ಈ ದಿನದ ರಾಶಿ ಭವಿಷ್ಯ

ರಾಶಿ ಭವಿಷ್ಯ

Nov 16, 2024 - 08:09
Feb 5, 2026 - 18:48
ಈ ದಿನದ ರಾಶಿ ಭವಿಷ್ಯ

ದಿನ ಭವಿಷ್ಯ

ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ  7

1.ಮೇಷ:

ವಾರದ ಕೊನೆಯಲ್ಲಿ  ಹೊಸದೊಂದು ಹೊಣೆಗಾರಿಕೆ ಬರುವ ಸಾಧ್ಯತೆ.. ಹೆಚ್ಚುವರಿ ಆದಾಯದ ಮಾರ್ಗ ಗೋಚರ.... ವಸ್ತ್ರೋದ್ಯಮ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು.  ವ್ಯವಹಾರ ಸಂಬಂಧ ಉತ್ತರಕ್ಕೆ  ಪ್ರಯಾಣ.ನೊಂದವರಿಗೆ ಸಹಾಯ ಮಾಡುವ ಅವಕಾಶ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

2.ವೃಷಭ:

ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. . . ಸಾಮಾಜಿಕ ಕಾರ್ಯಗಳಿಗೆ  ಉದ್ಯಮಿಗಳ ಪ್ರೋತ್ಸಾಹ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಬಿಡುವಿಲ್ಲದ ವ್ಯಾಪಾರ. ಕೇಟರಿಂಗ್ ವ್ಯವಹಾರಸ್ಥರಿಗೆ  ಲಾಭ‌ ಹೆಚ್ಚಳ.  ಪ್ರಮುಖ ವ್ಯಕ್ತಿಯೊಡನೆ ವ್ಯವಹಾರ ಮಾತುಕತೆ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಆದಿತ್ಯ ಹೃದಯ ಓದಿ.

3.ಮಿಥುನ:

 ಪರೋಪಕಾರದಿಂದ ಸಂತೃಪ್ತಿ, ಸಮಾಧಾನ.. . ಉದ್ಯಮಕ್ಕೆ ಮೂಲ ಸೌಲಭ್ಯಗಳ ಸಮಸ್ಯೆ.  . ಹಿರಿಯರ ಮನೆಯಲ್ಲಿ ದೇವತಾ ಕಾರ್ಯ.ಪಿತ್ರಾರ್ಜಿತ  ಭೂಮಿಯಲ್ಲಿ ನೆಲೆಸುವ ನಿರ್ಧಾರ. ಎಲ್ಲರಿಗೂ ಉತ್ತಮ ಆರೋಗ್ಯ.ಗಣೇಶ ಅಷ್ಟಕ, ಶಿವ ಕವಚ, ಗುರುಸ್ತೋತ್ರ ಓದಿ. 

4.ಕರ್ಕಾಟಕ:

ನ್ಯಾಯಾಲಯದ ವ್ಯವಹಾರದಲ್ಲಿ ಜಯ. ಉದ್ಯಮಗಳಿಗೆ ನೌಕರರ ಸಮಸ್ಯೆ. ವ್ಯಾಪಾರಿಗಳಿಗೆ ಹಿತಶತ್ರುಗಳ ಬಾಧೆ..  .ಪಾಲುದಾರಿಕೆ ವ್ಯವಹಾರದಲ್ಲಿ ಲಾಭ..ಸಣ್ಣ ಪ್ರಮಾಣದ ಕೃಷಿ ಆಧಾರಿತ ಉದ್ಯಮಕ್ಕೆ ಯಶಸ್ಸು.ಗಣೇಶ ದ್ವಾದಶನಾಮ ಸ್ತೋತ್ರ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

5.ಸಿಂಹ:

ಉನ್ನತ  ಸಾಧನೆಗಾಗಿ ಸಹೋದ್ಯೋಗಿಗಳಿಂದ  ಸಮ್ಮಾನ…ವಸ್ತ್ರೋದ್ಯಮ, ಸ್ವರ್ಣೋದ್ಯಮಕ್ಕೆ ಲಾಭ..ಉದ್ಯೋಗಾಸಕ್ತರಿಗೆ  ಹೊಸ ಅವಕಾಶಗಳು ಗೋಚರ. ..ಸಾಮಾಜಿಕ ಪಿಡುಗುಗಳ ನಿವಾರಣೆಗೆ  ಚಿಂತನೆ.ಅಪರಿಚಿತ ಕ್ಷೇತ್ರದಿಂದ ಪಾಲುದಾರಿಕೆ ಪ್ರಸ್ತಾವ.ಗಣೇಶ ಸ್ತೋತ್ರ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

6.ಕನ್ಯಾ:

ಉದ್ಯೋಗ ಸ್ಥಾನದಲ್ಲಿ  ಆಹ್ಲಾದದ  ವಾತಾವರಣ.ವಾಹನ ಉದ್ಯಮಿಗಳಿಗೆ ಆದಾಯ ವೃದ್ಧಿ. ಸಟ್ಟಾ ವ್ಯವಹಾರದಲ್ಲಿ ನಷ್ಟ...ಪಾಲುದಾರಿಕೆ  ಉದ್ಯಮದಲ್ಲಿ  ಪ್ರಗತಿ..ಹಿರಿಯರ ಆರೋಗ್ಯ ಸುಧಾರಣೆ.ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ನವಗ್ರಹ ಕವಚ ಓದಿ.

