ಪತ್ನಿ, ಮಗು ಕೊಂದು ಪತಿ ಆತ್ಮಹತ್ಯೆಗೆ ಶರಣು; ಮುಲ್ಕಿಯಲ್ಲಿ ಘೋರ ಕೃತ್ಯ ಬೆಳಕಿಗೆ !

ನಾಲ್ಕು ವರ್ಷದ ಮುದ್ದಾದ ತನ್ನ ಮಗು ಹೃದಯ್‌ ಹಾಗೂ ಪ್ರೀತಿಯ ಮಡದಿ ಪ್ರಿಯಾಂಕಾ(28) ಅವರನ್ನು ಹತ್ಯೆ ಮಾಡಿರುವ ಪಾಪಿ ಗಂಡ ಕಾರ್ತಿಕ್‌ ಭಟ್‌(32) ಮೂಲ್ಕಿಯ ಬೆಳಾಯರು ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Nov 9, 2024 - 17:45
Feb 5, 2026 - 18:45
ಪತ್ನಿ, ಮಗು ಕೊಂದು ಪತಿ ಆತ್ಮಹತ್ಯೆಗೆ ಶರಣು; ಮುಲ್ಕಿಯಲ್ಲಿ ಘೋರ ಕೃತ್ಯ ಬೆಳಕಿಗೆ !
Husband commits suicide after killing wife and 4 year old child

 ಮಂಗಳೂರು :  ಪತ್ನಿ ಹಾಗೂ ಮುದ್ದಾದ ಮಗುವನ್ನು ಹತ್ಯೆ ಮಾಡಿದ ಬಳಿ ಪತಿ ಕೂಡ ರೈಲ್ವೆ ಹಳಿ ಮೇಲೆ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಕಿನ್ನಿಗೋಳಿಯ ಪಕ್ಷಿಕೆರೆಯಲ್ಲಿ ಶನಿವಾರ ಬೆಳಕಿಗೆ ಬಂದಿದೆ.

ಪತ್ನಿ ಪ್ರಿಯಾಂಕಾ(28) ಹಾಗೂ ನಾಲ್ಕು ವರ್ಷದ ಮುದ್ದಾದ ಮಗು ಹೃದಯ್‌ನನ್ನು ಹತ್ಯೆ ಮಾಡಿರುವ ಕಾರ್ತಿಕ್‌ ಭಟ್‌(32) ಮೂಲ್ಕಿಯ ಬೆಳಾಯರು ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶುಕ್ರವಾರ ಮಧ್ಯಾಹ್ನ ಸ್ಕೂಟರ್ ಅನ್ನು ಕಲ್ಲಾಪು ದೇವಸ್ಥಾನ ಬಳಿ ನಿಲ್ಲಿಸಿ ರೈಲು ಹಳಿ ಮೇಲೆ ನಡೆದುಕೊಂಡು ಹೋಗಿದ್ದು ಆ ವೇಳೆ ರೈಲಿನಡಿ ಸಿಲುಕಿ ಸಾವನ್ನಪ್ಪಿದ್ದಾನೆ. ಬಳಿಕ ಮೃತದೇಹ ಛಿದ್ರವಾದ ರೀತಿಯಲ್ಲಿ ಪತ್ತೆಯಾಗಿದೆ. ಮುಲ್ಕಿ ಸರ್ಕಲ್‌ ಬಳಿ "ಹೋಟೆಲ್ ಕಾರ್ತಿಕ್" ಹೆಸರಿನಲ್ಲಿ ಹೋಟೆಲ್‌ ನಡೆಸುತ್ತಿರುವ ಜನಾರ್ಧನ ಭಟ್ ಎಂಬವರ ಮೂವರು ಮಕ್ಕಳಲ್ಲಿ ಒಬ್ಬನಾದ ಕಾರ್ತಿಕ್ ಕದ್ರಿಯ ಸೊಸೈಟಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.


