ಇಬ್ಬರು ವಿಜ್ಞಾನಿಗಳಿಗೆ ವೈದ್ಯಕೀಯದಲ್ಲಿ ನೊಬೆಲ್ ಪ್ರಶಸ್ತಿ
ಈ ವರ್ಷದ ಮೊದಲ ನೊಬೆಲ್ ಪ್ರಶಸ್ತಿಯನ್ನು ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಪಡೆದುಕೊಂಡಿದ್ದಾರೆ.
Oct 7, 2024 - 10:54
Oct 7, 2024 - 10:56
ಈ ವರ್ಷದ ಮೊದಲ ನೊಬೆಲ್ ಪ್ರಶಸ್ತಿಯನ್ನು ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಪಡೆದುಕೊಂಡಿದ್ದಾರೆ. ಮೈಕ್ರೊಆರ್‌ಎನ್‌ಎ ಆವಿಷ್ಕಾರಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಮೈಕ್ರೊಆರ್‌ಎನ್‌ಎ ಮತ್ತು ಅದರ ನಂತರದ ಪ್ರತಿಲೇಖನ ಜೀನ್ ನಿಯಂತ್ರಣದಲ್ಲಿ ಮೈಕ್ರೊಆರ್‌ಎನ್‌ಎ ಪಾತ್ರದ ಅಧ್ಯಯನಕ್ಕಾಗಿ ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರಿಗೆ ಶರೀರಶಾಸ್ತ್ರ ಅಥವಾ ವೈದ್ಯಶಾಸ್ತ್ರಕ್ಕೆ 2024ರ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ . ಈ ವರ್ಷದ ನೊಬೆಲ್ ಪ್ರಶಸ್ತಿಯು ಜೀನ್ ಚಟುವಟಿಕೆಯನ್ನು ಹೇಗೆ ನಿಯಂತ್ರಿಸುತ್ತದೆ ಹಾಗೂ ಆ ನಿಯಂತ್ರಣದ ಮೂಲಭೂತ ತತ್ವವನ್ನು ಕಂಡುಹಿಡಿದ ಸಾಧನೆಗಾಗಿ ಈ ಇಬ್ಬರು ವಿಜ್ಞಾನಿಗಳನ್ನು ನೊವೆಲ್ ಪ್ರಶಸ್ತಿ ನೀಡ ಗೌರವಿಸುತ್ತದೆ.
ವಿಕ್ಟರ್ ಅಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ವಿವಿಧ ಕೋಶ ಪ್ರಕಾರಗಳು ಹೇಗೆ ಅಭಿವೃದ್ಧಿ ಹೊಂದುತ್ತವೆ ಎಂಬುದರ ಬಗ್ಗೆ ಅಧ್ಯಯನವನ್ನು ಮಾಡಿದ್ದಾರೆ. ಇದು ವಂಶವಾಹಿ ನಿಯಂತ್ರಣದಲ್ಲಿ ಪಾತ್ರವನ್ನು ವಹಿಸುವ ಸಣ್ಣ ಆರ್‌ಎನ್‌ಎ ಅಣುಗಳ ಹೊಸ ವರ್ಗವಾದ ಮೈಕ್ರೋಆರ್‌ಎನ್‌ಎಯನ್ನು ಅವರು ಕಂಡುಹಿಡಿದ್ದಾರೆ. ಈ ಸಂಶೋಧನೆ ಜೀನ್ ನಿಯಂತ್ರಣದ ಸಂಪೂರ್ಣ ಹೊಸ ರೂಪವನ್ನು ಪಡೆಯುತ್ತದೆ ಎಂಬುದು ಈ ವಿಜ್ಞಾನಿಗಳ ವಾದವಾಗಿದೆ. ಮಾನವರು ಸೇರಿದಂತೆ ಬಹುಕೋಶೀಯ ಜೀವಿಗಳಿಗೆ ಈ ಸಂಶೋಧನೆ ಉಪಯುಕ್ತ ಎಂದು ಹೇಳಿದೆ. ಒಂದು ಸಾವಿರಕ್ಕೂ ಹೆಚ್ಚು ಮೈಕ್ರೊಆರ್‌ಎನ್‌ಎಗಳಿಗೆ ಮಾನವ ಜೀನೋಮ್ ಸಂಕೇತಗಳು ಎಂದು ಈಗಾಗಲೇ ಈ ಸಂಶೋಧನೆಯಲ್ಲಿ ತಿಳಿಸಲಾಗಿದೆ.