ದಿನ ಭವಿಷ್ಯ: ಇವತ್ತು ಯಾರಿಗೆ ಶುಭ?

Daily Horoscope: ಇಂದು (ಶನಿವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Oct 10, 2026 - 07:50
ದಿನ ಭವಿಷ್ಯ: ಇವತ್ತು ಯಾರಿಗೆ ಶುಭ?

ಮೇಷ:
 
ಮಹಾಲಯ ಅಮಾವಾಸ್ಯೆಯ ಪರ್ವದಿನ.. ಎಲ್ಲ ಕಾರ್ಯಗಳಲ್ಲೂ ಜಯಭೇರಿ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಉತ್ತಮ ಲಾಭ. ಅಶಕ್ತರಿಗೆ ನೆರವಾಗುವ ಅವಕಾಶ. ಪಿತೃಗಳಿಗೆ ಶ್ರದ್ಧಾಂಜಲಿಯಲ್ಲಿ ಭಾಗಿ. ಗಣೇಶ ಕವಚ, ವೇದಸಾರ ಶಿವಸ್ತೋತ್ರ, ಶನಿಮಹಾತ್ಮೆ ಓದಿ.
 
ವೃಷಭ:
 
ಉದರದ ಆರೋಗ್ಯದ ವಿಷಯದಲ್ಲಿ ಕಾಳಜಿ ಇರಲಿ.. ಉದ್ಯೋಗಾಪೇಕ್ಷಿಗಳಿಗೆ ಶುಭಸೂಚನೆ. ಅಲ್ಪಾವಧಿ ಹೂಡಿಕೆಗಳು ಬೇಡ. ಕೃಷ್ಯುತ್ಪನ್ನಗಳಿಂದ ಸಾಮಾನ್ಯ ಲಾಭ. ಸ್ಟೇಶನರಿ, ಪುಸ್ತಕ ವ್ಯಾಪಾರಿಗಳಿಗೆ ಅನುಕೂಲ. ಸಂಕಷ್ಟನಾಶನ ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.
 
ಮಿಥುನ:
 
ವಂಚಕರ ಜಾಲದಿಂದ ದೂರವಿರಿ.. ಪಿತೃಕಾರ್ಯದಿಂದ ಸಂತೃಪ್ತಿ. ಗೃಹಿಣಿಯರಿಗೆ ತಕ್ಕಮಟ್ಟಿಗೆ ಕ್ಷೇಮದ ದಿನ. ಸಜ್ಜನರ ಸಹವಾಸದಿಂದ ಆನಂದ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
 
ಕರ್ಕಾಟಕ:
 
ಸತ್ಯವಾದಿಗಳ ಸಹವಾಸ ಮಾತ್ರ ಸಾಕು.. ಎಲೆಕ್ಟ್ರಾನಿಕ್ಸ್ ಕೆಲಸಗಾರರಿಗೆ ಅನುಕೂಲ.. ಬಂಧು ವರ್ಗದವರ ಪಿತೃಕಾರ್ಯದಲ್ಲಿ ಭಾಗಿ. ಹೋಟೆಲ್ ಉದ್ಯಮಿಗಳಿಗೆ ಗುಣಮಟ್ಟದ ಸವಾಲು. ತೋಟಗಾರಿಕೆ, ಜೇನು ವ್ಯವಸಾಯ ಹವ್ಯಾಸಕ್ಕೆ ಉತ್ತೇಜನ. ಸಂಕಷ್ಟನಾಶನ ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
 
ಸಿಂಹ:
 
ಸತ್ಕಾರ್ಯಗಳಿಂದ ಸಕಲ ಇಷ್ಟಾರ್ಥ ಸಿದ್ಧಿ.. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ. ಸರ್ಕಾರಿ ನೌಕರರಿಗೆ ರಾಜಕಾರಣಿಗಳ ಕಾಟ. ತೀರ್ಥಕ್ಷೇತ್ರ ದರ್ಶನದ ಸಾಧ್ಯತೆ. ಪಿತೃದೇವತೆಗಳ ಆಶೀರ್ವಾದ ಕೋರಿಕೆ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
 
ಕನ್ಯಾ:
 
ಮುಜುಗರಕ್ಕೆ ಗುರಿಯಾಗುವ ಕೆಲಸ ಬೇಡ.. ಹೊಲಿಗೆ, ಕಸೂತಿ ಬಲ್ಲವರಿಗೆ ಅದೃಷ್ಟದ ದಿನ. ಬಂಧುಗಳ ಮನೆಯ ಪಿತೃಕಾರ್ಯದಲ್ಲಿ ಭಾಗಿ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ತೋಟಗಾರಿಕೆ ಬೆಳೆಗಳಿಂದ ಲಾಭ. ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ ಓದಿ. 
 
