ಈ ದಿನದ ರಾಶಿ ಭವಿಷ್ಯ

ರಾಶಿ ಭವಿಷ್ಯ

Nov 13, 2024 - 08:16
Feb 5, 2026 - 18:46
ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ

ದಿನ ಭವಿಷ್ಯ

               ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ  4

  1. ಮೇಷ:

   ಆತ್ಮವಿಶ್ವಾಸವಿದ್ದರೆ ಯಾವ ಹೊಣೆಗಾರಿಕೆ ನಿರ್ವಹಣೆಯೂ ಅಸಂಭವ ಅಲ್ಲ.. ಹೆಚ್ಚುವರಿ ಆದಾಯದ ಮಾರ್ಗ ಗೋಚರ.... ವಸ್ತ್ರೋದ್ಯಮ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು.  ವ್ಯವಹಾರ ಸಂಬಂಧ ಸಣ್ಣ ಪ್ರಯಾಣ. ಸಮಾಜಸೇವಾ ಕಾರ್ಯಗಳಲ್ಲಿ ಆಸಕ್ತಿ..ಗಣೇಶ ಕವಚ, ವಿಷ್ಣು ಸಹಸ್ರನಾಮ, ಆಂಜನೇಯ ಸ್ತೋತ್ರ ಓದಿ.

2. ವೃಷಭ:

ಅನವಶ್ಯ ವಿವಾದಗಳಿಗೆ ಎಡೆಗೊಡಬೇಡಿ. . ಸಾಮಾಜಿಕ ಕಾರ್ಯಗಳಿಗೆ  ಉದ್ಯಮಿಗಳ ಪ್ರೋತ್ಸಾಹ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಬಿಡುವಿಲ್ಲದ ವ್ಯಾಪಾರ. ಕೇಟರಿಂಗ್ ವ್ಯವಹಾರಸ್ಥರಿಗೆ   ಲಾಭ‌.ವ್ಯವಹಾರ ಸಂಬಂಧ  ದೂರದ ಊರಿನಿಂದ ಕರೆ..ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

3.ಮಿಥುನ:

 ಕಾರ್ಯಕ್ಷೇತ್ರದಲ್ಲಿ ಎದುರಾಗಿದ್ದ ಸಮಸ್ಯೆಗಳು ಪರಿಹಾರ.. . ಉದ್ಯಮಕ್ಕೆ ಎದುರಾದ ಸೌಲಭ್ಯಗಳ ಸಮಸ್ಯೆ ನಿವಾರಣೆಪ  ಪ್ರಾಚೀನ ವಿದ್ಯೆಗಳನ್ನು ಕಲಿಯುವ ಆಸಕ್ತಿ. ಹಿರಿಯರ ಮನೆಯಲ್ಲಿ ದೇವತಾ ಕಾರ್ಯ.ಸ್ವಾವಲಂಬಿ ಜೀವನದ ಕಡೆಗೆ ಒಲವು.ಗಣೇಶ ಅಷ್ಟಕ, ಶಿವಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

4. ಕರ್ಕಾಟಕ:
. ಮಾತು, ಕೃತಿಗಳಲ್ಲಿ ಘನತೆ ಇರಲಿ.. ಉದ್ಯಮಗಳಿಗೆ ನಿಯಮಾವಳಿಗಳ ಕಾಟ. ವ್ಯಾಪಾರಿಗಳಿಗೆ ತಕ್ಕಮಟ್ಟಿಗೆ ನೆಮ್ಮದಿ.  .ಪಾಲುದಾರಿಕೆ ವ್ಯವಹಾರದಲ್ಲಿ ಲಾಭ..ಸಣ್ಣ ಪ್ರಮಾಣದ ಕೃಷಿಕಾರ್ಯದಲ್ಲಿ ಸಂತೃಪ್ತಿ.ಗಣಪತಿ ಅಥರ್ವಶೀರ್ಷ, ಶಿವನಾಮಾವಲ್ಯಷ್ಟಕ ಆದಿತ್ಯ ಹೃದಯ ಓದಿ.


5. ಸಿಂಹ:
    ನಿಮ್ಮ ಕಾರ್ಯವೈಖರಿಯಿಂದಾಗಿ ಸರ್ವಜನಮಾನ್ಯತೆ.. ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ.ಉದ್ಯೋಗಾಸಕ್ತರಿಗೆ  ಹೊಸ ಅವಕಾಶಗಳು ಗೋಚರ. ಪಾಲುದಾರಿಕೆ ವ್ಯವಹಾರದಲ್ಲಿ ಮುನ್ನಡೆ .ಪರಿಸರ ನೈರ್ಮಲ್ಯ ಕ್ರಮಗಳ ನೇತೃತ್ವ.ಸಂಕಷ್ಟನಾಶನ ಗಣೇಶ ಸ್ತೋತ್ರ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

6. ಕನ್ಯಾ:

.ಆಹಾರ- ವಿಹಾರಗಳಲ್ಲಿ ಸಂಯಮ ಇರಲಿ.ವಾಹನ ಉದ್ಯಮಿಗಳಿಗೆ ಆದಾಯ ವೃದ್ಧಿ. ಸಟ್ಟಾ ವ್ಯವಹಾರದಿಂದ ದೂರವಿರಿ...ಪಾಲುದಾರಿಕೆ  ಉದ್ಯಮದಲ್ಲಿ  ನಿಧಾನ  ಪ್ರಗತಿ..ಹಿರಿಯರ ಆರೋಗ್ಯ ಸುಧಾರಣೆ.ಗಣೇಶ ಸ್ತೋತ್ರ, ನರಸಿಂಹ ಕವಚ, ನವಗ್ರಹ ಸ್ತೋತ್ರ ಓದಿ.

