ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ
ದಿನ ಭವಿಷ್ಯ
ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 1
1. ಮೇಷ:
ಉದ್ಯೋಗ ಸ್ಥಾನದಲ್ಲಿ ಉತ್ಸಾಹದ ಅನುಭವ. ಉದ್ಯಮರಂಗದಲ್ಲಿ ಹೊಸ ವ್ಯವಸ್ಥೆಗಳು.ಅವಿವಾಹಿತ ಹುಡುಗರಿಗೆ ವಿವಾಹ ಯೋಗ. ವ್ಯವಹಾರ ಸಂಬಂಧ ತಿರುಗಾಟ.ಹಿರಿಯರು ಮತ್ತು ಗೃಹಿಣಿಯರಿಗೆ ಉಲ್ಲಾಸ.ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
2.ವೃಷಭ:
ಉದ್ಯೋಗಾನ್ವೇಷಿಗಳಿಗೆ ಶುಭವಾರ್ತೆ. ಹಿರಿಯರ ಆರೋಗ್ಯ ಕ್ಷಿಪ್ರ ಸುಧಾರಣೆ ಎಂಜಿನಿಯರ್, ಲೆಕ್ಕ ಪರಿಶೋಧಕರು ಮೊದಲಾದ ವೃತ್ತಿಪರರ ಕ್ಷೇತ್ರ ವಿಸ್ತರಣೆ .ಗೃಹಿಣಿಯರ ಉದ್ಯಮಗಳ ಆದಾಯ ವೃದ್ಧಿ.ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಅಧಿಕ ಲಾಭ.ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಸ್ತೋತ್ರ, ಗುರುಸ್ತೋತ್ರ ಓದಿ.
3.ಮಿಥುನ:
ವಧೂವರಾನ್ವೇಷಿಗಳಿಗೆ ಶುಭ ಸೂಚನೆ. ಸ್ವತಂತ್ರ ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ. .ಸದ್ಗ್ರಂಥ ಅಧ್ಯಯನದಲ್ಲಿ ಆಸಕ್ತಿ. ಸಂಗೀತ ಶ್ರವಣ, ಸತ್ಸಂಗಗಳಲ್ಲಿ ಕಾಲಯಾಪನೆ.ಹಿರಿಯ ಸಾಧಕರ ಪರಿಚಯದಿಂದ ಲಾಭ.ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಆದಿತ್ಯ ಹೃದಯ ಓದಿ
4.ಕರ್ಕಾಟಕ:
ಹಿರಿಯ ಹಿತೈಷಿಯ ಸಲಹೆಯಿಂದ ಯಶಸ್ಸು. ಶಿಕ್ಷಿತರ ನಿರುದ್ಯೋಗ ಸಮಸ್ಯೆ ನಿವಾರಣೆ . ಗೃಹೋಪಯೋಗಿ ಸಾಮಗ್ರಿಗಳ ಖರೀದಿ.ಉದ್ಯೋಗ, ಉದ್ಯಮ ಕ್ಷೇತ್ರಗಳಲ್ಲಿ ಅನುಕೂಲ. ಯುವಜನರಿಗೆ ಕೃಷಿಯಿಂದ ಅನುಕೂಲ.ಸಂಕಷ್ಟನಾಶನ ಗಣೇಶ ಸ್ತೋತ್ರ, ವಿಷ್ಷು ಸಹಸ್ರನಾಮ, ನವಗ್ರಹ ಮಂಗಲಾಷ್ಟಕ ಸ್ತೋತ್ರ ಓದಿ.
5.ಸಿಂಹ:
ಆಯ್ದ ರಂಗಗಳಲ್ಲಿ ಯಶಸ್ಸಿನ ಅನುಭವ. ಶೇರು ವ್ಯವಹಾರದಲ್ಲಿ ಉತ್ತಮ ಲಾಭ. ಇಲಸಕಾಲಿಕ ಸ್ಪಂದನದಿಂದ ಕಾರ್ಯಗಳು ಶೀಘ್ರ ಮುಕ್ತಾಯ. ಯಂತ್ರೋಪಕರಣ ವ್ಯಾಪಾರಿಗಳಿಗೆ ಹೆಚ್ವಿನ ಲಾಭ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ. ಗಣೇಶ ಕವಚ, ಶಿವಕವಚ, ನವಗ್ರಹ ಮಂಗಲಾಷ್ಟಕ ಓದಿ.
