ಈ ದಿನದ ರಾಶಿ ಭವಿಷ್ಯ

ರಾಶಿ ಭವಿಷ್ಯ

Jan 21, 2025 - 05:29
ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ

ದಿನ ಭವಿಷ್ಯ

                   ಜ್ಯೋತಿರ್ಮಯ.

ಅದೃಷ್ಟ ಸಂಖ್ಯೆ  3

1.ಮೇಷ:
ಉದ್ವೇಗ ಕಡಿಮೆಯಾದಷ್ಟು ಶೀಘ್ರ ಯಶಸ್ಸು. ಉದ್ಯೋಗ, ವ್ಯವಹಾರಗಳಲ್ಲಿ ನಿರ್ಣಾಯಕ ಹಂತ. ವಾಹನ ಚಾಲನೆಯಲ್ಲಿ ಎಚ್ಚರ. ಅಪರೂಪದ ಬಂಧುಗಳ ಭೇಟಿ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣ‌. ಗಣೇಶ ದ್ವಾದಶನಾಮ ಸ್ತೋತ್ರ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ.


2.ವೃಷಭ:
ಕಾರ್ಯಗಳು  ನಿರೀಕ್ಷೆಗಿಂತ ಹೆಚ್ಚು ಸುಲಭ. ಹಣಕಾಸು ವ್ಯವಹಾರ ಸುಗಮ. ಸರಕಾರಿ  ನೌಕರರಿಗೆ  ಕೊಂಚ ಆತಂಕ. ರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಗೃಹೋತ್ಪನ್ನ ಖಾದ್ಯ ಪದಾರ್ಥಗಳ ಮಾರಾಟ ಹೆಚ್ಚಳ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

3.ಮಿಥುನ:
ವ್ಯಾವಹಾರಿಕ ದೃಷ್ಟಿಯಿಂದ ಶುಭಕಾಲ. ಶಾರೀರಿಕ ತೊಂದರೆಗಳಿಂದ ಮುಕ್ತಿ. ಉದ್ಯೋಗಸ್ಥರಿಗೆ  ಸರ್ವವಿಧದಲ್ಲೂ ಅನುಕೂಲ. ವ್ಯವಹಾರಸ್ಥರಿಗೆ ಲಾಭ ತರುವ ದಿನ. ದೃಢವಾದ  ಆತ್ಮವಿಶ್ವಾಸದಿಂದ ಕಾರ್ಯಜಯ. ಗಣೇಶ ಕವಚ, ಶಿವ ಸಹಸ್ರನಾಮ, ಅನ್ನಪೂರ್ಣಾ ಸ್ತೋತ್ರ ಓದಿ.


4.ಕರ್ಕಾಟಕ:
ಒಟ್ಟಿನಲ್ಲಿ ಶುಭಫಲಗಳೇ ಅಧಿಕವಾಗಲಿವೆ. ಉದ್ಯೋಗಸ್ಥರಿಗೆ  ನೆಮ್ಮದಿಯ ವಾತಾವರಣ. ಪಾಲುದಾರಿಕೆ ವ್ಯವಹಾರ ಮುನ್ನಡೆ. ಕಟ್ಟಡ ನಿರ್ಮಾಣ-ಮಾರಾಟ ವ್ಯವಹಾರಸ್ಥರಿಗೆ ಉತ್ತಮ ಲಾಭ. ರಾತ್ರಿ ಪ್ರಯಾಣ ಮಾಡದಿರಿ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕವಚ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
 
5.ಸಿಂಹ:
ಆನಂದವನ್ನು ಹಂಚಿಕೊಳ್ಳುವಲ್ಲಿ ಜಿಪುಣತನ ಬೇಡ. ಸ್ವಯಂ ಉದ್ಯೋಗಸ್ಥರಿಗೆ ಲಕ್ಷ್ಮೀ ಕಟಾಕ್ಷ. ಉಡುಪು ತಯಾರಿ ಉದ್ದಿಮೆಯವರಿಗೆ ಅಪಾರ ಲಾಭ. ಗೃಹಿಣಿಯರ ಸ್ವಾವಲಂಬನೆ ಯತ್ನಕ್ಕೆ ಯಶಸ್ಸು. ಹತ್ತಿರದ  ಶಿವ ಪಾರ್ವತಿ ಕ್ಷೇತ್ರಕ್ಕೆ ಭೇಟಿ.ಗಣೇಶ ಅಷ್ಟಕ, ದಕ್ಷಿಣಾಮೂರ್ತಿ ಸ್ತೋತ್ರ, ಗುರುಸ್ತೋತ್ರ ಓದಿ.

