ಈ ದಿನದ ರಾಶಿ ಭವಿಷ್ಯ

ರಾಶಿ ಭವಿಷ್ಯ

Jan 7, 2025 - 05:08
ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ

ದಿನ ಭವಿಷ್ಯ

              ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ 7   

1.ಮೇಷ:
ಕಾರ್ಯನಿರ್ವಹಣೆಯಲ್ಲಿ ಸ್ಥೈರ್ಯಕ್ಕೆ ಅಗ್ರಸ್ಥಾನ. ಉದ್ಯಮಿಗಳಿಗೆಸದ್ಯ ಪರಿಶ್ಥತಿ ಇರಾಳ. ಸ್ವಲ್ಪ ದೂರ ದೇಶದಲ್ಲಿರುವ ಬಂಧುಗಳಿಂದ ಶುಭ ಸಮಾಚಾರ. ಮಹಿಳಾ ಉದ್ಯಮಿಗಳಿಗೆ ಯಶಸ್ಸು. ಗೃಹೋದ್ಯಮದ ಉತ್ಪನ್ನಗಳಿಗೆ ಅಧಿಕ ಬೇಡಿಕೆ. ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ಕುಜಸ್ತೋತ್ರ ಓದಿ.


2.ವೃಷಭ:
ಉದ್ಯೋಗಸ್ಥರಿಗೆ ಹೊಸ ಸಪ್ತಾಹ ಅನುಕೂಲಕರ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಹೇರಳ ಲಾಭ. ವೃತ್ತಿಪರಿಣತರಿಗೆ  ಉದ್ಯೋಗಾವಕಾಶ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಯಂತ್ರೋಪಕರಣ ವ್ಯವಹಾರಸ್ಥರಿಗೆ ಅನುಕೂಲ. ಗಣಪತಿ ಅಥರ್ವಶೀರ್ಷ, ವಿಷ್ಣು ವಿಷ್ಣು ಸಹಸ್ರನಾಮ, ಋಣಮೋಚಕ ಮಂಗಳ ಸ್ತೋತ್ರ ಓದಿ.

3.ಮಿಥುನ:
ಯೋಜನೆಗಳನ್ನು  ತ್ವರಿತಗೊಳಿಸುವ ಪ್ರಕ್ರಿಯೆ ಆರಂಭ. ಉದ್ಯೋಗಸ್ಥರಿಗೆ ಸಮಾಧಾನ ನೀಡುವ ಬೆಳವಣಿಗೆ. ಸಂಗಾತಿಯ ಆಯ್ಕೆಯಲ್ಲಿ ಹಿರಿಯರ ಮಾತನ್ನು ಮನ್ನಿಸಿ. ಎಲ್ಲರಿಗೂ  ಉತ್ತಮ ಆರೋಗ್ಯ. ವ್ಯವಹಾರ ಸಂಬಂಧ ಗಣ್ಯವ್ಯಕ್ತಿಯ ಭೇಟಿ. ಗಣೇಶ ಪಂಚರತ್ನ ಶಿವಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


4.ಕರ್ಕಾಟಕ:
ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಸಮಾಧಾನ. ಉದ್ಯಮಗಳಿಗೆ ಸರಕಾರಿ ನೆರವು ಕಡಿತ. ಸರಕಾರಿ ಆಸ್ಪತ್ರೆಗಳ ಸುಧಾರಣೆಗೆ ಸ್ಥಳೀಯರ ಪ್ರಯತ್ನ. ಚಾರಿತ್ರ್ಯವಂತರಿಗೆ  ಕಳಂಕದ‌ ಭೀತಿ. ಮಹಿಳೆಯರ ಸ್ವೋದ್ಯೋಗ ಯೋಜನೆ ಉತ್ಪನ್ನಗಳಿಗೆ ಒಳ್ಳೆಯ ಹೆಸರು. ಗಣೇಶ ದ್ವಾದಶನಾಮ ಸ್ತೋತ್ರ, ನರಸಿಂಹ ಕವಚ, ಅನ್ನಪೂರ್ಣಾ ಸ್ತೋತ್ರ ಓದಿ.


5.ಸಿಂಹ:
ಒಂದರ ಮೇಲೊಂದು ವ್ಯವಹಾರದ ಹೊಣೆಗಾರಿಕೆ. ಉದ್ಯೋಗಸ್ಥರಿಗೆ ಘಟಕದ‌ ನೇತೃತ್ವ. ಸಮವಸ್ತ್ರ ಒದಗಿಸುವ ವ್ಯಾಪಾರಿಗಳ ವ್ಯವಹಾರ ಸುಧಾರಣೆ. ಹಿರಿಯರ  ಮನೆಯಲ್ಲಿ ದೇವತಾಕಾರ್ಯ. ಕುಟುಂಬದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

6.ಕನ್ಯಾ:
ಹೊಸ ಕಾರ್ಯಕ್ಷೇತ್ರಕ್ಕೆ ಒಗ್ಗಿಕೊಂಡ ಸಮಾಧಾನ. ಕಾರ್ಯನಿಷ್ಠೆಗೆ ಮಾಲಿಕರಿಂದ ಶ್ಲಾಘನೆ. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ. ಕುಶಲಕರ್ಮಿಗಳಿಗೆ ಉದ್ಯೋಗಕ್ಕೆ ಕರೆ. ತಿಂಡಿ, ಪಾನೀಯ ವ್ಯಾಪಾರಿಗಳಿಗೆ ಲಾಭ. ಗಣಪತಿ ಅಥರ್ವಶೀರ್ಷ, ದಕ್ಷಿಣಾಮೂರ್ತಿ ಸ್ತೋತ್ರ, ಆದಿತ್ಯ ಹೃದಯ ಓದಿ.


