ದಿನ ಭವಿಷ್ಯ: ಜುಲೈ 22, 2026.. ಯಾವ ರಾಶಿಗೆ ಶುಭ?

Daily Horoscope: ಇಂದು ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Jul 22, 2026 - 07:17
ದಿನ ಭವಿಷ್ಯ: ಜುಲೈ 22, 2026.. ಯಾವ ರಾಶಿಗೆ ಶುಭ?

ಮೇಷ:

 ಲಘು ವ್ಯಾಯಾಮದಿಂದ ದೇಹದಾರ್ಢ್ಯ ಸಿದ್ಧಿ.. ಉದ್ಯೋಗದಲ್ಲಿ ಸ್ಥಿರವಾದ ಪ್ರಗತಿ ಸಹಚರರ ನಡುವೆ ಹೆಚ್ಚುಸೌಹಾರ್ದ.. ಉದ್ಯಮಗಳ ಆರ್ಥಿಕ ಸ್ಥಿತಿ ಸುಧಾರಣೆ. ಉತ್ಪನ್ನಗಳು ಹೆಚ್ಚು ಜನಪ್ರಿಯ..ಕೆಲವರಿಗೆ  ದಿನ ಕಳೆದಂತೆ ಇಮ್ಮಡಿಯಾದ ಉತ್ಸಾಹ.ಗಣೇಶ ಕವಚ, ವಿಷ್ಣು ಸಹಸ್ರನಾಮ,  ಶನಿಮಹಾತ್ಮೆ ಓದಿ.

ವೃಷಭ:

ಕೆಲಸಕ್ಕೆ ಅನುಕೂಲದ ವಾತಾವರಣ.. ಸ್ವಂತ ಉದ್ಯಮದಲ್ಲಿ ಲಾಭ  ಏರಿಕೆ..ವ್ಯವಹಾರ ಕ್ಷೇತ್ರ ವಿಸ್ತರಣೆಯಲ್ಲಿ ಪ್ರಗತಿ. ತಳ್ಳುಗಾಡಿ ವ್ತಾಪಾರಿಗಳಿಗೆ ಲಾಭ. ದಾಂಪತ್ಯ ಜೀವನದಲ್ಲಿ ಸೌಖ್ಯ.ಗಣೇಶ ದ್ವಾದಶನಾಮ ಸ್ತೋತ್ರ,  ವೆಂಕಟೇಶ್ವರ ಸ್ತೋತ್ರ, ನವಗ್ರಹ ಕವಚ ಓದಿ.

ಮಿಥುನ:

ಅವಕಾಶಗಳನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಿಕೊಳ್ಳುವುದೇ ಮುಖ್ಯ...  ಸ್ವಂತ ಉದ್ಯಮ ಮತ್ತೆ ಮುನ್ನಡೆ.ಧ್ಯಾನ, ಯೋಗ ಸಾಧನೆಯಲ್ಲಿ ಪ್ರಗತಿ. ರಕ್ಷಣಾ ರಂಗದಲ್ಲಿ ಸೇವೆ ಸಲ್ಲಿಸುವವರಿಗೆ ವಿಶಿಷ್ಟ ಗೌರವ .ಸಂಸಾರದಲ್ಲಿ ವಿರಸ ನಿವಾರಣೆ.ಸಂಕಷ್ಟಕ್ಕೆ ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.

ಕರ್ಕಾಟಕ:

ದೀರ್ಘಕಾಲದ ಶ್ರಮಕ್ಕೆ ಗೌರವ.ಕುಟುಂಬದಲ್ಲಿ ಸಾಮರಸ್ಯ ಸ್ಥಾಪನೆ. ಉದ್ಯಮದಲ್ಲಿ ಸಾಧಾರಣ   ಲಾಭ. ಕೃಷ್ಯುತ್ಪಾದನೆ ಮಾರಾಟದಿಂದ  ಮಧ್ಯಮ ಲಾಭ. .ಪರಿಸರ ರಕ್ಷಣೆಯ ಚಟುವಟಿಕೆಗಳಲ್ಲಿ ಆಸಕ್ತಿ. ಗಣೇಶ ಅಷ್ಟಕ, ದತ್ತಪಂಜರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ಸಿಂಹ:

ಯಾವ ವಿಘ್ನ ಬಂದರೂ ಅದು ತಾತ್ಕಾಲಿಕ... ಉದ್ಯೋಗದಲ್ಲಿ ಉನ್ನತ ಸ್ಥಾನ ಹೊಂದುವ ಪ್ರಯತ್ನ. ಸ್ವಂತ  ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಹತ್ತಿರದ ದೇವಾಲಯಕ್ಕೆಭೇಟಿ.  ಉತ್ತರ  ದಿಕ್ಕಿನಿಂದ ಶುಭ ಸಮಾಚಾರ.ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಮಹಿಣಮರ್ದಿನಿ ಸ್ತೋತ್ರ ಓದಿ.

