ದಿನ ಭವಿಷ್ಯ
11-08-2025

ಜ್ಯೋತಿರ್ಮಯ.
ಅದೃಷ್ಟ ಸಂಖ್ಯೆ 2
೧. ಮೇಷ:
ಸಪ್ತಾಹ ಆರಂಭದ ದಿನ ಶುಭದಾಯಕ. ಹಿರಿಯರ ಆರೋಗ್ಯ ಉತ್ತಮ. ಪಾಲುದಾರಿಕೆ ವ್ಯವಹಾರ ಸುಗಮ. ದೂರದ ಬಂಧುಗಳ ಆಗಮನ. ವಿದ್ಯಾರ್ಥಿಗಳು ಏಕಾಗ್ರತೆಗೆ ಪ್ರಯತ್ನಿಸಲು ಸಕಾಲ. ಗಣಪತಿ ಅಥರ್ವಶೀರ್ಷ, ಆಂಜನೇಯ ಸ್ತೋತ್ರ, ಶನಿಮಹಾತ್ಮೆ ಓದಿ.
೨. ವೃಷಭ:
ಉದ್ಯೋಗ, ವ್ಯವಹಾರಗಳಲ್ಲಿ ನಿಧಾನ, ಆದರೆ ಸ್ಥಿರವಾದ ಪ್ರಗತಿ. ಮಿತ್ರರೊಡನೆ ಮನಸ್ತಾಪಕ್ಕೆ ಎಡೆಗೊಡದಿರಿ. ವೃತ್ತಿಸಂಬಂಧ ಸಣ್ಣ ಪ್ರವಾಸ ಸಂಭವ. ಮನೆಯಲ್ಲಿ ಅನುಕೂಲದ ವಾತಾವರಣ. ಮಕ್ಕಳ ವ್ಯಾಸಂಗದಲ್ಲಿ ಪ್ರಗತಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
೩.ಮಿಥುನ:
ಆರೋಗ್ಯದ ಕಡೆಗೆ ಗಮನವಿರಲಿ. ಕಾರ್ಯ ಮುಗಿಸಲು ಆತುರ ಬೇಡ. ಕಿರಿಯರ ಭವಿಷ್ಯ ಚಿಂತನೆ. ಸಣ್ಣ ಉದ್ಯಮಿಗಳಿಗೆ ಪೂರಕ ವಾತಾವರಣ. ಅವಿವಾಹಿತರಿಗೆ ವಿವಾಹ ಯೋಗ ಸನ್ನಿಹಿತ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೪.ಕರ್ಕಾಟಕ:
ಕಲೆ, ಸಾಹಿತ್ಯ ಸಾಧಕರಿಗೆ ಶುಭದಿನ. ಉದ್ಯೋಗ, ವ್ಯವಹಾರ ರಂಗದಲ್ಲಿ ಹೊಸ ಸಾಧ್ಯತೆ. ಹಿರಿಯರ ಆರೋಗ್ಯ ಸುಧಾರಣೆ. ಗೃಹಿಣಿಯರಿಗೆ ಮನೋಲ್ಲಾಸ. ಮಕ್ಕಳ ಏಕಾಗ್ರತೆ ವೃದ್ಧಿಗೆ ಪ್ರಯತ್ನ ಅಗತ್ಯ. ಗಣೇಶ ಪಂಚರತ್ನ, ಶಿವಪಂಚಾಕ್ಷರ ಸ್ತೋತ್ರ, ದೇವೀಸ್ತೋತ್ರ ಓದಿ.
೫.ಸಿಂಹ:
ವ್ಯವಹಾರ ಕ್ಷೇತ್ರದಲ್ಲಿ ಪ್ರಗತಿ. ನಿರಂತರ ಶ್ರಮದಿಂದ ಆಯಾಸ. ಕೃಷಿ ಕ್ಷೇತ್ರದಲ್ಲಿ ಆಸಕ್ತರಿಗೆ ಶುಭ ಸಮಾಚಾರ. ಗೃಹಿಣಿಯರ ಆರೋಗ್ಯ ಗಮನಿಸಿ. ಅಧ್ಯಾಪನ ವೃತ್ತಿಯವರಿಗೆ ಶ್ರಮ. ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೬. ಕನ್ಯಾ:
ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಸ್ಥಿರ ವಾತಾವರಣ. ವಿಳಂಬಿತ ಕಾರ್ಯ ಪೂರ್ಣಗೊಳ್ಳುವ ಸಮಯ. ಧಾನ್ಯ ವ್ಯಾಪಾರಿಗಳಿಗೆ ಶುಭ. ಹಿರಿಯರು, ಮಹಿಳೆಯರು, ಮಕ್ಕಳಿಗೆ ಲವಲವಿಕೆ. ಗಣಪತಿ ಅಥರ್ವಶೀರ್ಷ, ಶಿವಕವಚ, ಮಹಾಲಕ್ಷ್ಮಿ ಅಷ್ಟಕ ಓದಿ.
