ದಿನ ಭವಿಷ್ಯ
01-11-2025
ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 1
೧.ಮೇಷ:
ವಾರಾಂತ್ಯದ ದಿನವೇ ಬಂದ ಕನ್ನಡ ರಾಜ್ಯೋತ್ಸವ. ಒಂದೇ ಲಕ್ಷ್ಯವನ್ನು ಸಾಧಿಸುವ ಪ್ರಯತ್ನದಲ್ಲಿ ಜಯ. ಲೇವಾದೇವಿ ವ್ಯವಹಾರದಿಂದ ದೂರವಿರಿ. ಎಲ್ಲರಿಗೂ ಆರೋಗ್ಯ ಮತ್ತು ಆನಂದದ ಅನುಭವ. ದೂರದ ಬಂಧುಗಳಿಂದ ಶುಭ ಸಮಾಚಾರ. ಗಣೇಶ ಕವಚ, ನರಸಿಂಹ ಸ್ತೋತ್ರ, ಶನಿಮಹಾತ್ಮೆ ಓದಿ.
೨.ವೃಷಭ:
ಸಂಭ್ರಮದ ಭಾವದಲ್ಲಿ ಮುಂದೆ ಸಾಗಿ. ಹೆಚ್ಚಿನವರಿಗೆ ವಿರಾಮದ ಅವಕಾಶ. ಉದ್ಯಮದಲ್ಲಿ ಕಡಿಮೆಯಾದ ಪೈಪೋಟಿ. ಒಡೆಯರ ಸದ್ಭಾವನೆಯಿಂದ ನೌಕರರಿಗೆ ಹರ್ಷ. ಮನೆಯಲ್ಲಿ ಶಾಂತಿ, ಸಂಭ್ರಮದ ವಾತಾವರಣ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
೩. ಮಿಥುನ:
ಸಂಬಂಧಗಳ ನಡುವೆ ಸಮತೋಲನ ಪಾಲನೆ. ಸುರ್ತಲಿನ ಸಂಭ್ರಮದಲ್ಲಿ ಭಾಗಿ. ಆರ್ಥಿಕ ವ್ಯವಹಾರ ಸುಧಾರಣೆ ಪಾಲುದಾರಿಕೆ ಉದ್ಯಮ ಅನುಕೂಲಕರ. ಉದ್ಯಮ ವ್ಯವಹಾರದ ಸಂಬಂಧ ಸಣ್ಣ ಪ್ರವಾಸ. ಗೃಹಿಣಿಯರ ಉದ್ಯಮ ಪ್ರಗತಿ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ.
೪.ಕರ್ಕಾಟಕ:
ಮನಸ್ಸು ಹಗುರಾದ ಅನುಭವ. ಹೊಸ ಉದ್ಯಮ ಆರಂಭಕ್ಕೆ ಚಿಂತನೆ. ಸಂಸಾರದಲ್ಲಿ ಸಾಮರಸ್ಯ. ದೇವತಾ ಕಾರ್ಯದಲ್ಲಿ ಭಾಗಿ. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ. ಎಲ್ಲರಿಗೂ ಉತ್ತಮ ಆರೋಗ್ಯ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೫ ಸಿಂಹ:
ಆಶ್ರಿತರಿಗೆ ಸಂತೋಷ ನೀಡುವ ಕ್ರಮ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಸ್ವಂತ ಉದ್ಯಮದ ನೌಕರ ವೃಂದಕ್ಕೆ ಸಂತೃಪ್ತಿ. ಹೊಸ ವಿದ್ಯೆಯನ್ನು ಕಲಿಯುವ ಆಸಕ್ತಿ. ಕುಟುಂಬದಲ್ಲಿ ಸಂಭ್ರಮದ ವಾತಾವರಣ. ವೇದಾಧ್ಯಯನಕ್ಕೆ ಸಿದ್ಧತೆ. ಗಣೇಶ ಪಂಚರತ್ನ, ಶಿವಪಂಚಾಕ್ಷರ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.
೬.ಕನ್ಯಾ:
ರಾಜ್ಯೋತ್ಸವದ ಸಂದರ್ಭದಲ್ಲಿ ಗಣ್ಯರ ಭೇಟಿ. ಉದ್ಯೋಗ ಸ್ಥಳದಲ್ಲಿ ಸ್ಥಿರ ಪರಿಸ್ಥಿತಿ. ಉದ್ಯಮ ಅಭಿವೃದ್ಧಿಗೆ ವಿತ್ತ ಸಂಸ್ಥೆಗಳ ನೆರವು. ಸಂಸಾರದ ನೆಮ್ಮದಿ ಕೆಡಿಸುವ ಹಿತಶತ್ರುಗಳ ಪ್ರಯತ್ನಕ್ಕೆ ಸೋಲು. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೭ತುಲಾ:
ಸಂಭ್ರಮ ಆಚರಣೆಯಲ್ಲಿ ನೆಂಟರ ಸಹಭಾಗಿತ್ವ. ಹಳೆಯ ಒಡನಾಡಿಗಳ ಸಂಬಂಧ ನವೀಕರಣ. ಸರಕಾರಿ ನೌಕರರಿಗೆ ಅಧಿಕ ಕೆಲಸ. ವಸ್ತ್ರ, ಒಡವೆ ಖರೀದಿ. ಇಷ್ಟಾರ್ಥ ಸಿದ್ಧಿಗಾಗಿ ದೇವತಾರ್ಚನೆ. ಮನೆಯಲ್ಲಿ ಎಲ್ಲರ ಆರೋಗ್ಯ ವೃದ್ಧಿ. ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ಗುರುಸ್ತೋತ್ರ ಓದಿ.