ಕನ್ಯಾ:

ಸುತ್ತಲಿನವರು ಆಶ್ಚರ್ಯಪಡುವಷ್ಟು ಯಶಸ್ಸು. ಅಕಸ್ಮಾತ್  ಧನಪ್ರಾಪ್ತಿಯ ಸಾಧ್ಯತೆ. ಸರಕಾರಿ ಉದ್ಯೋಗಿಗಳಿಗೆ ದಿಢೀರ್  ವರ್ಗಾವಣೆ.. 
ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆಗೆ ಪ್ರಥಮ ಪ್ರಾಶಸ್ತ್ಯ.ದೂರದೃಷ್ಟಿಯ ಯೋಜನೆಯಲ್ಲಿ ಹೂಡಿಕೆಯಿಂದ ಲಾಭ..ಗಣೇಶ ತ್ರಿಶತಿ ಸ್ತೋತ್ರ ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ತುಲಾ:   
 
ದೇವರನ್ನು ಆರಾಧಿಸಲೂ ಅನುಗ್ರಹ ಬೇಕು..  ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆಯಿಂದ ಕಾರ್ಯನಿರ್ವಹಣೆ. ಆಪ್ತರಿಂದ ಸಕಾಲಿಕ ಸಲಹೆ ಹಾಗೂ ಸಹಕಾರ. ವ್ಯವಹಾರದ ಕ್ಷೇತ್ರ ವಿಸ್ತರಣೆಗೆ ವಿಘ್ನ..  ಶಕ್ತಿ ದೇವತೆಯ ಕ್ಷೇತ್ರದರ್ಶನದ ಯೋಗ.
ಗಣೇಶ ದ್ವಾದಶನಾಮ ಸ್ತೋತ್ರ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ವೃಶ್ಚಿಕ:
 
ದೈವಾನುಗ್ರಹಕ್ಕಾಗಿ ಪ್ರಾರ್ಥನೆ. ಉದ್ಯೋಗದಲ್ಲಿ ಪದೋನ್ನತಿಯ ಸೂಚನೆ.  ಸರಕಾರಿ ನೌಕರರಿಗೆ ಶುಭ 
ಸಮಾಚಾರ. ಸ್ವಂತ ಉದ್ಯಮ ವಿಸ್ತರಣೆ ಆರಂಭ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಗೋಚರ. ಗಣೇಶ ತ್ರಿಶತಿ ಸ್ತೋತ್ರ,   ನರಸಿಂಹ ಕವಚ, ಲಕ್ಷ್ಮೀಸ್ತೋತ್ರ ಓದಿ.

ಧನು:

ಸಂಗಾತಿಯ ಆರೋಗ್ಯ ಸುಧಾರಣೆ. ಹಳೆಯ ಒಡನಾಡಿಗಳ ಭೇಟಿಯಿಂದ  ನವೋತ್ಸಾಹ. ಉದ್ಯೋಗದಲ್ಲಿ ಗೌರವದ ಸ್ಥಾನ. ಆದಾಯ ಹೆಚ್ಚಳದ ಯೋಜನೆಗಳು ಮುನ್ನಡೆ. ಬಂಧುಗಳ ಮನೆಯಲ್ಲಿ ದೇವತಾಕಾರ್ಯ.ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ಮಹಾಲಕ್ಷ್ಮಿ ಅಷ್ಟಕ ಓದಕಮ

ಮಕರ:

ಕಿರಿಯ ಸಹೋದ್ಯೋಗಿಗಳಿಗೆ ಉತ್ತೇಜನ. ಸ್ತ್ರೀಯರಿಗೆ ಪತಿಗೃಹದವರಿಂದ ಸಹಾಯ.ಪರಿಸರ ರಕ್ಷಣಾ ಕಾರ್ಯದಲ್ಲಿ ಭಾಗಿ.ಕೆಲವರಿಗೆ ಅನ್ನದಾನದ ಅವಕಾಶ.  ಆಪ್ತರಿಂದ ಸಕಾಲಕ್ಕೆ ಸಹಾಯ.ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ಕುಂಭ:

ಉದ್ಯೋಗ ಕ್ಷೇತ್ರದಲ್ಲಿ ಗೌರವದ ಸ್ಥಾನ ಮುಂದುವರಿಕೆ. ಸ್ವಂತ  ಉದ್ಯಮದ ಹಿತ ಅಬಾಧಿತ. ಮುದ್ರಣ ಸಾಮಗ್ರಿ,  ಸ್ಟೇಶನರಿ ವ್ಯಾಪಾರಿಗಳಿಗೆ  ಉತ್ತಮ ಆದಾಯ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ.ತಳ್ಳುಗಾಡಿ ವ್ಯಾಪಾರಿಗಳಿಗೆ ಅನುಕೂಲ.
ಗಣಪತಿ ಅಥರ್ವಶೀರ್ಷ, ಕಾರ್ತಿಕೇಯ ಸ್ತೋತ್ರ, ಶನಿಮಹಾತ್ಮೆ ಓದಿ.

ಮೀನ:

ವಿಷ್ಣುಕ್ಷೇತ್ರ ದರ್ಶನ ಯೋಗ.ಉದ್ಯೋಗ ಸ್ಥಾನದಲ್ಲಿ ಅನುಕೂಲದ ಸ್ಥಿತಿ. ಕಮಿಶನ್ ಏಜೆಂಟರಿಗೆ   ಅನುಕೂಲದ ವಾತಾವರಣ.ಸರಕಾರಿ ಅಧಿಕಾರಿಗಳ ಉತ್ತಮ ಸ್ಪಂದನೆಯಿಂದ ಕಾರ್ಯಗಳು ನಿರ್ವಿಘ್ನ.. ಸಂಸಾರದಲ್ಲಿ ಸಂಗಾತಿಯ ಪೂರ್ಣ ಸಹಕಾರ .
ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.