿ ಬುಧವಾರ ತಡರಾತ್ರಿ ನಡೆದ ಫಿಫಾ ವಿಶ್ವಕಪ್‌ನ 2ನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಹಾಲಿ ಚಾಂಪಿಯನ್ ಅರ್ಜೆಂಟಿನಾ ಜಯ ಗಳಿಸಿದೆ.  2-1 ಗೋಲುಗಳ ಅಂತರದಲ್ಲಿ ಈ ಪಂದ್ಯವನ್ನು ಗೆದ್ದು ಬೀಗಿದ್ದು, ಫೈನಲ್‌ಗೂ ಲಗ್ಗೆ ಇಟ್ಟಿದೆ. 

ಮೊದಲಾರ್ಧದಲ್ಲಿ ಉಭಯ ತಂಡಗಳು ತೀವ್ರ ಪೈಪೋಟಿ ನಡೆಸಿದವು. ಆದರೆ, ಯಾವುದೇ ಗೋಲು ಗಳಿಸದೆ, ಸಮಬಲ ಸಾಧಿಸಿದವು. ದ್ವಿತೀಯಾರ್ಧದ  55ನೇ ನಿಮಿಷದಲ್ಲಿ ಇಂಗ್ಲೆಂಡ್‌ನ ಆಂಥೋನಿ ಗಾರ್ಡನ್ ಮೊದಲ ಗೋಲು ಬಾರಿಸಿ, 1-0 ಮುನ್ನಡೆ ತಂದುಕೊಟ್ಟರು.

ಅಂತಿಮವಾಗಿ ಅರ್ಜೆಂಟಿನಾವು ಕಂಬ್ಯಾಕ್ ಮಾಡಿತು. 85ನೇ ನಿಮಿಷದಲ್ಲಿ ಎಂಜೊ ಫೆರ್ನಾಂಡಿಸ್ ಹಾಗೂ 92ನೇ ನಿಮಿಷದಲ್ಲಿ ಲೌಟಾರೊ ಮಾರ್ಟಿನೆಜ್ ತಲಾ ಒಂದೊಂದು ಗೋಲು ಹೊಡೆದು, ಗೆಲುವಿನ ದಡ ಮುಟ್ಟಿಸಿದರು.

ನ್ಯೂಜೆರ್ಸಿಯ ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ಜರುಗಲಿದ್ದು, ಅರ್ಜೆಂಟಿನಾ ಹಾಗೂ ಸ್ಪೇನ್ ತಂಡಗಳು ಸೆಣಸಲಿವೆ. ಸೋಮವಾರ (ಜುಲೈ 20) ಬೆಳಗ್ಗೆ 12:30ಕ್ಕೆ ಈ ಪಂದ್ಯವು ಶುರುವಾಗಲಿದೆ. 

ಮೂರನೇ ಸ್ಥಾನಕ್ಕಾಗಿ ಸೆಮಿಫೈನಲ್‌ನಲ್ಲಿ ಸೊತ್ತಿರುವ ಫ್ರಾನ್ಸ್ ಮತ್ತು ಇಂಗ್ಲೆಂಡ್ ತಂಡಗಳು  ಹಾರ್ಡ್ ರಾಕ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಭಾನುವಾರ (ಜುಲೈ 19) ಮುಂಜಾನೆ 2:30ಕ್ಕೆ ಈ ಪಂದ್ಯವು ಆರಂಭವಾಗಲಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.