ಈ ದಿನದ ರಾಶಿ ಭವಿಷ್ಯ

ರಾಶಿ ಭವಿಷ್ಯ

Nov 19, 2024 - 07:34
Feb 5, 2026 - 18:49
ಈ ದಿನದ ರಾಶಿ ಭವಿಷ್ಯ
ದಿನ ಭವಿಷ್ಯ

ದಿನ ಭವಿಷ್ಯ    
    
               ಜ್ಯೋತಿರ್ಮಯ                

ಅದೃಷ್ಟ ಸಂಖ್ಯೆ 1

1.ಮೇಷ:
ಉದ್ಯೋಗ ಸ್ಥಾನದ   ಕೆಲಸಗಳು ಶೀಘ್ರ ಮುಕ್ತಾಯ. . ಉದ್ಯಮದ  ನೌಕರರಿಗೆ ಹೊಸ ವ್ಯವಸ್ಥೆಯಿಂದ ಸಂತೋಷ‌.ಮಹಿಳೆಯರ  ಸ್ವಾವಲಂಬನೆ ಯೋಜನೆ ಮುನ್ನಡೆ. ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಆದಾಯ .ಹಿತಶತ್ರುಗಳನ್ನು ಗುರುತಿಸಿ ದೂರವಿಡಿ..ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ.

  
 2.ವೃಷಭ:
ಉದ್ಯೋಗ ಸ್ಥಾನದಲ್ಲಿ ಪರಿಸ್ಥಿತಿ ಸುಧಾರಣೆ. ನ್ಯಾಯಕ್ಕಾಗಿ ಹೋರಾಟದಲ್ಲಿ ಜಯ‌..   ಸರಕಾರಿ ಯೋಜನೆಗಳ‌ ಸೌಲಭ್ಯ ಪಡೆಯಲು ಪ್ರಯತ್ನ ಮುಂದುವರಿಕೆ...ಸತ್ಯ ನುಡಿದು ನಿಷ್ಠುರಕ್ಕೆ ಗುರಿಯಾಗುವ ಭೀತಿ.ಮಾಧ್ಯಮಗಳಲ್ಲಿರುವವರು ಎಚ್ಚರಿಕ ವಹಿಸಿರಿ.ಗಣಪತಿ ಅಥರ್ವಶೀರ್ಷ,  ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
 
3.ಮಿಥುನ:

 ಉದ್ಯೋಗ ಸ್ಥಾನದಲ್ಲಿ ಕಟ್ಟುನಿಟ್ಟಿನ ನಡವಳಿಕೆ. ಉದ್ಯಮ ಅಭಿವೃದ್ಧಿಗೆ ಸಾಂಸ್ಥಿಕ  ನೆರವು ಪ್ರಾಪ್ತಿ.. ವಸ್ತ್ರ ,  ಸಿದ್ಧ ಉಡುಪು ,ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ .  ..ಮನೆಯಲ್ಲಿ  ಸಂತೋಷದ ವಾತಾವರಣ. ವ್ಯವಹಾರ  ಸಂಬಂಧ ಸಣ್ಣ ಪ್ರಯಾಣ.ಗಣೇಶ ಪಂಚರತ್ನ, ಶಿವಕವಚ, ನವಗ್ರಹ ಸ್ತೋತ್ರ ಓದಿ.


4.ಕರ್ಕಾಟಕ:

ಉದ್ಯೋಗದಲ್ಲಿ ದಿನೇ ದಿನೇ ಉನ್ನತಿ. ಅಕಸ್ಮಾತ್ ಧನಾಗಮ ಯೋಗ.ಆಪ್ತಮಿತ್ರನಿಂದ  ಶುಭವಾರ್ತೆ.ಖಾದ್ಯಪದಾರ್ಥ ಮಾರಾಟದಿಂದ ಉತ್ತಮ ಲಾಭ. ವ್ಯವಹಾರ ಸಂಬಂಧ ಪೂರ್ವದ ಕಡೆಗೆ ಪ್ರಯಾಣ..ಗಣೇಶ ಅಷ್ಟಕ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

 5.ಸಿಂಹ:

ಸಾಮರ್ಥ್ಯದ ಸಂಪೂರ್ಣ ಉಪಯೋಗಕ್ಕೆ ಅವಕಾಶ..ಉದ್ಯೋಗ ಕ್ಷೇತ್ರದಲ್ಲಿ ಅಗ್ರ ಸ್ಥಾನ.. ಉದ್ಯಮಕ್ಕೆ ಸರ್ವತೋಮುಖ  ಪ್ರಗತಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಉತ್ತಮ ಲಾಭ. ಕೃಷಿ  ಕಾರ್ಮಿಕರಿಗೆ ಅನುಕೂಲದ ದಿನ.ಗಣಢಶ ಕವಚ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
 
6.ಕನ್ಯಾ:

ಹಿರಿಯ ಬಂಧುಗಳ  ಭೇಟಿ. .ಸಣ್ಣ ಉದ್ಯಮಿಗಳಿಗೆ ಅನುಕೂಲದ ದಿನ.. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗಾವಕಾಶ..ಯಂತ್ರೋಪಕರಣಗಳ ಮಾರಾಟಗಾರರಿಗೆ ಮಧ್ಯಮ ಲಾಭ. ಅವಿವಾಹಿತರಿಗೆ ವಿವಾಹ ನಿಶ್ಚಯ.ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

