‘ವೆಟ್ಟೈಯಾನ್’ ಸಿನಿಮಾ ಮೊದಲ ದಿನ ಗಳಿಸಿದ್ದು ಇಷ್ಟೇನಾ?

ರಜನಿಕಾಂತ್, ಅಮಿತಾಭ್ ಬಚ್ಚನ್, ಫಹಾದ್ ಫಾಸಿಲ್ ನಟನೆಯ ‘ವೆಟ್ಟೈಯನ್’ ಸಿನಿಮಾ ಮೊದಲ ದಿನ ಸಾಧಾರಣ ಗಳಿಕೆ ಮಾಡಿದೆ.

Oct 11, 2024 - 04:56
‘ವೆಟ್ಟೈಯಾನ್’ ಸಿನಿಮಾ ಮೊದಲ ದಿನ ಗಳಿಸಿದ್ದು ಇಷ್ಟೇನಾ?

ರಜನಿಕಾಂತ್, ಅಮಿತಾಭ್ ಬಚ್ಚನ್, ಫಹಾದ್ ಫಾಸಿಲ್ ನಟನೆಯ ‘ವೆಟ್ಟೈಯನ್’ ಸಿನಿಮಾ ಮೊದಲ ದಿನ ಸಾಧಾರಣ ಗಳಿಕೆ ಮಾಡಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದಿದೆ. ಈ ಕಾರಣದಿಂದ ಸಿನಿಮಾ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಈ ಚಿತ್ರ ಮೊದಲ ದಿನ ಕಲೆಕ್ಷನ್ ಮಾಡಿದ್ದು ಎಷ್ಟು ಎನ್ನುವ ಬಗ್ಗೆ ಇಲ್ಲಿದೆ ವಿವರ.

‘ವೆಟ್ಟೈಯಾನ್’ ಸಿನಿಮಾ ಮೊದಲ ದಿನ ಭಾರತದ ಬಾಕ್ಸ್ ಆಫೀಸ್​ನಲ್ಲಿ 30 ಕೋಟಿ ರೂಪಾಯಿ ಗಳಿಕೆ ಮಾಡಿದೆ. ತಮಿಳಿನಿಂದ ಈ ಚಿತ್ರಕ್ಕೆ ಸಿಕ್ಕಿರೋದು ಕೇವಲ 26 ಕೋಟಿ ರೂಪಾಯಿ. ತೆಲುಗಿನಲ್ಲಿ 3.2 ಕೋಟಿ ರೂಪಾಯಿ, ಹಿಂದಿಯಲ್ಲಿ ಕೇವಲ 60 ಲಕ್ಷ ರೂಪಾಯಿ ಗಳಿಕೆ ಆಗಿದೆ. ಕನ್ನಡದಲ್ಲಿ ಕೇವಲ 5 ಲಕ್ಷ ರೂಪಾಯಿ ವ್ಯವಹಾರ ಆಗಿದೆ. 30 ಕೋಟಿ ರೂಪಾಯಿ ಎಂದರೆ ಅದು ದೊಡ್ಡ ಮೊತ್ತವೇ. ಆದರೆ, ರಜನಿಕಾಂತ್​ಗೆ ಇರೋ ಹೈಪ್​ಗೆ ಅದು ಕಡಿಮೆ.ಅಮಿತಾಭ್ ಬಚ್ಚನ್ ಅವರು ‘ವೆಟ್ಟೈಯನ್’ ಚಿತ್ರದಲ್ಲಿ ನಟಿಸಿದ್ದಾರೆ. ಅವರು ನಟಿಸಿದ ಕಾರಣಕ್ಕೆ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಬೇಕಿತ್ತು. ಆದರೆ, ಚಿತ್ರವು ಹಿಂದಿಯಲ್ಲೂ ಅಂಥ ದೊಡ್ಡ ಹವಾ ಸೃಷ್ಟಿ ಮಾಡಿಲ್ಲ. ಇದು ತಂಡದ ಬೇಸರ ಹೆಚ್ಚಿಸಿದೆ. ಇಂದು (ಅಕ್ಟೋಬರ್ 11) ದಸರಾ ಪ್ರಯುಕ್ತ ರಜಾ ಇದೆ. ಇಂದು ಸಿನಿಮಾ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಲಿದೆಯೇ ಎನ್ನುವ ಕುತೂಹಲ ಮೂಡಿದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.