ತುಲಾ:
 
ಯಾವ ಕಷ್ಟವನ್ನೂ ಎಣಿಸಿಕೊಂಡು ಕೊರಗಬೇಡಿ.. ಕೆಲವು ವರ್ಗದ ವ್ಯಾಪಾರಿಗಳಿಗೆ ಹೆಚ್ಚು ಅನುಕೂಲ ಕಲೋಪಾಸಕರಿಗೆ ಶುಭಸೂಚನೆ. ಸಾಮೂಹಿಕ ಪ್ರಾರ್ಥನೆಯಿಂದ ಸಮಾಜಕ್ಕೆ ಒಳಿತು. ಪೂರ್ವಜರಿಗೆ ಶ್ರದ್ಧಾಂಜಲಿಯಲ್ಲಿ ಭಾಗಿಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
 
ವೃಶ್ಚಿಕ:
 
ಉದ್ಯೋಗ, ಉದ್ಯಮಗಳಲ್ಲಿ ಮುನ್ನಡೆ.. ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ದೂರದಲ್ಲಿರುವ ಬಂಧುಗಳ ಆಗಮನ. ಕೈಮಗ್ಗದ ಕೆಲಸ ಬಲ್ಲವರಿಗೆ ಅವಕಾಶ. ಕೇಟರಿಂಗ್ ವ್ಯವಹಾರಸ್ಥರಿಗೆ ಅನುಕೂಲ. ಗಣೇಶ ದ್ವಾದಶನಾಮ ಸ್ತೋತ್ರ, ಶಿವನಾಮಾವಲ್ಯಷ್ಟಕ, ರಾಮರಕ್ಷಾ ಸ್ತೋತ್ರ  ಓದಿ.
 
ಧನು:
 
ಪ್ರಕೃತಿ, ಪರಿಸರ ರಕ್ಷಣೆಯ ಕಾಳಜಿ.. ಆತ್ಮೀಯರ ಮನೆಯ ಪಿತೃಕಾರ್ಯದಲ್ಲಿ ಭಾಗಿ. ಸಣ್ಣ ಹೂಡಿಕೆಗಳಲ್ಲಿ ಸಾಮಾನ್ಯ ಲಾಭ. ಶಿಕ್ಷಕ ವರ್ಗದ ಹಿತರಕ್ಷಣೆಗೆ ಪ್ರಯತ್ನ. ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ.
 
ಮಕರ:
 
ಪ್ರಕೃತಿ ಚಿಕಿತ್ಸೆಯಿಂದ ಆರೋಗ್ಯ ವೃದ್ಧಿ.. ವೃತ್ತಿಪರರಿಗೆ ಸಮಯದೊಂದಿಗೆ ಸೆಣಸಾಟ. ಹಿರಿಯರ ಆರೋಗ್ಯ ಸುಧಾರಣೆ. ಸಹೋದ್ಯೋಗಿಯ ಮನೆಯ ಪಿತೃಕಾರ್ಯದಲ್ಲಿ ಭಾಗಿ. ಹಳೆಯ ಪರಿಚಿತರ ಹಠಾತ್ ಭೇಟಿ. ಗಣೇಶ ಸ್ತೋತ್ರ, ಶಿವ ಪಂಚಾಕ್ಷರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
 
ಕುಂಭ:
 
ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮಗ್ನತೆ.. ಯಂತ್ರೋಪಕರಣ ವ್ಯಾಪಾರಿಗಳ ಪಾಲಿಗೆ ಶುಭದಿನ. ಬಂಧುವರ್ಗದ ಪಿತೃಕಾರ್ಯದಲ್ಲಿ ಭಾಗಿ. ಯುವಜನರ ಪಾಲುಗೊಳ್ಳುವಿಕೆಯಲ್ಲಿ ಶ್ರಮದಾನ. ಇಷ್ಟದೇವರ ದರ್ಶನದಿಂದ ಶುಭ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
 
ಮೀನ:
 
ಉದ್ಯೋಗ, ವ್ಯವಹಾರಗಳಲ್ಲಿ ಅನುಕೂಲ.. ಬಂಧುವರ್ಗದ ಮನೆಯಲ್ಲಿ ಪೂರ್ವಜರಿಗೆ ಶ್ರದ್ಧಾಂಜಲಿ. ಹಿರಿಯರಿಗೆ ಪ್ರಾಚೀನ ಪದ್ಧತಿಯಿಂದ ಆರೋಗ್ಯ. ತಿನಿಸು ವ್ಯಾಪಾರಿಗಳಿಗೆ ಅನುಕೂಲ. ಗುರುಸಮಾನರ ಭೇಟಿಯ ಸಾಧ್ಯತೆ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.