ಬೆಳ್ತಂಗಡಿ: ಕಳ್ಳತನ ಪ್ರಕರಣ.. ಆರೋಪಿ ವಶಕ್ಕೆ

Belthangady: ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ಆರೋಪಿ ಮುಸ್ತಾಕ್ (27) ಜೊತೆಯಲ್ಲಿದ್ದ ಮತ್ತೊಬ್ಬ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Jul 16, 2026 - 12:23
ಬೆಳ್ತಂಗಡಿ: ಕಳ್ಳತನ ಪ್ರಕರಣ.. ಆರೋಪಿ ವಶಕ್ಕೆ

ದಕ್ಷಿಣ ಕನ್ನಡ: ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ಆರೋಪಿ ಮುಸ್ತಾಕ್ (27) ಜೊತೆಯಲ್ಲಿದ್ದ ಮತ್ತೊಬ್ಬ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಇಬ್ರಾಹಿಂ ಲತೀಫ್ (36) ಬಂಧಿತ ಆರೋಪಿಯಾಗಿದ್ದಾನೆ. ವಿಚಾರಣೆ ವೇಳೆ ಈತ ವೇಣೂರು ಉಪ್ಪಿನಂಗಡಿ, ಅರೆಹಳ್ಳಿ ಮತ್ತು ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 16 ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ.

ಜೂನ್ 30ರ ರಾತ್ರಿ ಕುವೆಟ್ಟು ಶಕ್ತಿನಗರದ ಸಂಸ್ಥೆಯೊಂದರ ಆವರಣದಲ್ಲಿ ಮೃತ ಮುಶ್ತಕ್ ಮತ್ತು ಇಬ್ರಾಹಿಂ ಲತೀಫ್ ಮತ್ತೋರ್ವ ಆರೋಪಿಯೊಂದಿಗೆ ಅಲ್ಯೂಮಿನಿಯಂ/ಕಬ್ಬಿಣದ ವಸ್ತುಗಳನ್ನು ಕಳ್ಳತನ ಮಾಡಲು ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಮುಶ್ತಕ್ ಕುತ್ತಿಗೆಗೆ ಕಬ್ಬಿಣದ ತಂತಿ ಸಿಲುಕಿದ್ದು, ಆತ ಮೃತಪಟ್ಟಿದ್ದನು. 

ಆರೋಪಿಯಿಂದ ಒಟ್ಟು 550 ಕೆಜಿ ಅಲ್ಯೂಮಿನಿಯಂ ವಯರ್‌ಗಳನ್ನು ಸ್ವಾಧೀನಪಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.