ಪುತ್ತೂರು: ಜುಲೈ 26ರಂದು ಬೆಟ್ಟಂಪಾಡಿಯ ಮಹಾಲಿಂಗೇಶ್ವರ ದೇಗುಲದಲ್ಲಿ ಮೃತ್ಯುಂಜಯ ಹೋಮ

Bettampady Mahalingeshwara Temple: ಜುಲೈ 26 ಭಾನುವಾರದಂದು ಲೋಕಕಲ್ಯಾಣಾರ್ಥವಾಗಿ ಮೃತ್ಯುಂಜಯ ಹೋಮ ನಡೆಯಲಿದೆ.

Jul 21, 2026 - 16:52
Jul 21, 2026 - 17:00
ಪುತ್ತೂರು: ಜುಲೈ 26ರಂದು ಬೆಟ್ಟಂಪಾಡಿಯ ಮಹಾಲಿಂಗೇಶ್ವರ ದೇಗುಲದಲ್ಲಿ ಮೃತ್ಯುಂಜಯ ಹೋಮ

ಪುತ್ತೂರು: ಬೆಟ್ಟಂಪಾಡಿಯ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಜುಲೈ 26 ಭಾನುವಾರದಂದು ಲೋಕಕಲ್ಯಾಣಾರ್ಥವಾಗಿ ಮೃತ್ಯುಂಜಯ ಹೋಮ ಹಾಗೂ ಭಕ್ತರಿಂದ ಲಕ್ಷ ಶಿವ ಪಂಚಾಕ್ಷರಿ ಮಂತ್ರ ಪಠಣ ಯಜ್ಞ ನಡೆಯಲಿದೆ. ಅಂದು ಬೆಳಗ್ಗೆ 9 ಗಂಟೆ ಪೂಜಾ ಕಾರ್ಯಕ್ರಮಗಳು ಶುರುವಾಗಲಿವೆ.

ಪರಮಶಿವನಿಗೆ ಅತ್ಯಂತ ಪ್ರಿಯವಾದ ಈ ಹೋಮವು ಮೃತ್ಯುವನ್ನು ಜಯಿಸುವ ಸಂಕೇತವಾಗಿದೆ. ಧೈರ್ಯ, ಭಕ್ತಿ, ಆರೋಗ್ಯ, ಸ್ಥಿರ ಮನಸ್ಸು ಹಾಗೂ ಮನಃಶಾಂತಿಯನ್ನು ನೀಡುತ್ತದೆ. ಇದು ಕೇವಲ ವೈಯಕ್ತಿಕ ಕ್ಷೇಮಕ್ಕಲ್ಲ. ಬದಲಾಗಿ ಕುಟುಂಬದ ಸುಖ-ಶಾಂತಿ, ಸಮಾಜದ ಐಕ್ಯತೆ ಹಾಗೂ ದೇಶದ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆಯಾಗಿದೆ. 

ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರವು ಪರಮಶಿವನ ಹೃದಯ ಮಂತ್ರ. 'ನ ಮ ಶಿ ವಾ ಯ' ಎಂಬ ಐದು ಅಕ್ಷರಗಳು ಪಂಚಭೂತಗಳ ಸಂಕೇತ, ಮನಸ್ಸನ್ನು ಶುದ್ಧಿಗೊಳಿಸಿ ಅಹಂಕಾರವನ್ನು ಕರಗಿಸಿ, ಭಕ್ತಿಯನ್ನು ಬೆಳೆಸುತ್ತದೆ. 

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಆಗಮಿಸಿ, ಹೋಮದಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನ ಆಡಳಿತ ಮಂಡಳಿಯು ಕೋರಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.