ದಿನ ಭವಿಷ್ಯ: ಜುಲೈ 27, 2026.. ಯಾವ ರಾಶಿಗೆ ಏನು ಫಲ?

Daily Horoscope: ಇಂದು (ಸೋಮವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Jul 27, 2026 - 10:02
ದಿನ ಭವಿಷ್ಯ: ಜುಲೈ 27, 2026.. ಯಾವ ರಾಶಿಗೆ ಏನು ಫಲ?

ಮೇಷ:

ಹೆಚ್ಚಿನವರಿಗೆ ಉದ್ಯೋಗಕ್ಕೆ ವಿರಾಮ.. ಸ್ಥಿರಾಸ್ತಿ ವಿಸ್ತರಣೆಗೆ ಕಾರ್ಯಯೋಜನೆ.  ಅಭಿವೃದ್ಧಿ ಕಾರ್ಯಗಳ ಅವಲೋಕನ. ಕುಟುಂಬದಲ್ಲಿ ಹರ್ಷದ ಘಟನೆ.. ಸಂಸಾರದಲ್ಲಿ ಪ್ರೀತಿ, ವಿಶ್ವಾಸ,ಸಮಾಧಾನಗಳ ವಾತಾವರಣ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಶನಿಮಹಾತ್ಮೆ ಓದಿ.

 ವೃಷಭ:

ವಾರವಿಡೀ  ಶ್ರಮದ  ಬಳಿಕ   ವಿರಾಮದ ಆನಂದ.. ದೂರ ದೇಶದಲ್ಲಿರುವ ಮಕ್ಕಳೊಡನೆ ಸಂಭಾಷಣೆ..  ಬಂಧುಗಳ ಮನೆಯಲ್ಲಿ ದೇವತಾಕಾರ್ಯ.ಆಪ್ತಮಿತ್ರನ ಹಠಾತ್ ಭೇಟಿ. ಇಷ್ಟದೇವರ ಆಲಯ  ಸಂದರ್ಶನ.ಮನೆಯಲ್ಲಿ ಪ್ರೀತಿ, ಸೌಹಾರ್ದದ ವಾತಾವರಣ...ಗಣಪತಿ ಅಥರ್ವಶೀರ್ಷ, ಹನುಮಾನ್ ಚಾಲೀಸಾ, ಆದಿತ್ಯ ಹೃದಯ ಓದಿ.

ಮಿಥುನ:

ಭಗವಂತನ ಅನುಗ್ರಹದಿಂದ  ಕ್ಷೇಮದ ಅನುಭವ.. ಉದ್ಯೋಗ ಸ್ಥಾನದ ಮಿತ್ರರ ಆಗಮನ.. ಬಾಲ್ಯದ ಒಡನಾಡಿಯ ಅನಿರೀಕ್ಷಿತ ದರ್ಶನ.ಕೃಷಿ ಭೂಮಿಗೆ ಭೇಟಿ.. ಲೇವಾದೇವಿ ವ್ಯವಹಾರ ನಿಮಗೆ ಹಿಡಿಸದು.ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಶಿವಪಂಚಾಕ್ಷರ ಸ್ತೋತ್ರ ಓದಿ.

ಕರ್ಕಾಟಕ:

ಯಾವುದೇ ಚಿಂತೆಯಿಲ್ಲದೆ ವಿರಾಮವನ್ನು  ಅನುಭವಿಸಿ.   ವಸ್ತ್ರ, ಸಿದ್ಧ ಉಡುಪು,ಪಾದರಕ್ಷೆ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ  ಕೈತುಂಬಾ  ಲಾಭ. ಕೃಷಿಯಲ್ಲಿ ಹೊಸ ಪ್ರಯೋಗ ಮುಂದುವರಿಕೆ..ಲೇವಾದೇವಿ ವ್ಯವಹಾರದಲ್ಲಿ ಹಿನ್ನಡೆ.  ಹಿರಿಯರ ಮನೆಯಲ್ಲಿ ದೇವತಾ ಕಾರ್ಯ.ಗಣೇಶ ಅಷ್ಡಕ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ಸಿಂಹ:

ಆರು ದಿನಗಳ ಸಾಧನೆಗಳ ಸಿಂಹಾವಲೋಕನ.  ಕಿರಿಯ ಸಹೋದ್ಯೋಗಿಗಳಿಂದ ಗೌರವಾರ್ಪಣೆ.  ಉದ್ಯೋಗಾಸಕ್ತ ಹುಡುಗರಿಗೆ  ಮಾರ್ಗದರ್ಶನ. ಐಟಿ ಉದ್ಯೋಗಿಗಳಿಗೆ  ಆಪ್ತಸಲಹಾ ಕಾರ್ಯಕ್ರಮ. ಹಿರಿಯರು, ಮಹಿಳೆಯರು, ಮಕ್ಕಳಿಗೆ  ಆನಂದದ  ದಿನ.ಗಣೇಶ ದ್ವಾದಶನಾಮ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಆದಿತ್ಯ ಹೃದಯ ಓದಿ.

ಕನ್ಯಾ:

ಹಿತಶತ್ರುಗಳ ಪೀಡೆಯಿಂದ ಬಿಡುಗಡೆ.. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ನೆಮ್ಮದಿ. ಹಳೆಯ ಒಡನಾಡಿಯ ಪುನರ್ಮಿಲನ..  ಕುಟುಂಬದ ಹಿರಿಯರ ಭೇಟಿ.  ದೂರದಲ್ಲಿರುವ ಕುಲದೇವರ ದೇವಾಲಯ , ನಾಗಸನ್ನಿಧಿ ಸಂದರ್ಶನ.ಗಣೇಶ ತ್ರಿಶತಿ ಸ್ತೋತ್ರ, ನರಸಿಂಹ ಕವಚ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ..

