ಸ್ವಿಗ್ಗಿ-ಜೊಮ್ಯಾಟೊ ಆಟ: ಬೆಂಗಳೂರು ಹೋಟೆಲ್‌ಗಳ ಸಂಘ ಖಡಕ್ ಎಚ್ಚರಿಕೆ!

Bengaluru Hotels Association: ಆನ್‌ಲೈನ್ ಫುಡ್ ಡೆಲಿವರಿ ದೈತ್ಯ ಸಂಸ್ಥೆಗಳಾದ ಸ್ವಿಗ್ಗಿ ಹಾಗೂ ಜೊಮ್ಯಾಟೊ ನೀತಿಯಿಂದ ಹೋಟೆಲ್ ಉದ್ಯಮಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಈ ನೀತಿಯನ್ನು ಆ.15ರೊಳಗೆ ಸರಿಪಡಿಸಬೇಕು ಎಂದು ಬೆಂಗಳೂರು ಹೋಟೆಲ್‌ಗಳ ಸಂಘ ಖಡಕ್ ಎಚ್ಚರಿಕೆ ನೀಡಿದೆ.

Jul 30, 2026 - 17:00
ಸ್ವಿಗ್ಗಿ-ಜೊಮ್ಯಾಟೊ ಆಟ: ಬೆಂಗಳೂರು ಹೋಟೆಲ್‌ಗಳ ಸಂಘ ಖಡಕ್ ಎಚ್ಚರಿಕೆ!

ಬೆಂಗಳೂರು: ಆನ್‌ಲೈನ್ ಫುಡ್ ಡೆಲಿವರಿ ದೈತ್ಯ ಸಂಸ್ಥೆಗಳಾದ ಸ್ವಿಗ್ಗಿ ಹಾಗೂ ಜೊಮ್ಯಾಟೊ ನೀತಿಯಿಂದ ಹೋಟೆಲ್ ಉದ್ಯಮಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ ಎಂದು ಬೆಂಗಳೂರು ಹೋಟೆಲ್‌ಗಳ ಸಂಘ ಆರೋಪಿಸಿದೆ.

ಈ ನೀತಿಯನ್ನು ಆ.15ರೊಳಗೆ ಸರಿಪಡಿಸದಿದ್ದರೆ, ನಗರದಲ್ಲಿ ಅವುಗಳ ಸೇವೆಯನ್ನೇ ಬಂದ್ ಮಾಡಲಾಗುತ್ತದೆ. ಇಲ್ಲವೇ, ಆ್ಯಪ್‌ಗಳನ್ನೇ ಬಹಿಷ್ಕರಿಸಲಾಗುತ್ತದೆ ಎಂದು ಸಂಘವು ಎಚ್ಚರಿಸಿದ್ದು, ಇದರಿಂದ ಗ್ರಾಹಕರು ಹಾಗೂ ಹೋಟೆಲ್ ಮಾಲೀಕರಿಬ್ಬರಿಗೂ ತೊಂದರೆಯಾಗುತ್ತಿದೆ ಎಂದು ಸಂಘ ಹೇಳಿದೆ.

ಸಂಘದ ಆರೋಪಗಳೇನು?

* ಒತ್ತಾಯದ ಆಫರ್ ಘೋಷಣೆ: ಹೋಟೆಲ್ ಮಾಲೀಕರ ಗಮನಕ್ಕೆ ತಾರದೆ, ಸ್ವಿಗ್ಗಿ ಹಾಗೂ ಜೊಮ್ಯಾಟೊ ಆ್ಯಪ್‌ಗಳಲ್ಲಿ ಆಕರ್ಷಕ ಆಫರ್‌ಗಳನ್ನು ಘೋಷಿಸಲಾಗುತ್ತದೆ. ಆ ಆಫರ್‌ನ ಹೆಚ್ಚುವರಿ ಹಣವನ್ನು ಹೋಟೆಲ್ ಮಾಲೀಕರೇ ಭರಿಸಬೇಕಾಗುತ್ತದೆ. ಇದರಿಂದ ಯಾವುದೇ ರೀತಿಯಲ್ಲಿ ಲಾಭವಾಗುತ್ತಿಲ್ಲ. 

* ಕ್ಯಾನ್ಸಲ್ ಆಹಾರದ ಹಣವಿಲ್ಲ: ಗ್ರಾಹಕರು ಆರ್ಡರ್ ಮಾಡಿ ಕ್ಯಾನ್ಸಲ್ ಮಾಡಿದರೆ, ಆ ತಿನಿಸಿನ ಹಣವನ್ನು ಕಂಪನಿ ಹೋಟೆಲ್‌ಗೆ ಕೊಡುವುದಿಲ್ಲ. ಜೊತೆಗೆ ತಿನಿಸು ವಾಪಸ್ ಬರುವುದಿಲ್ಲ. ಆ ಆಹಾರವನ್ನು ಡೆಲಿವರಿ ಬಾಯ್‌ಗಳೇ ತಿನ್ನುತ್ತಿದ್ದಾರೆ. ಇದರಿಂದ ಹೋಟೆಲ್‌ಗೆ ದುಪಟ್ಟು ನಷ್ಟವಾಗುತ್ತಿದೆ.

* ಭಾರಿ ಕಮಿಷನ್ ದೋಖಾ: ಪ್ರತಿ ಬಿಲ್ ಮೊತ್ತದಲ್ಲಿ ಶೇಕಡ 25 ರಿಂದ 30% ಕಮಿಷನ್ ಹಣವನ್ನು ಕಂಪನಿಗಳು ಕಡಿತ ಮಾಡಿಕೊಳ್ಳುತ್ತವೆ. ಜೊತೆಗೆ ಬಲವಂತವಾಗಿ ಹೋಟೆಲ್‌ಗಳಿಗೆ ಜಾಹೀರಾತು ವೆಚ್ಚಗಳನ್ನು ಹೇರಲಾಗುತ್ತಿದೆ. ಸಣ್ಣ ಹೋಟೆಲ್‌ಗಳಿಗೆ ಇದು ದೊಡ್ಡ ಹೊಡೆತವಾಗಿದೆ.

* ಗ್ರಾಹಕರಿಗೂ ವಂಚನೆ: ಆನ್‌ಲೈನ್ ಫುಡ್ ಆರ್ಡರ್‌ಗಳಿಂದ ಗ್ರಾಹಕರ ಜೇಬಿಗೂ ಕತ್ತರಿ ಬೀಳುತ್ತಿದೆ. ಹೋಟೆಲ್‌ನಲ್ಲಿ ರೂ.100 ಇರುವ ತಿನಿಸಿಗೆ ಆನ್‌ಲೈನ್‌ನಲ್ಲಿ ರೂ.150 ಪಾವತಿಸಬೇಕು. ಡೆಲಿವರಿ ಶುಲ್ಕ ಹಾಗೂ ಪ್ಯಾಕಿಂಗ್ ಶುಲ್ಕ ಪ್ರತ್ಯೇಕವಾಗಿದೆ.

ಹೀಗಾಗಿ, ಸರ್ಕಾರವು ತಕ್ಷಣ ಮಧ್ಯಪ್ರವೇಶಿಸಿ ಈ ಕಂಪನಿಗಳ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು ಎಂದು ಬೆಂಗಳೂರು ಹೋಟೆಲ್‌ಗಳ ಸಂಘ ಆಗ್ರಹಿಸಿದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.