ಕೋಲಾರ| ಮಳೆ, ಚಳಿಯನ್ನೂ ಲೆಕ್ಕಿಸದೇ ಚಿಕನ್ ಬಿರಿಯಾನಿಗಾಗಿ ಮುಗಿಬಿದ್ದ ಜನ

ರಾಜ್ಯಾದ್ಯಂತ ಜಡಿ ಮಳೆ  ಸುರಿದು ಚಳಿಯ ವಾತಾವಣರಣ ನಿರ್ಮಾಣವಾಗಿದ್ದರೂ ಮಳೆಯನ್ನು ಲೆಕ್ಕಿಸದೇ ಬಿಸಿಬಿಸಿ ಚಿಕನ್ ಬಿರಿಯಾನಿಗಾಗಿ ಜನ ಮುಗಿಬಿದ್ದ ಘಟನೆ ಕೋಲಾರ  ಜಿಲ್ಲೆ ಮಾಲೂರು  ಪಟ್ಟಣದಲ್ಲಿ ನಡೆದಿದೆ.

Oct 15, 2024 - 11:47
ಕೋಲಾರ| ಮಳೆ, ಚಳಿಯನ್ನೂ ಲೆಕ್ಕಿಸದೇ ಚಿಕನ್ ಬಿರಿಯಾನಿಗಾಗಿ ಮುಗಿಬಿದ್ದ ಜನ

ಕೋಲಾರ: ರಾಜ್ಯಾದ್ಯಂತ ಜಡಿ ಮಳೆ  ಸುರಿದು ಚಳಿಯ ವಾತಾವಣರಣ ನಿರ್ಮಾಣವಾಗಿದ್ದರೂ ಮಳೆಯನ್ನು ಲೆಕ್ಕಿಸದೇ ಬಿಸಿಬಿಸಿ ಚಿಕನ್ ಬಿರಿಯಾನಿಗಾಗಿ ಜನ ಮುಗಿಬಿದ್ದ ಘಟನೆ ಕೋಲಾರ  ಜಿಲ್ಲೆ ಮಾಲೂರು  ಪಟ್ಟಣದಲ್ಲಿ ನಡೆದಿದೆ.ಮಾಲೂರು ಪಕ್ಷೇತರ ಪರಾಜಿತ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ ಹುಟ್ಟುಹಬ್ಬದ ಹಿನ್ನೆಲೆ 500 ಕೆಜಿ ಚಿಕನ್ ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 4,000 ಜನರಿಗೆ ಚಿಕನ್ ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು. ಈ ಹಿನ್ನೆಲೆ ಊರಿನ ಜನರು ನಾಮುಂದು ತಾಮುಂದು ಎಂದು ಚಿಕನ್ ಬಿರಿಯಾನಿಗಾಗಿ ಪೈಪೋಟಿ ನಡೆಸಿದ್ದಾರೆ.ಬಿರಿಯಾನಿ ಪಾತ್ರೆಯ ಸುತ್ತಲೂ ಪ್ಲೇಟ್ ಹಿಡಿದು ನಿಂತು ಜನರು ಬಿರಿಯಾನಿಗಾಗಿ ಪೈಪೋಟಿ ನಡೆಸಿದ್ದಾರೆ. ಈ ವೇಳೆ ಜನರನ್ನು ನಿಯಂತ್ರಿಸಲು ಮುಖಂಡರು ಹರಸಾಹಸವೇ ಪಡಬೇಕಾಯಿತು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.