ದಿನ ಭವಿಷ್ಯ

15-06-2025

Jun 15, 2025 - 03:00
 ದಿನ ಭವಿಷ್ಯ


                   ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ  6.

೧. ಮೇಷ:
 ಕಷ್ಟ, ಸುಖಗಳ ಚಿಂತೆ ಬೇಡ. ಉದ್ಯೋಗ, ವ್ಯವಹಾರಗಳಿಗೆ ವಿರಾಮ.  ಕಟ್ಟಡ ನಿರ್ಮಾಣ ಕಾರ್ಯಗಳ ವೇಗ ವರ್ಧನೆ ಅಪರೂಪದ  ಬಂಧುಗಳ ಭೇಟಿ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣ‌. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರ ನಾಮ, ಶನಿಮಹಾತ್ಮೆ ಓದಿ.


೨. ವೃಷಭ:
 ನಿರೀಕ್ಷೆಗಿಂತ ಹೆಚ್ಚು ಅನುಕೂಲದ ಸನ್ನಿವೇಶ. ಹಣಕಾಸು ವ್ಯವಹಾರ ಸುಗಮ. ಸರಕಾರಿ  ನೌಕರರಿಗೆ  ಕೊಂಚ ಆತಂಕ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಗೃಹೋತ್ಪನ್ನ ಖಾದ್ಯ ಪದಾರ್ಥಗಳ ಮಾರಾಟ ಹೆಚ್ಚಳ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಸ್ತೋತ್ರ, ಗುರುಸ್ತೋತ್ರ ಓದಿ.


೩ಮಿಥುನ:
ವ್ಯಾವಹಾರಿಕ ದೃಷ್ಟಿಯಿಂದ ಶುಭಕಾಲ. ಶಾರೀರಿಕ ತೊಂದರೆಗಳಿಂದ ಮುಕ್ತಿ.  ಉದ್ಯೋಗಸ್ಥರಿಗೆ ವಿರಾಮದಿಂದ ನಿಶ್ಚಿಂತೆ.  ವ್ಯವಹಾರಸ್ಥರಿಗೆ ಅನುಕೂಲದ ದಿನ. ದೃಢವಾದ  ಆತ್ಮವಿಶ್ವಾಸದಿಂದ  ಕಾರ್ಯಜಯ. ಗಣೇಶ ಕವಚ, ರಾಮ ಭುಜಂಗಪ್ರಯಾತ ಸ್ತೋತ್ರ, ಆದಿತ್ಯ ಹೃದಯ ಓದಿ.


೪. ಕರ್ಕಾಟಕ:

 ಒಟ್ಟಿನಲ್ಲಿ ಶುಭಫಲಗಳೇ ಅಧಿಕವಾಗಲಿವೆ. ಉದ್ಯೋಗಸ್ಥರಿಗೆ   ನೆಮ್ಮದಿಯ ಅನುಭವ. ಪಾಲುದಾರಿಕೆ ವ್ಯವಹಾರ ಕುಂಠಿತ. ಕಟ್ಟಡ ನಿರ್ಮಾಣ-ಮಾರಾಟ  ವ್ಯವಹಾರಸ್ಥರಿಗೆ   ಉತ್ತಮ ಲಾಭ. ವ್ಯವಹಾರ ಸಂಬಂಧ ಸಣ್ಣ ಪ್ರವಾಸ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವಪಂಚಾಕ್ಷರ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
 


೫.ಸಿಂಹ:
ಆನಂದವನ್ನು ಹಂಚಿಕೊಂಡಷ್ಟೂ ವೃದ್ಧಿಯಾಗುತ್ತದೆ. ಸ್ವಯಂ ಉದ್ಯೋಗಸ್ಥರಿಗೆ ಲಕ್ಷ್ಮೀ ಕಟಾಕ್ಷ.  ಉಡುಪು ತಯಾರಿ ಉದ್ದಿಮೆಯವರಿಗೆ ಅಪಾರ ಲಾಭ. ಗೃಹಿಣಿಯರ ಸ್ವಾವಲಂಬನೆ ಯತ್ನಕ್ಕೆ  ಯಶಸ್ಸು. ಹತ್ತಿರದ ದೇವೀಕ್ಷೇತ್ರಕ್ಕೆ ಭೇಟಿ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

