Today Gold Price: ಸಿಹಿಸುದ್ದಿ.. ಚಿನ್ನದ ದರ ಇಳಿಕೆ
Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಬುಧವಾರ) ಚಿನ್ನ ಹಾಗೂ ಬೆಳ್ಳಿ ದರವು ಕಡಿಮೆಯಾಗಿದೆ.
ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬ ಸಮೀಪಿಸುತ್ತಿದ್ದು, ಆಷಾಢದಲ್ಲಿ ಏರಿಕೆಯಾಗಿದ್ದ ಆಭರಣದ ದರವು ಇಳಿಕೆಯಾಗುತ್ತಿದೆ. ಚಿನಿವಾರ ಪೇಟೆಯಲ್ಲಿ ಇಂದು (ಬುಧವಾರ) ಚಿನ್ನ ಹಾಗೂ ಬೆಳ್ಳಿ ದರವು ಕಡಿಮೆಯಾಗಿದೆ.
ರಾಜ್ಯದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.920 ಇಳಿಕೆಯಾಗಿ ರೂ.1,54,970 ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.850 ಕಡಿಮೆಯಾಗಿ ರೂ.1,42,050ಕ್ಕೆ ತಲುಪಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.690 ಇಳಿಕೆಯಾಗಿ ರೂ.1,16,230 ಆಗಿದೆ.
ಅದೇ ರೀತಿಯಲ್ಲಿ 1 ಕೆಜಿ ಬೆಳ್ಳಿ ಬೆಲೆಯು ರೂ.5,000 ಕಡಿಮೆಯಾಗಿ ರೂ.2,45,000 ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ.
ಷೇರುಪೇಟೆ: ಆರಂಭಿಕ ವಹಿವಾಟು ಕುಸಿತ:
ಭಾರತದ ಶೇರುಪೇಟೆ ಆರಂಭಿಕ ವಹಿವಾಟು ನಕಾರಾತ್ಮಕವಾಗಿದೆ. ಸೆನ್ಸೆಕ್ಸ್ 320.83 ಅಂಕಗಳು ಅಥವಾ ಶೇಕಡ 0.42% ಇಳಿಕೆಯಾಗಿ 76,914.63 ಅಂಕಗಳಿಗೆ ತಲುಪಿದೆ. ನಿಫ್ಟಿ 100 ಅಂಕಗಳು ಅಥವಾ ಶೇಕಡ 0.41 ಕುಸಿತವಾಗಿ 24,054.90 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.
ಹೆಚ್‌ಸಿಎಲ್ ಟೆಕ್, ಇನ್ಫೋಸಿಸ್, ಎಟರ್ನಲ್, ಸನ್ ಫಾರ್ಮಾ ಹಾಗೂ ಟೆಕ್ ಮಹೀಂದ್ರಾ ಷೇರುಗಳು ಲಾಭದಲ್ಲಿವೆ. ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್, ಟಾಟಾ ಸ್ಟೀಲ್, ಎಂ&ಎಂ ಮತ್ತು ಎಲ್&ಟಿ ಷೇರುಗಳು ನಷ್ಟದಲ್ಲಿವೆ.