ಮಳೆಯಿಂದ ಜಲಾವೃತವಾಗಿದ್ದ ಯಲಹಂಕದ ಕೇಂದ್ರೀಯ ವಿಹಾರ್​ ಅಪಾರ್ಟ್​ಮೆಂಟ್​ಗೆ ಬಿಬಿಎಂಪಿ ನೋಟಿಸ್

ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್​ಮೆಂಟ್​ನ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗೆ ಬುಧವಾರ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ್ದರು.

Oct 24, 2024 - 10:19
Feb 5, 2026 - 18:36
ಮಳೆಯಿಂದ ಜಲಾವೃತವಾಗಿದ್ದ ಯಲಹಂಕದ ಕೇಂದ್ರೀಯ ವಿಹಾರ್​ ಅಪಾರ್ಟ್​ಮೆಂಟ್​ಗೆ ಬಿಬಿಎಂಪಿ ನೋಟಿಸ್

ಬೆಂಗಳೂರು: ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಯಲಹಂಕವೊಂದರಲ್ಲೇ 1 ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್​ಮೆಂಟ್​ ಜಲಾವೃತವಾಗಿ ಅಲ್ಲಿಯ ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿತ್ತು. 10 ದಿನಗಳಲ್ಲಿ 3ನೇ ಬಾರಿ ಜಲಾವೃತವಾಗಿದ್ದ ಈ ಅಪಾರ್ಟ್​ಮೆಂಟ್​ಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ.ಹೆಣ್ಣೂರು ಅವಘಡದ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಇದೀಗ ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್​ಮೆಂಟ್​ಗೆ ನೊಟೀಸ್ ಜಾರಿ ಮಾಡಿದ್ದಾರೆ. ಯಲಹಂಕ ವಲಯ ಜಂಟಿ ಆಯುಕ್ತರಿಂದ ನೊಟೀಸ್ ಜಾರಿಯಾಗಿದೆ. ಕಳೆದ 10 ದಿನದ ಅಂತರದಲ್ಲಿ ಮೂರು ಬಾರಿ ಅಪಾರ್ಟ್​ಮೆಂಟ್​ಗೆ ಜಲದಿಗ್ಭಂದನವಾಗಿತ್ತು. ಹೀಗಾಗಿ, ಈ ಅಪಾರ್ಟ್​ಮೆಂಟ್‌ ಸುತ್ತ 8 ಅಡಿ ಎತ್ತರದ ಆರ್.ಸಿ.ಸಿ. ತಡೆಗೋಡೆ ನಿರ್ಮಿಸಲು ಸೂಚನೆ ನೀಡಲಾಗಿದೆ. ಈಗಿರುವ ಕಾಂಪೌಡ್​ ಮತ್ತೆ ಕುಸಿತ ಕಾಣುತ್ತಿದೆ. ಇದರಿಂದ ಮಳೆ ನೀರು ಒಳಗೆ ನುಗ್ಗುತ್ತಿದೆ.

ಅಪಾರ್ಟ್‌ಮೆಂಟ್‌ನ ಒಳಭಾಗದಲ್ಲಿ ಶೇಖರಣೆಯಾಗುತ್ತಿರುವ ಮಳೆ ನೀರನ್ನು ಆ ಅಪಾರ್ಟ್​ಮೆಂಟ್‌ ಪೂರ್ವ ದಿಕ್ಕಿನಲ್ಲಿರುವ ರಾಜಕಾಲುವೆಗೆ ನೇರವಾಗಿ ಕಲ್ಪಿಸಿರುವುದರಿಂದ ರಾಜಕಾಲುವೆಯಲ್ಲಿ ನೀರಿನ ಮಟ್ಟ ಹೆಚ್ಚಾದ ಸಂದರ್ಭದಲ್ಲಿ ಅಪಾರ್ಟ್​ಮೆಂಟ್‌ ಒಳಭಾಗದಲ್ಲಿ ನೀರು ಶೇಖರಣೆಯಾಗುತ್ತಿದೆ. ಮಳೆ ನೀರು ರಾಜಕಾಲುವೆಗೆ ಹರಿಯದೇ ಅಪಾರ್ಟ್​ಮೆಂಟ್‌ ಒಳಭಾಗದಲ್ಲಿಯೇ ನಿಂತು ನೀರಿನ ಮಟ್ಟ ಹೆಚ್ಚಾಗುತ್ತಿರುತ್ತದೆ. ರಾಜಕಾಲುವೆಗೆ ನೇರವಾಗಿ ಸಂಪರ್ಕ ಕಲ್ಪಿಸಿರುವ ಡ್ರೈನ್ ಅನ್ನು ಮುಚ್ಚಬೇಕು. ಶೇಖರಣೆಗೊಳ್ಳುವ ಎಲ್ಲಾ ನೀರನ್ನು ಒಂದು ಕಡೆ ಶೇಖರಣೆ ಮಾಡಲು ಸಂಪ್ ನಿರ್ಮಾಣ ಮಾಡಬೇಕು. ನೀರನ್ನು ಪಂಪ್ ಮೂಲಕ ರಾಜಕಾಲುವೆಗೆ ಹರಿದು ಬಿಡಲು ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.ಸುಮಾರು 2500 ಜನರು ವಾಸವಾಗಿರುವ ಕೇಂದ್ರೀಯ ವಿಹಾರ ಅಪಾರ್ಟ್​ಮೆಂಟ್‌ ನೀರಿನಿಂದ ಆವೃತವಾಗಿದ್ದು, NDRF ಮತ್ತು SDRF ಟೀಂ ಬೋಟಿಂಗ್ ಮೂಲಕ ಕಾರ್ಯಾಚರಣೆ ಶುರು ಮಾಡಿತ್ತು. ಬೋಟ್​ನಲ್ಲಿ ಅಪಾರ್ಟ್​ಮೆಂಟ್‌ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿತ್ತು.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.