Today Gold Price: ಇಂದು ಬಂಗಾರದ ಬೆಲೆ ಅತ್ಯಲ್ಪ ಏರಿಕೆ
Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಗುರುವಾರ) ಚಿನ್ನದ ದರವು ಅತ್ಯಲ್ಪ ಏರಿಕೆಯಾಗಿದೆ. ಆದಾಗ್ಯೂ ಪ್ಲಾಟಿನಂ ಬೆಲೆಯು ಇಳಿಕೆಯಾಗಿದ್ದು, ಬೆಳ್ಳಿ ದರ ಮಾತ್ರ ಸ್ಥಿರವಾಗಿದೆ.
ಬೆಂಗಳೂರು: ಆಷಾಡ ಮಾಸವಿದ್ದರೂ ಕೆಲವು ದಿನಗಳಿಂದ ಆಭರಣದ ಬೆಲೆಯಲ್ಲಿ ಏರಿಳಿತವಾಗುತ್ತಿದೆ. ಒಮ್ಮೆ ಕಡಿಮೆಯಾದರೆ, ಮತ್ತೊಮ್ಮೆ ಹೆಚ್ಚಾಗುತ್ತಿದೆ. ಇದರಿಂದ ಗ್ರಾಹಕರು ಗೊಂದಲಕ್ಕೆ ಒಳಗಾಗಿದ್ದಾರೆ.
ಚಿನಿವಾರ ಪೇಟೆಯಲ್ಲಿ ಇಂದು (ಗುರುವಾರ) ಚಿನ್ನದ ದರವು ಅತ್ಯಲ್ಪ ಏರಿಕೆಯಾಗಿದೆ. ಆದಾಗ್ಯೂ ಪ್ಲಾಟಿನಂ ಬೆಲೆಯು ಇಳಿಕೆಯಾಗಿದ್ದು, ಬೆಳ್ಳಿ ದರ ಮಾತ್ರ ಸ್ಥಿರವಾಗಿದೆ.
ರಾಜ್ಯದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.820 ಏರಿಕೆಯಾಗಿ ರೂ.1,44,330 ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.750 ಹೆಚ್ಚಳವಾಗಿ ರೂ.1,32,300ಕ್ಕೆ ತಲುಪಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.620 ಏರಿಕೆಯಾಗಿ ರೂ.1,08,250 ಆಗಿದೆ. 10 ಗ್ರಾಂ ಪ್ಲಾಟಿನಂ ಬೆಲೆ ಕೇವಲ ರೂ.70 ಇಳಿಕೆಯಾಗಿ ರೂ.48,840ಕ್ಕೆ ಬಂದಿದೆ. 1 ಕೆಜಿ ಬೆಳ್ಳಿ ರೂ.2,35,000 ದರದಲ್ಲಿ ಮಾರಾಟವಾಗುತ್ತಿದೆ.
ಷೇರುಪೇಟೆ: ಸಕಾರತ್ಮಕ ವಹಿವಾಟು ಆರಂಭ:
ಇಂದು ಷೇರುಪೇಟೆ ಆರಂಭಿಕ ವಹಿವಾಟು ಸಕಾರತ್ಮಕವಾಗಿದೆ. ಸೆನ್ಸೆಕ್ಸ್ 15.96 ಅಂಕಗಳು ಏರಿಕೆಯಾಗಿ 77,670.56 ಅಂಕಗಳಿಗೆ ತಲುಪಿದೆ. ನಿಫ್ಟಿ 22.25 ಅಂಕಗಳು ಹೆಚ್ಚಳವಾಗಿ 24,272.45 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.
ಯಾವ ಕಂಪನಿ ಷೇರುಗಳಿಗೆ ಲಾಭ-ನಷ್ಟ:
ಟೆಕ್ ಮಹೀಂದ್ರಾ, ಎಚ್‌ಸಿಎಲ್‌ಟೆಕ್, ಟಿಸಿಎಸ್, ಸನ್ ಫಾರ್ಮಾ ಹಾಗೂ ಮಹೀಂದ್ರಾ ಕಂಪನಿ ಷೇರುಗಳು ಲಾಭದಲ್ಲಿವೆ. ಏಷ್ಯನ್ ಪೇಂಟ್ಸ್, ಅದಾನಿ ಪೋರ್ಟ್ಸ್, ಎಟರ್ನಲ್, ಇಂಟರ್‌ಗ್ಲೋಬ್ ಏವಿಯೇಷನ್ ಮತ್ತು ಆಕ್ಸಿಸ್ ಬ್ಯಾಂಕ್ ಷೇರುಗಳು ನಷ್ಟದಲ್ಲಿವೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.