ದಿನ ಭವಿಷ್ಯ
16-09-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 7.
ಮೇಷ:
ಏಳೂವರೆ ಶನಿಯಿಂದಾಗಿ ಕೆಲವು ಕಿರಿಕಿರಿಗಳು. ಆದಾಯ ವೃದ್ಧಿಯ ಉಪಾಯಗಳೂ ಗೋಚರ. ಭೂ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು. ಅನ್ಯರಿಗೋಸ್ಕರ ತಿರುಗಾಟದ .ಸಾಧ್ಯತೆ. ರಕ್ತದಾನ ಮಾಡುವ ಅವಕಾಶ ಲಭ್ಯ. ಗಣೇಶ ಅಷ್ಟಕ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಶನಿಮಹಾತ್ಮೆ ಓದಿ.
೨.ವೃಷಭ:
ಉದ್ಯೋಗ, ವ್ಯವಹಾರಗಳಲ್ಲಿ ಸುಧಾರಣೆ. ಸಾಮಾಜಿಕ ಕಾರ್ಯಗಳಿಗೆ ಉದ್ಯಮಿಗಳ ಪ್ರೋತ್ಸಾಹ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಬಿಡುವಿಲ್ಲದ ವ್ಯಾಪಾರ. ಕೇಟರಿಂಗ್ ವ್ಯವಹಾರಸ್ಥರಿಗೆ ಲಾಭ ಹೆಚ್ಚಳ. ಪಿತೃಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
೩ಮಿಥುನ:
ಯಾಚಿಸಿದವರಿಗೆ ಮಾತ್ರ ಸಹಾಯ ಮಾಡಿ. ಉದ್ಯಮಕ್ಕೆ ಮೂಲ ಸೌಲಭ್ಯಗಳ ಸಮಸ್ಯೆ. ಹಿರಿಯರ ಮನೆಯಲ್ಲಿ ಪಿತೃ ಕಾರ್ಯ. ಕೃಷಿ ಕೈಗೊಳ್ಳುವ ಹೊಸಬರಿಗೆ ಯಶಸ್ಸು. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಋಣ ಮೋಚನ ಮಂಗಳ ಸ್ತೋತ್ರ ಓದಿ.
೪. ಕರ್ಕಾಟಕ:
ಉದ್ಯಮಗಳಿಗೆ ನೌಕರರ ಸಮಸ್ಯೆ. ವ್ಯಾಪಾರಿಗಳಿಗೆ ಹಿತಶತ್ರುಗಳ ಬಾಧೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಕೃಷಿ ಆಧಾರಿತ ಉದ್ಯಮಗಳಿಗೆ ಶುಭದಿನ. ದೂರದಲ್ಲಿರುವ ಬಂಧುವಿಗೆ ಅಸ್ವಾಸ್ಥ್ಯ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೫.ಸಿಂಹ:
ವಸ್ತ್ರೋದ್ಯಮ, ಸ್ವರ್ಣೋದ್ಯಮಕ್ಕೆ ಲಾಭ. ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ. ಸಾಮಾಜಿಕ ಪಿಡುಗುಗಳ ನಿವಾರಣೆಗೆ ಚಿಂತನೆ. ಅಪರಿಚಿತರಿಂದ ಬರುವ ವ್ಯವಹಾರ ಪ್ರಸ್ತಾವ ನಿರಾಕರಣೆ. ಸೇವಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಲಭ್ಯ. ಗಣಪತಿ ಅಥರ್ವಶೀರ್ಷ, ನರಸಿಂಹ ಕವಚ, ಲಕ್ಷ್ಮೀಸ್ತೋತ್ರ ಓದಿ.
೬.ಕನ್ಯಾ:
ಉದ್ಯೋಗ ಸ್ಥಾನದಲ್ಲಿ ಪ್ರೋತ್ಸಾಹಕರ ವಾತಾವರಣ.ವಾಹನ ಉದ್ಯಮಿಗಳಿಗೆ ಆದಾಯ ವೃದ್ಧಿ. ಸಟ್ಟಾ ವ್ಯವಹಾರದಲ್ಲಿ ನಷ್ಟ. ಪಾಲುದಾರಿಕೆ ಉದ್ಯಮದಲ್ಲಿ ಪ್ರಗತಿ. ದ್ವಿಚಕ್ರ ವಾಹನ ದುರಸ್ತಿ ಕೆಲಸದವರಿಗೆ ಆದಾಯ ವೃದ್ಧಿ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ನವಗ್ರಹ ಮಂಗಲಾಷ್ಟಕ ಓದಿ.
