ದಿನ ಭವಿಷ್ಯ: ಜುಲೈ 28, 2026.. ಯಾರಿಗೆ ಶುಭ?

Daily Horoscope: ಇಂದು (ಮಂಗಳವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Jul 28, 2026 - 09:11
Jul 28, 2026 - 15:30
ದಿನ ಭವಿಷ್ಯ: ಜುಲೈ 28, 2026.. ಯಾರಿಗೆ ಶುಭ?

ಮೇಷ:
 
ಹಲವು ಬಗೆಯ ಆನಂದಗಳ ಆಗರ ಈ. ಮಂಗಳವಾರ. ಅವಶ್ಯವುಳ್ಳವರಿಗೆ ನೆರವಾದ ಸಮಾಧಾನ. ಕುಟುಂಬದಲ್ಲಿ ಹರ್ಷೋಲ್ಲಾಸದ ಕ್ಷಣ..ಹಿರಿಯರಿಗೆ,ಗೃಹಿಣಿಯರಿಗೆ, ಮಕ್ಕಳಿಗೆ ಸಂತಸ.ಹೊಸ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿ ಜಯ.ಗಣೇಶ ಕವಚ, ವಿಷ್ಣು ಸಹಸ್ರನಾಮ,  ಶನಿಮಹಾತ್ಮೆ ಓದಿ.
 
ವೃಷಭ:
 
ನೀವು ಉತ್ತಮ ಆಯೋಜಕರೆಂದು ಸಾಬೀತಾಗುವ ಸಂದರ್ಭ .ಬೌದ್ಧಿಕ ಕೆಲಸಕ್ಕೆ ಯೋಗ್ಯ ಗೌರವ..ಹಿರಿಯರ ಆರೋಗ್ಯದತ್ತ ಗಮನವಿರಲಿ.ಸಂಪಾದನೆಯ. ಹೊಸ ಮಾರ್ಗ  ಅನ್ವೇಷಣೆ.ಮಕ್ಕಳಿಗೆ ಯೋಗ್ಯ ಮಾರ್ಗದರ್ಶನದ ವ್ಯವಸ್ಥೆ.ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
 
ಮಿಥುನ:
 
ಹೆಚ್ಚುಕಡಿಮೆ ಎಲ್ಲವೂ ಎಣಿಕೆಯಂತೆ ನಡೆಯುತ್ತದೆ.. ತಾವಾಗಿ ಒಲಿದು ಬಂದ ಅವಕಾಶಗಳ ಅವಗಣನೆ ಸಲ್ಲದು..ಉದ್ಯೋಗಾನ್ವೇಷಿಗಳಿಗೆ ಅನುಕೂಲ.. ಗೃಹಾಲಂಕಾರ ವಸ್ತುಗಳ ಖರೀದಿಗೆ ಧನವ್ಯಯ.ಸತ್ಕಾರ್ಯಕ್ಕೆ ಕೈಜೋಡಿಸಿ ಸಾರ್ಥಕ ಭಾವ.ಗಸೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ಶನಿಸ್ತೋತ್ರ ಓದಿ.
 
ಕರ್ಕಾಟಕ:
 
ಕೀರ್ತಿ ತರುವ ಹೊಣೆಗಾರಿಕೆಗಳನ್ನು ನಿರೀಕ್ಷಿಸಿ..ನಿರೀಕ್ಷಿತ ಧನ ಕೈಸೇರಿ  ನೆಮ್ಮದಿ.ನೊಂದವರಿಗೆ ಧೈರ್ಯ ತುಂಬುವ ಮಾತುಗಳು ಬರಲಿ...ಕೃಷಿಕರಿಗೆ ನೆಮ್ಮದಿ, ಸಮಾಧಾನದ ಸನ್ನಿವೇಶ ..ಸಂಸಾರದಲ್ಲಿ  ಸಾಮರಸ್ಯ, ಪ್ರೀತಿ ವೃದ್ಧಿ .ಗಣೇಶ ದ್ವಾದಶನಾಮ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
 
ಸಿಂಹ:
 
ಸದ್ಯಕ್ಕೆ ಯಾವುದೇ ಅಡಚಣೆಗಳಿಲ್ಲ.. ಪತಿ- ಪತ್ನಿಯರಿಂದ ಪರಸ್ಪರ ಸಕಾಲಿಕ ಸಹಾಯ. ಹಿರಿಯರ ಆರೋಗ್ಯ ತೃಪ್ತಿಕರ..ಮನೆಯಲ್ಲಿ ಸಂತಸದ ವಾತಾವರಣ..ವ್ಯವಹಾರ ಸಂಬಂಧ ಸಣ್ಣಪ್ರಯಾಣ ಸಂಭವ..ಗಣೇಶ ಕವಚ, ದತ್ತಪಂಜರ ಸ್ತೋತ್ರ, ಸುಬ್ರಹ್ಮಣ್ಯ ಕವಚ ಓದಿ.
 
ಕನ್ಯಾ:
 
ಹಲವು ಬಗೆಯ ಶಾರೀರಿಕ ಸುಖಗಳು..ವೃತ್ತಿಪರ ಉದ್ಯೋಗಸ್ಥರಿಗೆ ಕೊಂಚ ಕಿರಿಕಿರಿ..ಬಂಧುವರ್ಗದವರಿಗೆ ಸಹಾಯ ಮಾಡುವ ಸಂದರ್ಭ.ದಂಪತಿಗಳ ನಡುವೆ ಅನುರಾಗ ವೃದ್ಧಿ.ವಿದೇಶದಿಂದ ಬಂದ ಬಂಧುಗಳ  ಭೇಟಿ.ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಕನಕಧಾರಾ ಸ್ತೋತ್ರ ಓದಿ.
 
