Bedti-Aghanashini River: ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆ ಕೈಬಿಡುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

Bedti-Aghanashini River: ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆ ಕೈಬಿಡುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

Oct 10, 2026 - 19:27
Oct 10, 2026 - 19:28
Bedti-Aghanashini River: ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆ ಕೈಬಿಡುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಬೆಂಗಳೂರು: ​ಉತ್ತರ ಕನ್ನಡ ಜಿಲ್ಲೆಯ ಜೀವ ನದಿಗಳಾದ ಬೇಡ್ತಿ ಮತ್ತು ಅಘನಾಶಿನಿ ಉಳಿವಿಗಾಗಿ ರಾಜಧಾನಿಯಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು. ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ನಡೆದ ಈ ಜನಾಕ್ರೋಶದ ಹೋರಾಟದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.
  
​ಸರ್ಕಾರವು ಈ ಯೋಜನೆಗೆ ಸಂಬಂಧಿಸಿದ ಡಿಪಿಆರ್‌ ಕೆಲಸವನ್ನು ಕೂಡಲೇ ರದ್ದುಪಡಿಸಬೇಕು. ನದಿಗಳು ಹಾಗೂ ಜನರ ಜೀವವನ್ನು ಸಂರಕ್ಷಿಸಬೇಕು ಎಂದು ಸಭೆಯಲ್ಲಿ ಒಕ್ಕೊರಲಿನಿಂದ ಆಗ್ರಹಿಸಲಾಯಿತು. 

ಈ ಪ್ರತಿಭಟನೆಯಲ್ಲಿ ನಿವೃತ್ತ ನ್ಯಾ.ಸಂತೋಷ್‌ ಹೆಗ್ಡೆ, ಶಾಸಕರು, ಪರಿಸರ ಹೋರಾಟಗಾರರು, ವಿಜ್ಞಾನಿಗಳು ಮತ್ತು ಸಾಹಿತಿಗಳು ಭಾಗವಹಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

​ಪ್ರತಿಭಟನಾ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು:

  • ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಹರಿಯುವ ಪ್ರಮುಖ ನದಿ ಕಣಿವೆಗಳ ಸಂರಕ್ಷಣೆಗಾಗಿ ಸರ್ಕಾರವು ವಿಶೇಷ ಸುಸ್ಥಿರ ಯೋಜನೆಗಳನ್ನು ರೂಪಿಸಬೇಕು. 
  • ಬೇಡ್ತಿ ಮತ್ತು ಅಘನಾಶಿನಿ ನದಿಗಳ ದಿಕ್ಕು ತಿರುಗಿಸುವ ವಿನಾಶಕಾರಿ ಯೋಜನೆಗಳಿಂದ ರೈತರು, ಮೀನುಗಾರರು ಮತ್ತು ವನವಾಸಿಗಳು ಸೇರಿದಂತೆ ಲಕ್ಷಾಂತರ ಜನರ ಬದುಕು ನಾಶವಾಗಲಿದೆ.
  • ಬೇಡ್ತಿ ನದಿಯಲ್ಲಿ ಯಾವುದೇ ಹೆಚ್ಚುವರಿ ನೀರಿಲ್ಲದಿರುವುದರಿಂದ, ನದಿ ತಿರುವು ಯೋಜನೆಗಳು ಸಂಪೂರ್ಣವಾಗಿ ವ್ಯರ್ಥ ಹಾಗೂ ನೀರಿಲ್ಲದ ನೀರಾವರಿಯಾಗಲಿವೆ.  

  • ​ಪಶ್ಚಿಮ ಘಟ್ಟಗಳು ಈಗಾಗಲೇ ಭೂಕುಸಿತದ ಭಾರಿ ಅಪಾಯದಲ್ಲಿದ್ದು, ಇಂತಹ ಬೃಹತ್ ಯೋಜನೆಗಳು ಪರಿಸರಕ್ಕೆ ಮಾರಕವಾಗಿ ಪರಿಣಮಿಸಲಿವೆ.
  • ಕುಮಟಾ-ಅಂಕೋಲಾ ಕರಾವಳಿ ಪ್ರದೇಶದಲ್ಲಿ ನದಿ ತಿರುವು ಜಾರಿಯಾದರೆ ಉಪ್ಪು ನೀರು ಒಳನುಗ್ಗಿ ಕೃಷಿ ಹಾಗೂ ಮೀನುಗಾರಿಕೆ ನಾಶವಾಗುತ್ತದೆ. 
  • ಬೃಹತ್ ಯೋಜನೆಗಳ ಅನುಷ್ಠಾನದಿಂದ ಗಿಡಮರಗಳು ನಾಶವಾಗಿ, ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುವ ಸಾಧ್ಯತೆಯಿದೆ.
  • ವಿಜ್ಞಾನಿಗಳು, ಗ್ರಾಮ ಪಂಚಾಯಿತಿಗಳು, ಸಹಕಾರ ಸಂಘಗಳು ಹಾಗೂ ಧಾರ್ಮಿಕ ಮುಖಂಡರ ಅಭಿಪ್ರಾಯದಂತೆ ಸರ್ಕಾರವು ಈ ಯೋಜನೆಗಳನ್ನು ಕೂಡಲೇ ಕೈಬಿಡಬೇಕು.
  • ​ಪರಿಸರ ಸಂರಕ್ಷಣೆಗಾಗಿ ರಾಜಕೀಯ ಹಾಗೂ ಎಲ್ಲಾ ಭೇದಭಾವಗಳನ್ನು ಬದಿಗಿಟ್ಟು ಜನಪ್ರತಿನಿಧಿಗಳು ಒಗ್ಗಟ್ಟಾಗಿ ನಿಲ್ಲಬೇಕು ಎಂದು ಮನವಿ ಮಾಡಲಾಯಿತು.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.