ಕ್ರಿಕೆಟ್ ಕ್ಲಬ್​ನಲ್ಲಿ ಧಾರ್ಮಿಕ ಚುಟುವಟಿಕೆ: ಟೀಮ್ ಇಂಡಿಯಾ ಆಟಗಾರ್ತಿಯ ಸದಸ್ಯತ್ವ ರದ್ದು

ಜೆಮಿಮಾ ರೊಡ್ರಿಗಸ್ ಟೀಮ್ ಇಂಡಿಯಾದ ಖಾಯಂ ಸದಸ್ಯ. ಈಗಾಗಲೇ ಭಾರತದ ಪರ 104 ಟಿ20 ಪಂದ್ಯಗಳನ್ನಾಡಿದ್ದಾರೆ. ಹಾಗೆಯೇ 30 ಏಕದಿನ ಹಾಗೂ 3 ಟೆಸ್ಟ್ ಪಂದ್ಯಗಳಲ್ಲೂ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

Oct 22, 2024 - 14:04
ಕ್ರಿಕೆಟ್ ಕ್ಲಬ್​ನಲ್ಲಿ ಧಾರ್ಮಿಕ ಚುಟುವಟಿಕೆ: ಟೀಮ್ ಇಂಡಿಯಾ ಆಟಗಾರ್ತಿಯ ಸದಸ್ಯತ್ವ ರದ್ದು

ಪ್ರತಿಷ್ಠಿತ ಖಾರ್ ಜಿಮ್​ಖಾನಾ ಕ್ಲಬ್ ಟೀಮ್ ಇಂಡಿಯಾ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಅವರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಅವರ ತಂದೆ ಖಾರ್ ಜಿಮ್​ಖಾನಾವನ್ನು ಧಾರ್ಮಿಕ ಚಟುವಟಿಕೆಗಳಿಗೆ ಬಳಿಸಿಕೊಂಡ ಗಂಭೀರ ಆರೋಪ ಕೇಳಿ ಬಂದಿದ್ದು, ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕ್ಲಬ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಬೈನ ಖ್ಯಾತ ಕ್ರಿಕೆಟ್​ ಕ್ಲಬ್​ಗಳಲ್ಲಿ ಖಾರ್ ಜಿಮ್​ಖಾನಾ ಕೂಡ ಒಂದು. ಈ ಕ್ಲಬ್​ನಲ್ಲಿ ಜೆಮಿಮಾ ರೊಡ್ರಿಗಸ್ ಸದಸ್ಯರಾಗಿದ್ದರು. ಆದರೆ ಅವರ ತಂದೆ ಇವಾನ್ ಅವರು ಈ ಸದಸ್ಯತ್ವವನ್ನು ದುರಪಯೋಗ ಪಡಿಸಿಕೊಂಡಿದ್ದಾರೆ. ಅಲ್ಲದೆ ಕ್ಲಬ್​ನ ಜಾಗವನ್ನು ಧಾರ್ಮಿಕ ಚಟುವಟಿಕೆಗಳಿಗಾಗಿ ಬಳಸುತ್ತಿದ್ದರು ಎಂದು ಆರೋಪ ಕೇಳಿ ಬಂದಿದೆ.

ಅದರಲ್ಲೂ ಜಿಮ್​ಖಾನಾ ಸ್ಥಳದಲ್ಲಿ ಮತಾಂತರದಂತಹ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಜೆಮಿಮಾ ಅವರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ.ಖಾರ್ ಜಿಮ್​ಖಾನಾ ಕ್ಲಬ್ ತನ್ನ ವಾರ್ಷಿಕ ಸಭೆಯಲ್ಲಿ ಜೆಮಿಮಾ ರೊಡ್ರಿಗಸ್ ಅವರ ಸದಸ್ಯತ್ವವನ್ನು ರದ್ದುಗೊಳಿಸಲು ನಿರ್ಧರಿಸಿದೆ. ಭಾರತೀಯ ಆಟಗಾರ್ತಿಯ ವಿರುದ್ಧ ತೆಗೆದುಕೊಂಡ ಕ್ರಮವನ್ನು ಕ್ಲಬ್ ಅಧ್ಯಕ್ಷ ವಿವೇಕ್ ದೇವ್ನಾನಿ ಕೂಡ ಖಚಿತಪಡಿಸಿದ್ದಾರೆ.ಇಂಡಿಯನ್ ಎಕ್ಸ್​ಪ್ರೆಸ್ ವರದಿ ಪ್ರಕಾರ, ಜೆಮಿಮಾಗೆ 3 ವರ್ಷಗಳ ಗೌರವ ಸದಸ್ಯತ್ವ ನೀಡಲಾಗಿತ್ತು. ಇದೀಗ ಈ ಸದಸ್ಯತ್ವವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಒಮ್ಮತದ ನಿರ್ಣಯ ಅಂಗೀಕರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕ್ಲಬ್‌ನ ಮ್ಯಾನೇಜಿಂಗ್ ಕಮಿಟಿ ಸದಸ್ಯ ಶಿವ ಮಲ್ಹೋತ್ರಾ ತಿಳಿಸಿದ್ದಾರೆ.ಜೆಮಿಮಾ ಅವರ ತಂದೆ ಇವಾನ್ ಬ್ರದರ್ ಮ್ಯಾನುಯೆಲ್ ಮಿನಿಸ್ಟ್ರೀಸ್ ಹೆಸರಿನ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದರು. ಅಲ್ಲದೆ ಅವರು ಸುಮಾರು ಒಂದೂವರೆ ವರ್ಷಗಳ ಕಾಲ ಪ್ರೆಸಿಡೆನ್ಸಿ ಹಾಲ್ ಅನ್ನು ಬುಕ್ ಮಾಡಿದ್ದರು. ಈ ಅವಧಿಯಲ್ಲಿ ಇವಾನ್ ಅವರು 35 ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮಗಳು ಧಾರ್ಮಿಕ ಚುಟುವಟಿಕೆಗಳಿಗೆ ಸಂಬಂಧಿಸಿದ್ದು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.