೭. ತುಲಾ:
ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿಯ ವಾತಾವರಣ. ಹತ್ತಿರದ ತೀರ್ಥಕ್ಷೇತ್ರಕ್ಕೆ ಸಂದರ್ಶನ. ವಸ್ತ್ರ, ಆಭರಣ ಖರೀದಿ. ಕೇಟರಿಂಗ್ ವ್ಯವಹಾರಸ್ಥರು ಗುಣಮಟ್ಟಕ್ಕೆ ಆದ್ಯತೆ ನೀಡಿರಿ. ದೇವಾಲಯ ದರ್ಶನ ಯೋಗ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.
೮.ವೃಶ್ಚಿಕ:
ಫಲಾಪೇಕ್ಷೆ ಇಲ್ಲದೆ ದುಡಿಯುವ ಸಂದರ್ಭ. ಸರಕಾರಿ ಅಧಿಕಾರಿಗಳಿಗೆ ಅಪವಾದದ ಭೀತಿ. ಯಂತ್ರೋಪಕರಣ ವ್ಯಾಪಾರಿಗಳಿಗೆ ಅದೃಷ್ಟ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ. ದ್ವಿಚಕ್ರ ವಾಹನ ಚಾಲನೆಯಲ್ಲಿ ಎಚ್ಚರ.
ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ರವಿಸ್ತೋತ್ರ ಓದಿ.
೯.ಧನು:
ಉದ್ಯೋಗಾಸಕ್ತ ಶಿಕ್ಷಿತರಿಗೆ ಒಳ್ಳೆಯ ಅವಕಾಶಗಳು ಗೋಚರ. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳಿಗೆ ಲಾಭ. ಕುಶಲ ಕರ್ಮಿಗಳಿಗೆ ಉದ್ಯೋಗಾವಕಾಶ. ಉದರದ ಆರೋಗ್ಯದ ಕಡೆಗೆ ಗಮನವಿರಲಿ. ಗತಿಸಿದ ಹಿರಿಯರ ಆಶೀರ್ವಾದ ಕೋರಿಕೆ. ಗಣೇಶ ದ್ವಾದಶನಾಮ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೧೦.ಮಕರ:
ಸಮಯಮಿತಿಯ ಕಾರ್ಯಗಳು ಮುಕ್ತಾಯ. ವಸ್ತ್ರ, ಆಭರಣ, ಪಾದರಕ್ಷೆ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ. ಸಣ್ಣ ಸಣ್ಣ ಸಮಸ್ಯೆಗಳಿಗೆ ಹೆದರದಿರಿ. ಮಕ್ಕಳ ಆರೋಗ್ಯದ ಕಡೆಗೆ ವಿಶೇಷ ಗಮನ. ಬೌದ್ಧಿಕ ಕೆಲಸ ಮಾಡುವವರಿಗೆ ಸಮಯದ ಒತ್ತಡ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೧೧. ಕುಂಭ:.
ವೃತ್ತಿ ಪರಿಣತರಾಗಲು ಕಿರಿಯರಿಗೆ ಮಾರ್ಗದರ್ಶನ. ಮುದ್ರಣ ವ್ಯವಹಾರಸ್ಥರಿಗೆ ಕೆಲಸದ ಒತ್ತಡ. ಸಮಾಜ ಸೇವಾಕಾರ್ಯಗಳಿಗೆ ಮತ್ತಷ್ಟು ಅವಕಾಶಗಳು. ಕುಶಲ ಕರ್ಮಿಗಳಿಗೆ ಉದ್ಯೋಗಾವಕಾಶ. ಕೇಟರಿಂಗ್ ವ್ಯವಹಾರಸ್ಥರಿಗೆ ಲಾಭ. ಗಣೇಶ ಕವಚ, ಶಿವಕವಚ, ಶನಿಮಹಾತ್ಮೆಓದಿ.
೧೨. ಮೀನ:
ಉದ್ಯೋಗ ಸ್ಥಾನದಲ್ಲಿ ಮಂದಗತಿಯ ಕಾರ್ಯ. ಅಪೇಕ್ಷಿತ ಸಹಾಯ ಕೊಂಚ ವಿಳಂಬ. ಸರಕಾರಿ ಇಲಾಖೆಗಳಿಂದ ಸಹಾಯ. ಭವಿಷ್ಯದ ಯೋಜನೆಗಳ ಅನುಷ್ಠಾನಕ್ಕೆ ವಿಘ್ನ. ಬೇಡ.ಕುಟುಂಬದ ನೆಮ್ಮದಿಗೆ ಹೊಸ ವ್ಯವಸ್ಥೆ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.