ತುಲಾ:
 
ಆರೋಗ್ಯದ ಕುರಿತು ಅನವಶ್ಯ ಭಯ ಬೇಡ... ವೃತ್ತಿರಂಗದಲ್ಲಿ ಸಮಯಸಾಧಕರ ಮೇಲುಗೈ...ಮನೆ ದುರಸ್ತಿಗೆ ಧನವ್ಯಯ.. ಗೃಹೋದ್ಯಮಗಳಿಗೆ  ಅನುಕೂಲದ ವಾತಾವರಣ. ಆತ್ಮಬಲ ವೃದ್ಧಿಗಾಗಿ ಯೋಗ, ಧ್ಯಾನ, ಜಪಾದಿಗಳಿಗೆ ಸಮಯ ನೀಡಿಕೆ ವಿಹಿತ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
 
ವೃಶ್ಚಿಕ:
 
ನಿಮ್ಮ ಸಾಧನೆಗಳಿಂದ  ಪಕ್ಕದವರಿಗೆ ಅಸೂಯೆ . ವ್ಯಾಪಾರಿಗಳಿಗೆ  ನಿರೀಕ್ಷೆ  ಮೀರಿದ ಲಾಭ. ಹಿರಿಯರ ಆರೋಗ್ಯ ಸ್ಥಿರ.ಗೃಹಿಣಿಯರಿಗೆ ಸಣ್ಣ ಉದ್ಯಮ ಬೆಳೆಸಲು  ಆಸಕ್ತಿ. ಮಕ್ಕಳ ಸಾಧನೆಯಿಂದ ಹರ್ಷ.ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ದತ್ತಪಂಜರ ಸ್ತೋತ್ರ, ಹನುಮತ್ಕವಚ ಓದಿ.
 
ಧನು:
 
ಪರಿಚಿತರಿಂದ ಅಯಾಚಿತ ಸಹಾಯ .ದೇವತಾರಾಧನೆಯತ್ತ ವಿಶೇಷ ಒಲವು. ವ್ಯವಹಾರಸ್ಥರಿಂದ ಹೊಸ ಸಾಧ್ಯತೆಗಳ ಹುಡುಕಾಟ.ಕಾರ್ಯ ಸಾಧನೆಗೆ ಹರ್ಷಾಚರಣೆ. ಮಕ್ಕಳ ವ್ಯಾಸಂಗದಲ್ಲಿ ಮುನ್ನಡೆ.ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ. ಓದಿ.
 
ಮಕರ: 
 
ನಿರೀಕ್ಷೆಗಿಂತ ಸುಲಭವಾಗಿ ಕಾರ್ಯಸಾಧನೆ.ವಿಳಂಬಿತ ಕಾರ್ಯ ಪೂರ್ಣವಾಗಿ ಸಮಾಧಾನ.ಹೊಸ ಜವಾಬ್ದಾರಿಗಳು ಬರುವ ಸಂಭವ.ಮನೆಯ ಎಲ್ಲ ಸದಸ್ಯರ ನಡುವೆ ಸೌಹಾರ್ದದ ಸಂಬಂಧ.ಹತ್ತಿರದ ದೇವೀಕ್ಷೇತ್ರಕ್ಕೆ ಸಂದರ್ಶನ.ಗಣೇಶ ಕವಚ, ದಾರಿದ್ರ್ಯದಹನ ಶಿವಸ್ತೋತ್ರ, ಹನುಮಾನ್ ಚಾಲೀಸಾ ಓದಿ.
 
ಕುಂಭ:
 
ಧಾರ್ಮಿಕ ಕಾರ್ಯಗಳಿಗೆ, ಜನೋಪಯೋಗಿ ಯೋಜನೆಗಳಿಗೆ ನೆರವು.. ಸಹೋದ್ಯೋಗಿಗಳ ಸಹಕಾರ, ಪ್ರೋತ್ಸಾಹ ಲಭ್ಯ.ಅನಿರೀಕ್ಷಿತ ಧನಾಗಮ ಯೋಗವಿದೆ. ಕ್ರೀಡಾಳುಗಳಿಗೆ ಹುಮ್ಮಸ್ಸಿನ ವಾತಾವರಣ. ವಿದ್ಯಾರ್ಥಿಗಳ ಪ್ರತಿಭಾ ವಿಕಸನಕ್ಕೆ ಅವಕಾಶ ಸೃಷ್ಟಿ.ಗಣೇಶ  ದ್ವಾದಶನಾಮ ಸ್ತೋತ್ರ ವಿಷ್ಣು ಸಹಸ್ರನಾಮ ಶನಿಮಹಾತ್ಮೆ ಓದಿ.
 
ಮೀನ:
 
ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಯಶಸ್ಸು ತೃಪ್ತಿಕರ. ಭೂ ವ್ಯವಹಾರ, ಕಟ್ಟಡ ನಿರ್ಮಾಣ  ವ್ಯವಹಾರಸ್ಥರಿಗೆ ಅಡಚಣೆ.ಕಾರ್ಮಿಕ ವರ್ಗದವರಿಗೆ ತಾತ್ಕಾಲಿಕ ತೊಂದರೆ ದೂರ. ಸಂಸಾರದಲ್ಲಿ ಸಹಕಾರ, ಸಂತೃಪ್ತಿಯ ವಾತಾವರಣ. ಮಕ್ಕಳ ಶೈಕ್ಷಣಿಕ ಆಸಕ್ತಿಗೆ ಪೋಷಣೆ.ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.