 ಕಾರ್ತಿಕ್‌ ಭಟ್‌ ಪಕ್ಷಿಕೆರೆಯ ಪಂಚಾಯತ್‌ ಬಳಿ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದ. ಪೊಲೀಸರು ಅಲ್ಲಿಗೆ ತೆರಳಿದಾಗ ಬಾಗಿಲು ಹಾಕಿತ್ತು. ಬಳಿಕ ಬಾಗಿಲು ಮುರಿದು ಒಳಪ್ರವೇಶಿಸಿ ನೋಡಿದಾಗ ಘೋರ ಕೃತ್ಯ ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು ಮೂಲ್ಕಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಣ್ಣ ಫ್ಲ್ಯಾಟ್‌ನಲ್ಲಿ ಕಾರ್ತಿಕ್‌ ಕುಟುಂಬ ವಾಸವಾಗಿತ್ತು. ಕಾರ್ತಿಕ್‌ ನಿನ್ನೆ ಅಂದರೆ ಶುಕ್ರವಾರ ಮಧ್ಯಾಹ್ನ ರೈಲಿನ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಪೊಲೀಸರು ಯಾರ ಮೃತದೇಹವಿರಬಹುದೆಂದು ಆತನ ವಿಳಾಸವನ್ನು ಪರಿಶೀಲಿಸುತ್ತಾ ಪೊಲೀಸರಿಗೆ ಶಾಕ್‌ ಕಾದಿತ್ತು. ಅಲ್ಲಿ ಚಿಕ್ಕ ಮಗು ಹಾಗೂ ಪತ್ನಿ ಪ್ರಿಯಾಂಕಾಳನ್ನು ಚಾಕುವಿನಿಂದ ಇರಿದು ಕೊಂದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಕಾರ್ತಿಕ್‌ ಬಹಳ ಒಳ್ಳೆಯ ವ್ಯಕ್ತಿಯಾಗಿದ್ದ ಎನ್ನುತ್ತಾರೆ ಸ್ಥಳೀಯರು

ಕಾರ್ತಿಕ್‌ ಅವರು ಬಹಳ ಒಳ್ಳೆಯ ವ್ಯಕ್ತಿಯಾಗಿದ್ದರು. ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಸ್ಥಳೀಯರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಫ್ಲ್ಯಾಟ್‌ನಲ್ಲಿ ಮೇಲಿನ ರೂಮ್‌ನಲ್ಲಿ ವಾಸವಾಗಿದ್ದರು. ಮೇಲ್ನೋಟಕ್ಕೆ ಹೊರಗಿನವರಿಗೂ ಇದೊಂದು ಸುಂದರ ಸಂಸಾರ ಅನ್ನುವ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದರು. ಆದರೆ, ಇಂದು ಕಾರ್ತಿಕ್‌ ಆತ್ಮಹತ್ಯೆಯ ಬಳಿಕ ಮಗು ಹಾಗೂ ಪತ್ನಿಯನ್ನು ಆತನೇ ಕೊಂದ ವಿಚಾರ ಗೊತ್ತಾದ ಬಳಿಕ ಇಡೀ ಊರಿನವರನ್ನು ಈ ಘಟನೆ ಬೆಚ್ಚಿ ಬೀಳಿಸುವಂತೆ ಮಾಡಿದೆ.

ಮುಲ್ಕಿಯಲ್ಲಿ ನಡೆದಿರುವ ಈ ಘಟನೆಯು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಯಾವ ಕಾರಣಕ್ಕೆ ಕಾರ್ತಿಕ್‌ ತನ್ನ ಪ್ರೀತಿಯ ಪತ್ನಿ ಹಾಗೂ ಸಣ್ಣ ಮಗುವನ್ನು ಬರ್ಬರವಾಗಿ ಕೊಲೆ ಮಾಡಿ ತನ್ನ ಜೀವನವನ್ನು ಅಂತಗೊಳಿಸಿದ್ದಾನೆ ಎನ್ನುವುದು ಪೊಲೀಸರ ಸಮಗ್ರ ತನಿಖೆಯಿಂದ ಗೊತ್ತಾಗಬೇಕಿದೆ. ವಿಧಿವಿಜ್ಞಾನ ಪ್ರಯೋಗಾಲಯದ ತಂಡವು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದು, ಪೊಲೀಸರು ಕೂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಕೊಲೆ ಹಾಗೂ ಕಾರ್ತಿಕ್‌ನ ಸಾವಿಗೆ ಸಂಬಂಧಿಸಿದಂತೆ ಯಾವುದೇ ಡೆತ್‌ನೋಟ್‌ ಪತಯ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.