7.ತುಲಾ:
ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.  ಉದ್ಯಮಿಗಳಿಗೆ ಗುಣಮಟ್ಟ ಕಾಯ್ದುಕೊಳ್ಳುವ ಸವಾಲು. ಕಲಿಕೆಯಲ್ಲಿ ಲೋಪವಿರುವ ಮಕ್ಕಳಿಗೆ ಬೋಧನೆ. ಲೇವಾದೇವಿ ವ್ಯವಹಾರದಿಂದ ದೂರವಿರಿ. ನ್ಯಾಯಾಲಯ ವ್ಯವಹಾರ ರಾಜಿಯಲ್ಲಿ ಮುಕ್ತಾಯ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.

8.ವೃಶ್ಚಿಕ:
ಸದ್ಯದ ಪರಿಸ್ಥಿತಿ ಎಲ್ಲ ರೀತಿಯಲ್ಲೂ ಉತ್ತಮ. ಉದ್ಯೋಗಸ್ಥರ ಸ್ಥಾನ ಗೌರವಕ್ಕೆ ಹಾನಿಯಿಲ್ಲ. ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆಯ ಆತಂಕ. ರಾಜಕಾರಣಿಗಳಿಗೆ ಕೊಂಚ ಇಕ್ಕಟ್ಟಿನ ಪರಿಸ್ಥಿತಿ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

9.ಧನು:
ಉದ್ಯೋಗಸ್ಥರಿಗೆ ಘಟಕದ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸುವ ಹೊಣೆಗಾರಿಕೆ. ಉದ್ಯಮದ ವೈವಿಧ್ಯೀಕರಣ ಕಾರ್ಯ ಅಂತಿಮ ಹಂತಕ್ಕೆ. ಹಿರಿಯ ನಾಗರಿಕರಿಗೆ ಸರಕಾರಿ ನೆರವು ದೊರಕಿಸಲು ಸಹಾಯ. ಮಕ್ಕಳ ಪ್ರತಿಭೆ  ಬೆಳೆಸಲು ಪ್ರೋತ್ಸಾಹ. ವ್ಯವಹಾರದ ನಿಮಿತ್ತ ಹತ್ತಿರದ ಊರಿಗೆ ಪ್ರಯಾಣ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


10.ಮಕರ:
ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು‌. ಬಂಧುವರ್ಗದಲ್ಲಿ‌ ಶುಭ ಸಮಾರಂಭ. ಉದ್ಯಮಿಗಳು ಹಠಾತ್ ನಷ್ಟದಿಂದ ಪಾರು. ಗೃಹೋಪಯೋಗಿ ಸಾಧನಗಳ ಖರೀದಿಗೆ ಧನವ್ಯಯ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ತನಕ ಓದಿ.

11.ಕುಂಭ:
ನಿಲ್ಲದೆ ಸಾಗುವ ಹಲವು ಬಗೆಯ ಕೆಲಸ, ಕಾರ್ಯಗಳು. ಉದ್ಯೋಗಸ್ಥರಿಗೆ ಯಥಾರೀತಿಯ ಅನುಭವ. ಸರಕಾರಿ ನೌಕರರಿಗೆ ಕಿರಿಕಿರಿ..ಶೇರು ಮಾರುಕಟ್ಟೆಯಲ್ಲಿ‌ ಸಾಮಾನ್ಯ ಲಾಭ. ಸಂಗೀತ, ಸಾಹಿತ್ಯ ನೃತ್ಯ ಕಲಾಭ್ಯಾಸಿಗಳಿಗೆ ಸಂತಸ. ಗಣೇಶ ಅಷ್ಟಕ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಶನಿಸ್ತೋತ್ರ ಓದಿ.

12.ಮೀನ:
ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಇಲಾಖೆಯವರ ಸಹಕಾರದಿಂದ ಕಾರ್ಯಗಳು  ಯಶಸ್ವಿ. ಕೊಂಚ ಕಾಲದಿಂದ ಸೊರಗಿದ್ದ ಉದ್ಯಮ ಚೇತರಿಕೆ. ಊರಿನ ಶಿವಕ್ಷೇತ್ರಕ್ಕೆ ಭೇಟಿ. ಆಪ್ತವರ್ಗದವರ ಭೇಟಿ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.