ಪುತ್ತೂರು: ಅಕ್ಷಯ ಕೇರಿಯರ್ ಅಕಾಡೆಮಿಯಿಂದ 'ಎವಿಯೇಷನ್ ಕೋರ್ಸ್' ಕುರಿತ ಮಾಹಿತಿ ಕಾರ್ಯಗಾರ
Puttur: ಪುತ್ತೂರಿನ ಮನಿಷಾ ರೋಟರಿ ಸಭಾಂಗಣದಲ್ಲಿ, ಅಕ್ಷಯ ಕೇರಿಯರ್ ಅಕಾಡೆಮಿ & ರೋಟರಿ ಕ್ಲಬ್ ಈಸ್ಟ್ ಸಹಯೋಗದಲ್ಲಿ 'ಎವಿಯೇಷನ್ ಕೋರ್ಸ್' ಕುರಿತು ಮಾಹಿತಿ ಕಾರ್ಯಗಾರ ಆಯೋಜಿಸಲಾಗಿತ್ತು.
ಪುತ್ತೂರು: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬೆಳವಣಿಗೆಯೊಂದಿಗೆ, ಎವಿಯೇಷನ್ ಕ್ಷೇತ್ರದಲ್ಲಿ ಉತ್ತಮ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ವಿದ್ಯಾರ್ಥಿಗಳು ಇಂತಹ ವೃತ್ತಿಪರ ಕೋರ್ಸ್‌ಗಳ ಸದುಪಯೋಗ ಪಡೆದು, ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಅಕ್ಷಯ ಕಾಲೇಜಿನ ಚೇರ್ಮನ್ ಜಯಂತ್ ನಡುಬೈಲು ಹೇಳಿದರು.
ಇಲ್ಲಿನ ಮನಿಷಾ ರೋಟರಿ ಸಭಾಂಗಣದಲ್ಲಿ, ಅಕ್ಷಯ ಕೇರಿಯರ್ ಅಕಾಡೆಮಿ & ರೋಟರಿ ಕ್ಲಬ್ ಈಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ 'ಎವಿಯೇಷನ್ ಕೋರ್ಸ್' ಕುರಿತ ಮಾಹಿತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರೋಟರಿ ಝೋನ್-5 ಅಸಿಸ್ಟೆಂಟ್ ಗವರ್ನರ್ ಅಬ್ದುಲ್ ರಜಾಕ್ ಕಬಕಕಾರ್ಸ್ ಮಾತನಾಡಿ, ಅಕ್ಷಯ ಸಂಸ್ಥೆ ಮೂಲಕ ಈಗಾಗಲೇ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎವಿಯೇಷನ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳನ್ನು ಪೂರ್ಣಗೊಳಿಸಿ ಉದ್ಯೋಗ ಪಡೆದಿದ್ದಾರೆ. ಅಲ್ಲದೆ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೂ ಸಂಸ್ಥೆ ತರಬೇತಿ ಮತ್ತು ಮಾರ್ಗದರ್ಶನ ನೀಡುತ್ತಿದೆ ಎಂದು ತಿಳಿಸಿದರು.
ಅಕ್ಷಯ ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್, ಅತಿಥಿಗಳನ್ನು ಸ್ವಾಗತಿಸಿದರು. ರೋಟರಿ ಕ್ಲಬ್ ಈಸ್ಟ್ ಅಧ್ಯಕ್ಷ ರೊ.ರವಿಕುಮಾರ್ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಅಭಿಜ್ನಾ ಎಜುಕೇಶನ್ ಫೌಂಡೇಷನ್ ಸಂಸ್ಥಾಪಕ ಅಭಿಲಾಶ್ ಕ್ಷತ್ರಿಯ ಹಾಗೂ ಮಂಗಳೂರಿನ ಜಯಂತ್, ಕ್ಯಾರಿಯರ್ ಡೆಸ್ಟಿನಿ ಸಂಸ್ಥಾಪಕಿ ಜಯಶ್ರೀ ಸೇರಿದಂತೆ ಇತರರು ಇದ್ದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.