7. ತುಲಾ:

ಉದ್ಯೋಗದಲ್ಲಿ ಸಂತೃಪ್ತಿಯ ವಾತಾವರಣ..ಹತ್ತಿರದ ತೀರ್ಥಕ್ಷೇತ್ರಕ್ಕೆ ಸಂದರ್ಶನ. ವಸ್ತ್ರ, ಆಭರಣ ಖರೀದಿ.ಮಹಿಳೆಯರ ನೇತೃತ್ವದ  ಉದ್ಯಮಗಳ  ಏಳಿಗೆ‌.ಸಾಮಾಜಿಕ ಸಮಾರಂಭದಲ್ಲಿ ಭಾಗಿ.ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಶನಿಸ್ತೋತ್ರ ಓದಿ.

8.ವೃಶ್ಚಿಕ:

ಉದ್ಯೋಗಿಗಳಿಗೆ ಹೆಚ್ಚು ದುಡಿಯಲು ಉತ್ತೇಜನ.. ಸರಕಾರಿ ಅಧಿಕಾರಿಗಳಿಗೆ ಆತಂಕದ ಭಾವ.…ಯಂತ್ರೋಪಕರಣ  ವ್ಯಾಪಾರಿಗಳಿಗೆ  ಅದೃಷ್ಟ. . ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ. ಮಕ್ಕಳ ಕಲಿಕೆ ಆಸಕ್ತಿ ಹೆಚ್ಚಿಸಲು ಪ್ರಯತ್ನ.ಗಣಪತಿ ಅಥರ್ವಶೀರ್ಷ, ನರಸಿಂಹ ಕವಚ, ಲಕ್ಷ್ಮೀಸ್ತೋತ್ರ ಓದಿ.

9.ಧನು:

ಸಹೋದ್ಯೋಗಿಗಳಿಂದ ಪ್ರೀತಿ,ಗೌರವದ  ವರ್ತನೆ..   ಉದ್ಯೋಗಾಸಕ್ತ ಶಿಕ್ಷಿತರಿಗೆ ಒಳ್ಳೆಯ ಅವಕಾಶಗಳು ಗೋಚರ.. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳಿಗೆ ಲಾಭ..ಕುಶಲ ಕರ್ಮಿಗಳಿಗೆ  ಉದ್ಯೋಗಾವಕಾಶ.ಆಪ್ತಮಿತ್ರನ ಸಲಹೆಯಿಂದ ಲಾಭ.ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ.

10.ಮಕರ:

 ಸಮಯಮಿತಿಯ ಕಾರ್ಯಗಳು ಮುಕ್ತಾಯ. ವಸ್ತ್ರ, ಸಿದ್ಧ ಉಡುಪು, ಆಭರಣ, ಪಾದರಕ್ಷೆ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಹೇರಳ ಲಾಭ. ಕನ್ಯಾರ್ಥಿಗಳಿಗೆ ಶುಭಸೂಚನೆ.. ಬಂಧುಗಳೊಂದಿಗೆ ಸಂಬಂಧ ಸುಧಾರಣೆ.ಮಕ್ಕಳ ಕ್ಷೇಮ ಚಿಂತನೆ. ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ ಶನಿಸ್ತೋತ್ರ ಓದಿ.

11. ಕುಂಭ:

ಉದ್ಯೋಗದಲ್ಲಿ ಹೆಚ್ಚುವರಿ ಹೊಣೆಗಾರಿಕೆಗಳು.. .. . ಗ್ರಾಹಕರ ಅಪೇಕ್ಷೆಗೆ ಸರಿಯಾಗಿ ಸ್ಪಂದನ‌.. ಸಮಾಜ ಸೇವಾಕಾರ್ಯಗಳಿಗೆ  ಮತ್ತಷ್ಟು  ಅವಕಾಶಗಳು.. ಕುಶಲ ಕರ್ಮಿಗಳಿಗೆ ಉದ್ಯೋಗಾವಕಾಶ.ಕೇಟರಿಂಗ್ ವ್ಯವಹಾರಸ್ಥರಿಗೆ ಲಾಭ.ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

12. ಮೀನ:

 ಉದ್ಯೋಗ ಸ್ಥಾನದಲ್ಲಿ ಹೊಸ ವಾತಾವರಣ‌..ಅಪೇಕ್ಷಿತ ಸಹಾಯ ಸಕಾಲದಲ್ಲಿ ಲಭ್ಯ..ಸರಕಾರಿ ಇಲಾಖೆಗಳಿಂದ ಸಹಾಯ..   ಭವಿಷ್ಯದ ಯೋಜನೆಗಳ ಅನುಷ್ಠಾನಕ್ಕೆ ಕಾಲ ಸನ್ನಿಹಿತ. ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಹೊಣೆಗಾರಿಕೆ.. ಗಣೇಶ ಕವಚ, ದೇವೀಸ್ತೋತ್ರ, ಶನಿಸ್ತೋತ್ರ ಓದಿ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.