ತುಲಾ:

ನಿಯೋಜಿತ ಕಾರ್ಯಗಳು ಮುಗಿದ ತೃಪ್ತಿ.  ಸಹೋದ್ಯೋಗಿಯ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ  ಅವಿವಾಹಿತ ಹುಡುಗ- ಹುಡುಗಿಯರಿಗೆ ಶುಭಕಾಲ ಸನ್ನಿಹಿತ.ಮಕ್ಕಳ ಪ್ರತಿಭೆ ಅನಾವರಣದಿಂದ ಪೋಷಕರಿಗೆ ಹರ್ಷ.ಮಹಿಳೆಯರ ಸ್ವೋದ್ಯೋಗ ಯೋಜನೆಗೆ ನಿರೀಕ್ಷೆ ಮೀರಿದ ಯಶಸ್ಸು.ಸಂಕಷ್ಟನಾಶನ ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

ವೃಶ್ಚಿಕ:

ಭವಿಷ್ಯದ ಕಾರ್ಯಗಳ ಆಯೋಜನೆ.. ಬಂಧುವರ್ಗದಿಂದ ಶುಭವಾರ್ತೆ. ಲೇವಾದೇವಿ ವ್ಯವಹಾರದಲ್ಲಿ ಮಧ್ಯಮ ಲಾಭ. ಯಂತ್ರೋಪಕರಣ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ಮೆಕಾನಿಕ್ ವೃತ್ತಿಯವರಿಗೆ ಉದ್ಯೋಗಾವಕಾಶ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ಧನು:

ಆಂತರಿಕ ಸಾಧನೆಯಲ್ಲಿ ಪ್ರಗತಿ.. ಸಾಹಿತ್ಯ ಸಂಗೀತಾದಿ ಕಲಾಸಂಬಂಧಿ ಚಟುವಟಿಕೆಗಳಲ್ಲಿ ಆಸಕ್ತಿ.. ಹಳೆಯ ಗೆಳೆಯರ ಸಂಪರ್ಕದಿಂದ ಹರ್ಷ.ಕೃಷಿ ಚಟುವಟಿಕೆಗಳು ಪ್ರಗತಿಯಲ್ಲಿ.. ಯಂತ್ರೋಪಕರಣ ಬಿಡಿಭಾಗಗಳಿಗೆ ಅಧಿಕ ಬೇಡಿಕೆ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
 

ಮಕರ: 

ಕಾರ್ಯರಂಗದ ಒತ್ತಡಗಳಿಗೆ ಒಂದು ದಿನದ ವಿರಾಮ. ಮನೆಮಂದಿಯೊಂದಿಗೆ ದೇವತಾರಾಧನೆ...ಬಂಧುಗಳ ಮನೆಯಲ್ಲಿ ದೇವತಾ ಕಾರ್ಯ. ಟೈಲರಿಂಗ್ ವೃತ್ತಿಯವರಿಗೆ ಅನುಕೂಲ. ಬಂಧುಗಳ ಜೊತೆಯಲ್ಲಿ ದೇವಾಲಯಕ್ಕೆ ಭೇಟಿ. ಗಣಪತಿ ಅಥರ್ವಶೀರ್ಷ, ಆದಿತ್ಯ ಹೃದಯ, ಹನುಮಾನ್ ಚಾಲೀಸಾ ಓದಿ.
 
ಕುಂಭ:

ವಾರವಿಡೀ ಅವಿಶ್ರಾಂತ ದುಡಿದರೂ ದೇಹಕ್ಕೆ ವಿಶ್ರಾಂತಿ ಇಲ್ಲ....ಉತ್ಪನ್ನಗಳಿಗಾಗಿ  ಬಂದ ಬೇಡಿಕೆಗಳ ಕಡೆಗೆ ಗಮನ ಹರಿಸುವ ಅನಿವಾರ್ಯತೆ.. ಸಮಾಜ ಸೇವಾ ಕಾರ್ಯಗಳತ್ತ ಗಮನ..ಕುಲದೇವರ  ಆಲಯ ಸಂದರ್ಶನ. ಮನೆಯಲ್ಲಿ ಹಿರಿಯರು, ಸಂಗಾತಿ, ಮಕ್ಕಳಿಗೆ ಸಂಭ್ರಮ.ಗಣೇಶ ಪಂಚರತ್ನ, ದತ್ತಪಂಜರ ಸ್ತೋತ್ರ, ಶನಿಮಹಾತ್ಮೆ ಓದಿ.

ಮೀನ:

ಸಂಸಾರ,ಉದ್ಯೋಗ, ವ್ಯವಹಾರಗಳಲ್ಲಿ ಮುಳುಗಿದ  ಬಳಿಕ ಒಂದು ದಿನದ ವಿರಾಮ.ವೃತ್ತಿಬಾಂಧವರಿಂದ ಕೃತಜ್ಞತೆ ಸಲ್ಲಿಕೆ. ತಾಯಿಯ ಯೋಗಕ್ಷೇಮ ವಿಚಾರಣೆ..ಗುರುಸ್ಥಾನದಲ್ಲಿರುವ ವ್ಯಕ್ತಿಗೆ ಗೌರವ. ಮನೆಮಂದಿಯ ಆರೋಗ್ಯ ಉತ್ತಮ.ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.