7. ತುಲಾ:

.  ದುಡಿಮೆಗೆ ತಕ್ಕ ಪ್ರತಿಫಲದ ಭರವಸೆ..ಹತ್ತಿರದ ತೀರ್ಥಕ್ಷೇತ್ರಕ್ಕೆ ಸಂದರ್ಶನ. ನೂತನ ನಿವೇಶನ ಖರೀದಿ ಮಾತುಕತೆ..ಮಹಿಳೆಯರ ನೇತೃತ್ವದ  ಉದ್ಯಮಗಳಿಗೆ ಪ್ರಚಾರ..ಸಂಸಾರದಲ್ಲಿ ಪ್ರೀತಿ, ಸಾಮರಸ್ಯದ ವಾತಾವರಣ.ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ ನವಗ್ರಹ ಸ್ತೋತ್ರ ಓದಿ.

8.ವೃಶ್ಚಿಕ:

ಸರಕಾರಿ ಉದ್ಯೋಗಿಗಳಿಗೆ ಕಿರಿಕಿರಿ.ಖಾಸಗಿ ರಂಗದವರಿಗೆ ಸಾಮಾನ್ಯ ಪರಿಸ್ಥಿತಿ. ಯಂತ್ರೋಪಕರಣ  ವ್ಯಾಪಾರಿಗಳಿಗೆ  ಅದೃಷ್ಟ. . ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ. ಮಕ್ಕಳ ಕಲಿಕೆ ಆಸಕ್ತಿ ಹೆಚ್ಚಿಸಲು ಪ್ರಯತ್ನ.ಗಣೇಶ ಕವಚ, ಶಿವನಾಮಾವಲ್ಯಷ್ಟಕ, ಮಹಾಲಕ್ಷ್ಮಿ ಅಷ್ಟಕ ಓದಿ.


9.ಧನು:

ಹೊಸ ಕಲ್ಪನೆಗಳಿಗೆ ರೂಪ ನೀಡುವ ಪ್ರಯತ್ನ...ನಿವೇಶನ  ಖರೀದಿ ಯೋಜನೆ ಮುಂದಕ್ಕೆ.ಪ  ಉದ್ಯೋಗಾಸಕ್ತ ಶಿಕ್ಷಿತರಿಗೆ ಸದವಕಾಶ.. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳಿಗೆ ಲಾಭ.. ವ್ಯವಹಾರದ ಸಂಬಂಧ ಪ್ರಮುಖ ವ್ಯಕ್ತಿಯ ಭೇಟಿ.ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

10.ಮಕರ:

 ವಸ್ತ್ರ, ಸಿದ್ಧ ಉಡುಪು,  ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಹೇರಳ ಲಾಭ.  ಕನ್ಯಾರ್ಥಿಗಳಿಗೆ ನಿರಾಶೆಯ ಸನ್ನಿವೇಶ.. ಹಳೆಯ ಒಡನಾಡಿಗಳ ಸಂಪರ್ಕ.ಮಕ್ಕಳ ಕ್ಷೇಮ ಚಿಂತನೆ. ವಿಚಾರಮಂಡನೆಯಲ್ಲಿ ಸ್ಪಷ್ಟತೆ, ಮೃದುತ್ವ ಎರಡೂ ಇರಲಿ.ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

 
11. ಕುಂಭ:.
 ಎಳೆಯರ ಒಡೆತನದ ಘಟಕದ ನೇತೃತ್ವ ವಹಿಸಲು ಆಹ್ವಾನ.. .. . ಗ್ರಾಹಕರ ಅಪೇಕ್ಷೆಗೆ ಸರಿಯಾಗಿ ಸ್ಪಂದನ‌.. ಸಮಾಜ ಸೇವಾಕಾರ್ಯಗಳಿಗೆ  ಮತ್ತಷ್ಟು  ಅವಕಾಶಗಳು.. ಟೈಲರಿಂಗ್ ಬಲ್ಲವರಿಗೆ ಉದ್ಯೋಗಾವಕಾಶ.ದೇವತಾ ಕಾರ್ಯದಲ್ಲಿ ಭಾಗಿ..
ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

12. ಮೀನ:

 . ಉದ್ಯೋಗ ಸ್ಥಾನದಲ್ಲಿ ಕೊಂಚ ವ್ಯತ್ಯಾಸ.  ..ಸರಕಾರಿ ಕಾರ್ಯಾಲಯಗಳಲ್ಲಿ ಸಾಮಾನ್ಯ ಅನುಭವ..   ಭವಿಷ್ಯದ ಯೋಜನೆಗಳ ಅನುಷ್ಠಾನಕ್ಕೆ ಕಾಲ ಸನ್ನಿಹಿತ. ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಹೊಣೆಗಾರಿಕೆ.. ವ್ಯವಹಾರ ಸಂಬಂಧ ದೂರ ಪ್ರಯಾಣ.ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿ ಸ್ತೋತ್ರ ಓದಿ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.