7. ತುಲಾ:

ಉದ್ಯೋಗ ಸ್ಥಾನದಲ್ಲಿ ಯೋಗ್ಯತೆಗೆ ಸರಿಯಾದ ಗೌರವ ಪ್ರಾಪ್ತಿ.   .ಗುರುಸ್ಥಾನದಲ್ಲಿರುವ ಹಿರಿಯರ ಭೇಟಿಯಿಂದ ಸಮಾಧಾನ.  ದೇವತಾ ಸಾನ್ನಿಧ್ಯ ದರ್ಶನ.  ಮಕ್ಕಳ ಶೈಕ್ಷಣಿಕ ಸಾಧನೆಯಿಂದ ಹರ್ಷ. ವಾಸಸ್ಥಾನ ವಿಸ್ತರಣೆಗೆ  ಯೋಚನೆ.ಸಂಕಷ್ಟನಾಶನ  ಗಣೇಶ ಸ್ತೋತ್ರ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಶನಿಸ್ತೋತ್ರ ಓದಿ.

8.ವೃಶ್ಚಿಕ:

ದೈಹಿಕ, ಮಾನಸಿಕ ಆರೋಗ್ಯ ಉತ್ತಮ ಸ್ಥಿತಿಯಲ್ಲಿ..ಉದ್ಯೋಗ ಸ್ಥಾನದಲ್ಲಿ ಊ  ಸ್ಥಿತಿ ಸುಧಾರಣೆ. .ಗೃಹಿಣಿಯರ ಉದ್ಯಮ ಯೋಜನೆಗಳು ಯಶಸ್ಸಿನ ಹಾದಿಯಲ್ಲಿ.ಗಣೇಶ ದ್ವಾದಶನಾಮ ಸ್ತೋತ್ರ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

9.ಧನು:

ತೀವ್ರ ಪರಿಶ್ರಮದಿಂದ ಸಂಪಾದನೆ ವೃದ್ಧಿ.ಘಟಕದ ಸದಸ್ಯರ ಸಹಕಾರ. . ಸಣ್ಣ ಉದ್ಯಮ ಘಟಕಕ್ಕೆ ಸಮರ್ಥರ ನೇಮಕ. .ಖಾದಿ ಉಡುಪು ಉತ್ಪಾದಕರ ಆದಾಯ ವೃದ್ಧಿ.. ಮಹಿಳೆಯರ ಖಾದ್ಯಪದಾರ್ಥ ಉದ್ಯಮಕ್ಕೆ ಅಧಿಕ  ಲಾಭ. ಕೃಷಿ ಭೂಮಿ ಖರೀದಿ ವ್ಯವಹಾರದಲ್ಲಿ ಲಾಭ.ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.

10.ಮಕರ:

  ಸಮಯಕ್ಕೆ  ಸರಿಯಾಗಿ ನಿಗದಿತ ಕಾರ್ಯ ಮುಕ್ತಾಯ.. ಉದ್ಯಮ ಉತ್ಪನ್ನಗಳ  ಮಾರಾಟ ವೃದ್ಧಿ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಪ್ರಮಾಣದಲ್ಲಿ ವರಮಾನ ವೃದ್ಧಿ.  ಪ್ರಾಪ್ತ ವಯಸ್ಕರಿಗೆ ವಿವಾಹ ಯೋಗ.ಹಿರಿಯರ ಆರೋಗ್ಯದ ಕುರಿತು ಎಚ್ಚರ.ಗಣೇಶ ಕವಚ,ಮಹಾಲಕ್ಷ್ಮಿ ಅಷ್ಟಕ, ನವಗ್ರಹ ಸ್ತೋತ್ರ ಓದಿ.

11. ಕುಂಭ:.

 ಕುಗ್ಗದ ಹುರುಪಿನೊಂದಿಗೆ  ಹೊಸ ದಿನ ಆರಂಭ.ಉದ್ಯೋಗ ಸ್ಥಾನದಲ್ಲಿ‌ ನಿಗದಿತ ಕಾರ್ಯಗಳು  ಮುಕ್ತಾಯ… ಗ್ರಾಹಕರ ಬೇಡಿಕೆಗಳನ್ನು ಈಡೇರಿಸುವ ಸವಾಲು.. ಮುದ್ರಣ‌ಸಾಮಗ್ರಿ,  ಸ್ಟೇಶನರಿ ವಿತರಕರಿಗೆ ಅನುಕೂಲದ ದಿನ.ಹಳೆಯ ಬಂಧುಗಳೊಡನೆ ಮಿಲನ.ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಶನಿಸ್ತೋತ್ರ ಓದಿ.

12.ಮೀನ:

ಸಪ್ತಾಹ ಮುಂದುವರಿದಂತೆ  ಇನ್ನಷ್ಟು ಕೆಲಸಗಳ  ಒತ್ತಡ. ಏಕಕಾಲಕ್ಕೆ ಹಲವು ವಿಭಾಗಗಳಿಂದ ಕೆಲಸಕ್ಕೆ ಕರೆ.. . ಸರಕಾರಿ ಇಲಾಖೆಗಳವರಿಂದ ಸಹಕಾರ.  ಸಹಕಾರಿ ಸಂಸ್ಥೆಗಳಿಗೆ  ಏಳಿಗೆಯ ಕಾಲ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ಅನುಕೂಲ.ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ದೇವೀಸ್ತೋತ್ರ ಓದಿ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.