 ೬. ಕನ್ಯಾ:
ದೈವಾನುಗ್ರಹದಿಂದ ಸರ್ವವೂ ಶುಭ. ಅನಿರೀಕ್ಷಿತ ಮೂಲದಿಂದ  ಧನಪ್ರಾಪ್ತಿ.  ಉದ್ಯೋಗಸ್ಥರಿಗೆ , ಸಹೋದ್ಯೋಗಿಗಳ ಮಿಲನ. ಉದ್ಯೋಗಾಪೇಕ್ಷಿಗಳಿಗೆ ಯೋಗ್ಯ ಅವಕಾಶ ಗೋಚರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗಣೇಶ ಕವಚ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೭. ತುಲಾ:
ಬಹಳವಾಗಿ ನಿರೀಕ್ಷಿಸುತ್ತಿದ್ದ ಅತಿಥಿಯ ಆಗಮನ.  ಕಾರ್ಯಾಲಯಕ್ಕೆ ರಜೆಯಾಗಿರುವುದರಿಂದ ನಿಶ್ಚಿಂತೆ. ನಿವೇಶನ, ಮನೆ ಖರೀದಿ- ಮಾರಾಟ ವ್ಯವಹಾರಸ್ಥರಿಗೆ ಅನುಕೂಲ. ಕೃಷಿ ಉತ್ಪನ್ನ ಮಾರಾಟಗಾರರಿಗೆ  ತೃಪ್ತಿಕರ  ಲಾಭ. ಹಿರಿಯರಿಗೆ ಉಲ್ಲಾಸದ ವಾತಾವರಣ.  ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೮.ವೃಶ್ಚಿಕ:
ಹೆಚ್ಚುಕಡಿಮೆ ಎಲ್ಲವೂ ನಿರೀಕ್ಷೆಯಂತೆ ಕೈಗೂಡುತ್ತದೆ. ಮಾಲಿಕ- ನೌಕರರ ಬಾಂಧವ್ಯ ವೃದ್ಧಿ. ಆಸ್ತಿ, ಮನೆ ದಳ್ಳಾಳಿಗಳಿಗೆ ಅನುಕೂಲ. ಲೇವಾದೇವಿ ವ್ಯವಹಾರಸ್ಥರಿಗೆ  ಸಾಮಾನ್ಯ ಲಾಭ.  ಚಿನ್ನ, ಬೆಳ್ಳಿ ವ್ಯಾಪಾರಿಗಳಿಗೆ  ಉತ್ತಮ ಲಾಭ. ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ವೆಂಕಟೇಶ್ವರ ಸ್ತೋತ್ರ ಓದಿ.

೯.ಧನು:
ಸಮರ್ಪಿತ ಮನೋಭಾವದ ಕರ್ಮಕ್ಕೆ ಶುಭಫಲ. ಹೊಂದಾಣಿಕೆ,  ಕಾರ್ಯನಿಷ್ಠೆಗಳಿಂದ  ಯಶಸ್ಸು. ಕಾರ್ಯದಕ್ಷತೆಗೆ ಮೇಲಧಿಕಾರಿಗಳಿಂದ ಪ್ರಶಂಸೆ. ದೇವತಾರ್ಚನೆಯಲ್ಲಿ ಆಸಕ್ತಿ. ವ್ಯವಹಾರ ಸಂಬಂಧ ಪ್ರಯಾಣ ಸಂಭವ. ಮಕ್ಕಳ ಪ್ರತಿಭೆ ವಿಕಾಸಕ್ಕೆ ವ್ಯವಸ್ಥೆ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೧೦.ಮಕರ:
ಆತುರ, ಉದ್ವೇಗವನ್ನು ಕಡಿಮೆ ಮಾಡಿಕೊಳ್ಳಿ. ವಿರಾಮದ ಆನಂದವನ್ನು ಮುಕ್ತವಾಗಿ ಅನುಭವಿಸಿ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಲಾಭ.  ಕೆಲವು ವರ್ಗಗಳ ವ್ಯಾಪಾರಿಗಳಿಗೆ ಅಧಿಕ ಲಾಭ. ಹೆಚ್ಚಿನವರಿಗೆ ಮಿಶ್ರಫಲ ಕೊಡುವ ದಿನ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ,  ಹನುಮಾನ್‌ ಚಾಲೀಸಾ ಓದಿ.


೧೧. ಕುಂಭ:
ಸಾಮಾಜಿಕ ಚಟುವಟಿಕೆಗಳ ಒತ್ತಡ. ನಾಳೆಯ ಕೆಲಸಗಳ ಚಿಂತನೆ. ಅವಿಶ್ರಾಂತ  ಚಟುವಟಿಕೆಗಳಿಂದ ಆಯಾಸ. ಗೃಹಿಣಿಯರ ಉದ್ಯಮಗಳ ಜನಪ್ರಿಯತೆ ವೃದ್ಧಿ. ವೃದ್ಧಾಶ್ರಮ, ಅನಾಥಾಶ್ರಮಕ್ಕೆ ಭೇಟಿ. ಗಣೇಶ ಕವಚ, ನರಸಿಂಹ ಸ್ತೋತ್ರ, ಶನಿಮಹಾತ್ಮೆ  ಓದಿ.

೧೨. ಮೀನ:
ಇನ್ನಷ್ಟು ಹೊಣೆಗಾರಿಕೆಗಳನ್ನು ನಿರೀಕ್ಷಿಸಿರಿ. ಕಾರ್ಯಕ್ಷೇತ್ರದಲ್ಲಿ ಪ್ರಯತ್ನಕ್ಕೆ ತಕ್ಕ ಫಲ. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ವಸ್ತ್ರ, ಶೋಕಿಸಾಮಗ್ರಿ ವ್ಯಾಪಾರಿಗಳಿಗೆ ಅನುಕೂಲ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.