6.ಕನ್ಯಾ:
ಸಮಾಜದಲ್ಲಿ ಗೌರವ ವೃದ್ಧಿ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಮುನ್ನಡೆ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಲೇಖನ ವ್ಯವಸಾಯ, ಸ್ವಾಧ್ಯಾಯದಲ್ಲಿ ಹೆಚ್ಚು ಆಸಕ್ತಿ.ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣುಸಹಸ್ರನಾಮ, ಮಹಾಲಕ್ಷ್ಮಿ ಅಷ್ಟಕ ಓದಿ.
7.ತುಲಾ:
ಪಂಚಮ ಶನಿಯಿಂದ ಕೊಂಚ ತೊಂದರೆ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ಲಾಭ .ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಮಾಧಾನದ ದಿನ.ಇಷ್ಟದೇವರ ಆಲಯಕ್ಕೆ ಭೇಟಿ.ವ್ಯವಹಾರ ಸಂಬಂಧ ಸಣ್ಣ ಪ್ರಯಾಣ.ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.
8.ವೃಶ್ಚಿಕ:
ವಸ್ತ್ರ, ಅಲಂಕಾರ ಸಾಮಗ್ರಿ ಖರೀದಿ ಸಂಭವ.ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಮಧ್ಯಮ ಲಾಭ. ಹಿರಿಯರ ಆರೋಗ್ಯ ಸುಧಾರಣೆ. ಗೃಹಿಣಿಯರಿಗೆ ಹರ್ಷ, ಉಲ್ಲಾಸಗಳ ದಿನ. ವಿದ್ಯಾರ್ಥಿಗಳ ಅಧ್ಯಯನಾಸಕ್ತಿ ವೃದ್ಧಿಗೆ ಅನುಕೂಲ.ಗಣೇಶ ಕವಚ, ರಾಮರಕ್ಷಾ ಸ್ತೋತ್ರ , ಲಕ್ಷ್ಮೀಸ್ತೋತ್ರ ಓದಿ.
9.ಧನು:
ಹಿರಿಯ ಅಧಿಕಾರಿಗಳಿಗೆ ನಿಶ್ಚಿಂತೆ. ಉಳಿತಾಯ ಯೋಜನೆಗಳ ಏಜೆಂಟರಿಗೆ ಆದಾಯ ವೃದ್ಧಿ.ಸಹೋದ್ಯಮದಲ್ಲಿ ನಿರೀಕ್ಷಿತ ಲಾಭ. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳಿಗೆ ಶುಭಕಾಲ. ಕೌಟುಂಬಿಕ ವಿಚಾರಕ್ಕಾಗಿ ಪ್ರಯಾಣ.ಗಣೇಶ ಅಷ್ಟಕ, ರಾಮ ಭುಜಂಗಪ್ರಯಾತ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
10.ಮಕರ:
ಕಾರ್ಯರಂಗದಲ್ಲಿ ಗೌರವಾದರ ವೃದ್ಧಿ.. .ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ. ಅಧ್ಯಾಪಕರಿಗೆ ಕೀರ್ತಿ. ದ್ರವಪದಾರ್ಥ ವ್ಯಾಪಾರಿಗಳಿಗೆ ಉತ್ತಮ ಲಾಭ.ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯ.ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.
11. ಕುಂಭ:
ಕಾರ್ಯವೈಖರಿಗೆ ಸರ್ವರ ಮೆಚ್ಚುಗೆ. ಸಮಾಜ ಸೇವೆಯಿಂದ ಜನಪ್ರಿಯತೆ ವೃದ್ಧಿ.. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಲಾಭ. ವಾಸದ ಕಟ್ಟಡ ನವೀಕರಣ ಮುಂದುವರಿಕೆ..ವ್ಯವಹಾರ ಸಂಬಂಧ ಉತ್ತರಕ್ಕೆ ಪ್ರಯಾಣ.ಗಣೇಶ ಸ್ತೋತ್ರ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಶನಿಸ್ತೋತ್ರ ಓದಿ.
12.ಮೀನ:
ಸತ್ಕಾರ್ಯಗಳಲ್ಲಿ ಪಾಲುಗೊಳ್ಳಲು ಆಹ್ವಾನ. ಮರಳಿಬಂದ ಸುಸಂದರ್ಭ ಸದುಪಯೋಗ. ಎಲ್ಲೆಡೆ ಸಕಾರಾತ್ಮಕ ಸ್ಪಂದನ. ದ್ರವ ವ್ಯಾಪಾರಿಗಳಿಗೆ ಶುಭಕಾಲ.ಗುರು, ಹಿರಿಯರ ದರ್ಶನದಿಂದ ಶುಭ. ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ನರಸಿಂಹ ಸ್ತೋತ್ರ, ಶನಿಸ್ತೋತ್ರ ಓದಿ.