ರೂ.50 ಕೋಟಿ ಕ್ಲಬ್‌ ಸೇರುವತ್ತ 'ಲೆನಿನ್'

Lenin Day 6 Collection: ಅಖಿಲ್ ಅಕ್ಕಿನೇನಿ ನಟನೆಯ ತೆಲುಗಿನ 'ಲೆನಿನ್' ಸಿನಿಮಾಗೆ ಪ್ರೇಕ್ಷಕರು ಮನಸೊತ್ತಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿಯೂ ಸಖತ್ ಸೌಂಡ್ ಮಾಡುತ್ತಿದೆ.

Jul 16, 2026 - 14:04
ರೂ.50 ಕೋಟಿ ಕ್ಲಬ್‌ ಸೇರುವತ್ತ 'ಲೆನಿನ್'

ಹೈದರಾಬಾದ್: ಅಖಿಲ್ ಅಕ್ಕಿನೇನಿ ನಟನೆಯ ತೆಲುಗಿನ 'ಲೆನಿನ್' ಸಿನಿಮಾಗೆ ಪ್ರೇಕ್ಷಕರು ಮನಸೊತ್ತಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿಯೂ ಸಖತ್ ಸೌಂಡ್ ಮಾಡುತ್ತಿದೆ. 
 
ಈ ಚಿತ್ರವು ಬಿಡುಗಡೆಯಾದ ಆರನೇ ದಿನವು (ಬುಧವಾರ) ಭರ್ಜರಿ ಕಲೆಕ್ಷನ್ ಮಾಡಿದೆ. ಭಾರತದಲ್ಲಿ ರೂ.2.15 ಕೋಟಿ ನೆಟ್ ಗಳಿಕೆ ಕಂಡಿದೆ. ಇದರೊಂದಿಗೆ ವಿಶ್ವಾದ್ಯಂತ ರೂ.48.39 ಕೋಟಿ ಬಾಚಿದ್ದು, ರೂ.50 ಕೋಟಿ ಕ್ಲಬ್‌ ಸೇರುವತ್ತ ಮುನ್ನುಗುತ್ತಿದೆ. 
 
ನಿರ್ದೇಶಕ ಮುರಳಿ ಕಿಶೋರ್ ಅಬ್ಬುರು ಆಕ್ಷನ್ ಕಟ್ ಹೇಳಿದ್ದು, ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡದ ನಟ ಪ್ರಮೋದ್ (ವಸಂತ್ ಪಾತ್ರ) ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. 
 
ಶಿವಾಜಿ, ಸುನೀಲ್, ಬ್ರಹ್ಮಾಜಿ, ಈಶ್ವರಿ ರಾವ್ ಹಾಗೂ ಗೆಟಪ್ ಶ್ರೀನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.