'ಅಂಶು' ಹೊಸ ಸಿನಿಮಾಗೆ ಧ್ವನಿಯಾದ ಜೇನ ದನಿಯೋಳೆ.. ಗಾಯಕ ಜಸ್ ಕರಣ್ ಸಿಂಗ್

ಮತ್ತೊಂದು ಕನ್ನಡ ಹಾಡಿನೊಂದಿಗೆ ಬಂದ ಜಸ್ ಕರಣ್ ಸಿಂಗ್

Nov 12, 2024 - 17:48
Feb 5, 2026 - 18:46

 ಬೆಂಗಳೂರು :ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ‘ಜೇನ ದನಿಯೋಳೆ’ ಹಾಡು ಹಾಡಿ ಹಿಟ್ ಎನಿಸಿಕೊಂಡಿರುವ ಜಸ್ ಕರಣ್ ಸಿಂಗ್, ಈಗ ಮತ್ತೊಂದು ಕನ್ನಡ ಸಿನಿಮಾದಲ್ಲಿ ಇಂಪಾದ ಹಾಡೊಂದನ್ನು ಹಾಡಿದ್ದು, ಇದೀಗ ಹಾಡು ಯೂಟ್ಯೂಬ್​ನಲ್ಲಿ ಬಿಡುಗಡೆ ಆಗಿದೆ.ಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ (Nisha Ravikrishnan) ನಾಯಕಿಯಾಗಿ ನಟಿಸಿರುವ ಚಿತ್ರ ‘ಅಂಶು’. ಇದುವರೆಗೂ ತನ್ನದೇ ಆದ ಗಟ್ಟಿತನದ ಸುಳಿವಿನೊಂದಿಗೆ ಸೆಳೆಯುತ್ತಾ ಬಂದಿರುವ ಈ ಚಿತ್ರದ ಅರ್ಥಪೂರ್ಣ ಹಾಡೊಂದು ಇದೀಗ ಬಿಡುಗಡೆಯಾಗಿದೆ. ಕೇಳಿದಾಕ್ಷಣವೇ ನೇರವಾಗಿ ಎದೆಗಿಳಿದು ಬಿಡುವ ಈ ಹಾಡಿಗೀಗ ಕೇಳುಗರಿಂದ ಭರಪೂರ ಮೆಚ್ಚುಗೆ ಹರಿದು ಬರಲಾರಂಭಿಸಿದೆ. ಚಿತ್ರ ಸನ್ನಿವೇಶಗಳಿಗೆ ತಕ್ಕುದಾಗಿ ರೂಪುಗೊಂಡಂತಿರುವ ಸದರಿ ಹಾಡು, ಒಂದಿಡೀ ಕಥೆಯ ಆತ್ಮವನ್ನೇ ತನ್ನೊಳಗೆ ಬಚ್ಚಿಟ್ಟುಕೊಂಡಿರುವಂತೆ ಭಾಸವಾಗುತ್ತಿದೆ. ಇದೇ ನವೆಂಬರ್ 21ರಂದು ಬಿಡುಗಡೆಯಾಗಲಿರುವ ‘ಅಂಶು’ (Anshu Film) ಈ ಹಾಡಿನ ಮೂಲಕವೇ ಪ್ರೇಕ್ಷಕರಿಗೆಲ್ಲ ಮತ್ತಷ್ಟು ಆಪ್ತವಾಗಿದೆ.

ಮೂಲತಃ ಪಂಜಾಬಿನವರಾಗಿದ್ದರೂ ಮ್ಯೂಸಿಕ್ ರಿಯಾಲಿಟಿ ಶೋ ಮೂಲಕ ಕನ್ನಡದವರೇ ಎಂಬಂತಾಗಿರುವಾತ ಗಾಯಕ ಜಸ್ ಕರಣ್ ಸಿಂಗ್. ಕನ್ನಡದಲ್ಲಿ ಬಹು ಬೇಡಿಕೆ ಹೊಂದಿರುವ ಜಸ್ ಕರಣ್ (Jaskaran Singh) ಈ ಹಾಡಿಗೆ ಧ್ವನಿಯಾಗಿದ್ದಾರೆ.  ‘ನೀರ ಮೇಲೆ ಗುಳ್ಳೆ ಬಿಂಬ ಕಾಣೋ ವೇಳೆ, ನಿಜವು ಒಂದು ಸಳ್ಳೇ ಅಲೆಮಾರಿ…’ ಎಂಬ ಅರ್ಥಪೂರ್ಣ ಸಾಲುಗಳನ್ನು ಮಹೇಂದ್ರ ಗೌಡ ರಚನೆ ಮಾಡಿದ್ದಾರೆ. ಅಂಶ’ ಸಿನಿಮಾವನ್ನು ಎಂ.ಸಿ ಚನ್ನಕೇಶವ ನಿರ್ದೇಶನದ ಮೊದಲ ಸಿನಿಮಾ. ರತನ್ ಗಂಗಾಧರ್, ಸಂಪತ್ ಶಿವಶಂಕರ್, ಕೃತಿ ನಾಣಯ್ಯ ಅವರುಗಳು ‘ಗ್ರಹಣ ಎಲ್ ಎಲ್ ಪಿ’ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. 

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.