೮.ವೃಶ್ಚಿಕ:
ಅರಸದೆ ಬಂದ ಸುಖದಿಂದ ಆನಂದ. ದೇವತಾರ್ಚನೆಯಿಂದ ಕುಟುಂಬಕ್ಕೆ ಕ್ಷೇಮ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ, ಶೋಕಿ ಸಾಮಗ್ರಿಗಳ ವಿತರಕರಿಗೆ ಲಾಭ. ಕೃಷಿ ಕ್ಷೇತ್ರದಲ್ಲಿ ಹೊಸಬರಿಗೆ ಮಾರ್ಗದರ್ಶನ. ದೂರದಲ್ಲಿರುವ ಮಕ್ಕಳೊಂದಿಗೆ ಪುನರ್ಮಿಲನ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೯. ಧನು:
ರಾಜ್ಯೋತ್ಸವ ಸಮಾರಂಭ ವೀಕ್ಷಣೆ. ಉದ್ಯೋಗಿಗಳಿಗೆ ಸಮಾಧಾನ. ತರಕಾರಿ, ಹಣ್ಣು ವ್ಯಾಪಾರಿಗಳಿಗೆ ಲಾಭ ಮಧ್ಯಮ. ಹತ್ತಿರದ ದೇವತಾ ಕ್ಷೇತ್ರಕ್ಕೆ ಸಂದರ್ಶನ. ಗೃಹಿಣಿಯರ ಉದ್ಯಮಕ್ಕೆ ಅಭೂತಪೂರ್ವ ಕೀರ್ತಿ. ವಿವಾಹಾಸಕ್ತರಿಗೆ ಶುಭವಾರ್ತೆ. ಗಣೇಶ ಕವಚ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೧೦. ಮಕರ:
ಹಬ್ಬದ ಸಂಭ್ರಮದ ನಡುವೆ ಕರ್ತವ್ಯ ಪಾಲನೆ. ಸ್ವಂತ ಉದ್ಯಮ ವಿಸ್ತರಣೆ ಪ್ರಕ್ರಿಯೆ ಆರಂಭ. ದೀರ್ಘಾವಧಿ ಉಳಿತಾಯ ಯೋಜನೆಯಲ್ಲಿ ಹಣ ಹೂಡಿಕೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಮನೆಯಲ್ಲಿ ಸಂಭ್ರಮದ ವಾತಾವರಣ. ಗಣೇಶ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ, ಶನಿಸ್ತೋತ್ರ ಓದಿ.
೧೧.ಕುಂಭ:
ಕುಟುಂಬದ ಮನೆಯಲ್ಲಿ ಸ್ನೇಹ ಸಮ್ಮಿಲನ. ಸ್ವಂತ ಉದ್ಯಮದ ಬೆಳವಣಿಗೆ ಸುಗಮ. ಉತ್ಪನ್ನಗಳಿಗೆ ಹೊಸ ರೂಪ ಕೊಡಲು ಚಿಂತನೆ. ಮುದ್ರಣ ಸಾಮಗ್ರಿ, ಸ್ಟೇಶನರಿ ರಖಂ ವ್ಯವಹಾರಸ್ಥರಿಗೆ ಆದಾಯ ವೃದ್ಧಿ. ಮಕ್ಕಳಿಗೆ ಅನೇಕ ವಿಷಯಗಳ ಕಲಿಕೆಯಲ್ಲಿ ಆಸಕ್ತಿ. ದ್ರವ ಪದಾರ್ಥ ವ್ಯಾಪಾರಿಗಳಿಗೆ ಲಾಭ. ಗಣೇಶ ಕವಚ, ದಾರಿದ್ರ್ಯದಹನ ಶಿವಸ್ತೋತ್ರ, ಶನಿಮಹಾತ್ಮೆ ಓದಿ.
೧೨.ಮೀನ:
ರಾಜ್ಯೋತ್ಸವದ ಶುಭದಿನ ಗುರುಸಮಾನರ ಭೇಟಿ. ಪಾಲುದಾರಿಕೆ ವ್ಯವಹಾರಕ್ಕೆ ಹೊಸಬರ ಪ್ರವೇಶ. ಆಸ್ತಿ ವಿಸ್ತರಣೆ ಪ್ರಯತ್ನದಲ್ಲಿ ಮುನ್ನಡೆ. ಕಟ್ಟಡ ನಿರ್ಮಾಣ ವ್ಯವಹಾರಸ್ಥರಿಗೆ ಮಧ್ಯಮ ಲಾಭ. ತಾಯಿ ಅಥವಾ ಮಾತೃಸಮಾನರ ವಿಶೇಷ ಅನುಗ್ರಹ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.


