ದ್ವಿತೀಯ ಪಿಯು ಪರೀಕ್ಷೆ-1: ಖಾಸಗಿ ವಿದ್ಯಾರ್ಥಿಗಳಿಗೆ ನೋಂದಾಯಿಸಿಕೊಳ್ಳಲು ಅವಕಾಶ

2nd PUC Exam-1: 027ರ ಮಾರ್ಚ್/ ಏಪ್ರಿಲ್‌ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ ಖಾಸಗಿ ಅಭ್ಯರ್ಥಿಗಳಿಗೆ, ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.

Oct 17, 2026 - 15:31
ದ್ವಿತೀಯ ಪಿಯು ಪರೀಕ್ಷೆ-1: ಖಾಸಗಿ ವಿದ್ಯಾರ್ಥಿಗಳಿಗೆ ನೋಂದಾಯಿಸಿಕೊಳ್ಳಲು ಅವಕಾಶ

ಬೆಂಗಳೂರು: 2027ರ ಮಾರ್ಚ್/ ಏಪ್ರಿಲ್‌ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ ಖಾಸಗಿ ಅಭ್ಯರ್ಥಿಗಳಿಗೆ, ಹೆಸರು ನೋಂದಾಯಿಸಿಕೊಳ್ಳಲು ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿ (KSEAB) ಅವಕಾಶ ನೀಡಿದೆ. 

ಅರ್ಹ ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ನೋಂದಣಿ ಮಾಡಿಕೊಳ್ಳಬೇಕು. 

17 ವರ್ಷ ತುಂಬಿರುವವರು ಹಾಗೂ 2026ರ ಜೂನ್ ಅಥವಾ ಅದಕ್ಕೂ ಹಿಂದಿನ ವರ್ಷಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಪರೀಕ್ಷೆ ಬರೆಯಲು ಅರ್ಹರು. ದಂಡರಹಿತ ಅರ್ಜಿ ಸಲ್ಲಿಕೆಗೆ ನ.21 ಕಡೆ ದಿನವಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ಕ್ಕೂ ಖಾಸಗಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬಹುದು:

2027ರ ಮಾರ್ಚ್‌ನಲ್ಲಿ ನಡೆಸಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ಕ್ಕೆ ಖಾಸಗಿ ಅಭ್ಯರ್ಥಿಗಳಿಗೆ ನೇರವಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 

15 ವರ್ಷ ಪೂರ್ಣಗೊಂಡಿರುವವರು ಹಾಗೂ ಶಾಲೆಗಳಲ್ಲಿ ವ್ಯಾಸಂಗ ಮಾಡದಿರುವ, ಅರ್ಧದಲ್ಲಿಯೇ ವ್ಯಾಸಂಗ ಮೊಟಕುಗೊಳಿಸಿದವರು ನೋಂದಾಯಿಸಿಕೊಳ್ಳಬಹುದು. 

ಈ ಸಂಬಂಧ ಯಾವುದೇ ಗೊಂದಲವಿದ್ದರೆ, ಸರ್ಕಾರಿ ಕೆಲಸದ ದಿನಗಳಂದು ಮಂಡಳಿ ಸಹಾಯವಾಣಿ ಸಂಖ್ಯೆ 080- 23310075ಗೆ ಸಂಪರ್ಕಿಸಬಹುದು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.