6.ಕನ್ಯಾ:
ದೈವಾನುಗ್ರಹವಿದ್ದರೆ ಕ್ಷಣಮಾತ್ರದಲ್ಲಿ ಶ್ರೀಮಂತಿಕೆ ಸಾಧ್ಯ. ಅನಿರೀಕ್ಷಿತ ಮೂಲದಿಂದ  ಧನಪ್ರಾಪ್ತಿ.  ಉದ್ಯೋಗಸ್ಥರಿಗೆ , ಸಹೋದ್ಯೋಗಿಗಳ ಸಹಾಯ. ಉದ್ಯೋಗಾಪೇಕ್ಷಿಗಳಿಗೆ ಯೋಗ್ಯ ಅವಕಾಶ ಗೋಚರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗಣೇಶ ಕವಚ, ರಾಮ ಭುಜಂಗ ಪ್ರಯಾತ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

7.ತುಲಾ:
ದಿನವೂ ನೆನಪಿಸುವ ಗೆಳೆಯನ ಆಗಮನ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಬಗೆಯ ಕಾರ್ಯಗಳು. ನಿವೇಶನ, ಮನೆ ಖರೀದಿ- ಮಾರಾಟಗಾರರಿಗೆ ಅನುಕೂಲ. ಹಣ್ಣು, ತರಕಾರಿ ವ್ಯಾಪಾರ ತೃಪ್ತಿಕರ. ಹಿರಿಯರಿಗೆ ಉಲ್ಲಾಸದವಾತಾವರಣ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಶನಿಸ್ತೋತ್ರ ಓದಿ.


8.ವೃಶ್ಚಿಕ:
ಮಾಲಿಕ - ನೌಕರರ ನಡುವೆ  ಬಾಂಧವ್ಯ ವೃದ್ಧಿ. ಆಸ್ತಿ, ಮನೆ ದಳ್ಳಾಳಿಗಳಿಗೆ ಅನುಕೂಲ. ಲೇವಾದೇವಿ ವ್ಯವಹಾರಸ್ಥರಿಗೆ ಸಾಮಾನ್ಯ ಲಾಭ. ಚಿನ್ನ, ಬೆಳ್ಳಿ ವ್ಯಾಪಾರಿಗಳಿಗೆ  ಉತ್ತಮ ಲಾಭ. ಗಣೇಶ ಅಷ್ಟಕ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಆದಿತ್ಯ ಹೃದಯ ಓದಿ.

9.ಧನು:
ಶ್ರದ್ಧೆಯ ದುಡಿಮೆಗೆ ಸರಿಯಾಗಿ ಪ್ರತಿಫಲ. ಹೊಂದಾಣಿಕೆ, ನಿಷ್ಠೆಗಳಿಂದ ಕಾರ್ಯಸಾಧನೆ. ದಕ್ಷತೆ, ಪರಿಪೂರ್ಣತೆಗೆ ಮೇಲಧಿಕಾರಿಗಳಿಂದ ಪ್ರಶಂಸೆ. ದೇವತಾರ್ಚನೆಯಲ್ಲಿ ಆಸಕ್ತಿ. ವ್ಯವಹಾರ ಸಂಬಂಧ ಪ್ರಯಾಣ ಮುಂದೂಡಿಕೆ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.


10.ಮಕರ:
ಶೀಘ್ರಕೋಪ, ಆತಂಕಗಳನ್ನು ಬಿಟ್ಟಷ್ಟೂ ಕ್ಷೇಮ. ಉದ್ಯೋಗ ಸ್ಥಾನದಲ್ಲಿ ನೆಮ್ಮದಿ. ಪಾಲುದಾರಿಕೆ ವ್ಯವಹಾರದಲ್ಲಿ ಮುನ್ನಡೆ. ಕೆಲವು ವರ್ಗಗಳ ವ್ಯಾಪಾರಿಗಳಿಗೆ ಅಧಿಕ ಲಾಭ. ಹೆಚ್ಚಿನವರಿಗೆ ಮಿಶ್ರಫಲ ಕೊಡುವ ದಿನ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.


11.ಕುಂಭ:
ಒಬ್ಬರ ಪಾಲಿಗೇ ಹೆಚ್ಚು ಜವಾಬ್ದಾರಿಗಳು ಬರುವ ಸಾಧ್ಯತೆ. ಸಾಮಾಜಿಕ ಚಟುವಟಿಕೆಗಳ ಒತ್ತಡ. ಉದ್ಯೋಗ ರಂಗದಲ್ಲಿ ಹೆಚ್ಚು ಯಶಸ್ಸು. ಅವಿಶ್ರಾಂತ  ಚಟುವಟಿಕೆಗಳಿಂದ ಆಯಾಸ. ಗೃಹಿಣಿಯರ ಉದ್ಯಮಗಳ ಜನಪ್ರಿಯತೆ ವೃದ್ಧಿ. ಗಣೇಶ ಕವಚ, ಶಿವಕವಚ, ಆಂಜನೇಯ ಸ್ತೋತ್ರ ಓದಿ.

12.ಮೀನ:
ಇನ್ನಷ್ಟು ಹೊಣೆಗಾರಿಕೆಗಳನ್ನು ನಿರೀಕ್ಷಿಸಿರಿ. ಕಾರ್ಯಕ್ಷೇತ್ರದಲ್ಲಿ ಪ್ರಯತ್ನಕ್ಕೆ ತಕ್ಕ ಫಲ. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ವಸ್ತ್ರ, ಶೋಕಿಸಾಮಗ್ರಿ ವ್ಯಾಪಾರಿಗಳಿಗೆ ಅನುಕೂಲ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.