೭. ತುಲಾ:
ಬಹುದಿನಗಳ ಅಪೇಕ್ಷೆ ಈಡೇರಿಕೆ. ತೃಪ್ತಿಯಿಂದ ಕಾಲುಚಾಚಿ ಕೂರುವ ಸಮಯ ಅಲ್ಲ. ದಂಪತಿಗಳ ನಡುವೆ ಹೊಂದಾಣಿಕೆ. ಅಧಿಕಾರಿ ವರ್ಗಕ್ಕೆ ಹೆಚ್ಚು ಹೊಣೆಗಾರಿಕೆ. ಮಕ್ಕಳಿಂದ ಸಂತಸ.ಗಣಪತಿ ಅಥರ್ವಶೀರ್ಷ, ಶಿವಸಹಸ್ರನಾಮ, ಶನಿಸ್ತೋತ್ರ ಓದಿ.
೮.ವೃಶ್ಚಿಕ:
ಅನ್ಯಾಯಕ್ಕೆ ಪ್ರತಿ ಅನ್ಯಾಯ ಬೇಡ. ತಾಳ್ಮೆಯಿಂದ ಹಿರಿಯರ ಒಲವು, ಪ್ರೋತ್ಸಾಹ ಲಭ್ಯ. ದಕ್ಷಿಣ ದಿಕ್ಕಿನಲ್ಲಿ ಪಯಣ ಸಂಭವ. ಹಿರಿಯರ ಆರೋಗ್ಯ ಉತ್ತಮ. ಆವಶ್ಯಕತೆಗೆ ಸರಿಯಾಗಿ ನೆರೆಯವರ ಸಹಕಾರ. ಗಣೇಶ ಕವಚ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೯.ಧನು:
ಅನಿರೀಕ್ಷಿತ ಧನಾಗಮ. ದಾಂಪತ್ಯ ಜೀವನದಲ್ಲಿ ತೃಪ್ತಿ. ಹಿರಿಯರ ಅಪೇಕ್ಷೆ ಅರಿತು ನಡೆಯುವುದರಿಂದ. ಶ್ರೇಯಸ್ಸು. ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ. ಮಕ್ಕಳಲ್ಲಿ ಏಕಾಗ್ರತೆ ಬೆಳೆಸಲು ಪ್ರಯತ್ನ. ಗಣೇಶ ಪಂಚರತ್ಕ, ಕನಕಧಾರಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೧೦.ಮಕರ:
ನೂತನ ವಸ್ತು ಖರೀದಿ ಯೋಜನೆ. ಹೊಸ ಅವಕಾಶಗಳ ಶೋಧನೆ. ಸಹೋದ್ಯೋಗಿಗಳಿಂದ ಸಹಕಾರ. ಸಾಂಸಾರಿಕ ಬಿಕ್ಕಟ್ಟು ದೂರ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಸ್ಥಿರ. ವ್ಯವಹಾರ ಸಂಬಂಧ ದಕ್ಷಿಣಕ್ಕೆ ಪ್ರಯಾಣ. ಗಣಪತಿ ಅಥರ್ವಶೀರ್ಷ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಶನಿಸ್ತೋತ್ರ ಓದಿ.
೧೧. ಕುಂಭ:
ಸಂಚಿತ ಧನ ಸದ್ವಿನಿಯೋಗ. ಸಮಾಜದಲ್ಲಿ ಗೌರವ ವೃದ್ಧಿ. ವೃತ್ತಿಪರರಿಗೆ ಸಾಮಾಜಿಕರ ಶ್ಲಾಘನೆ. ಅನಾರೋಗ್ಯದ ನಿಮಿತ್ತ ವೈದ್ಯರ ಭೇಟಿ ಸಂಭವ. ಮಾನಸಿಕ ದುಗುಡ ದೂರ. ದೂರದ ಬಂಧುಗಳ ಆಗಮನ. ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ಶನಿಮಹಾತ್ಮೆ ಓದಿ.
೧೨. ಮೀನ:
ಉದ್ಯೋಗ, ವ್ಯವಹಾರದಲ್ಲಿ ತೃಪ್ತಿ. ಹಣಕಾಸು ವ್ಯವಹಾರ ಸ್ಥಿರ. ಹಳೆಯ ಗೆಳೆಯರ ಭೇಟಿ. ಗೃಹೋಪಯೋಗಿ ಸಾಮಗ್ರಿ ಖರೀದಿ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.