Ayogya-2: ಅಯೋಗ್ಯ-2 ಸಿನಿಮಾ ಕಲೆಕ್ಷನ್ ಎಷ್ಟು?
Ayogya-2: ಕನ್ನಡದ ಬಹುನಿರೀಕ್ಷಿತ ಸಿನಿಮಾ ಅಯೋಗ್ಯ-2 ಮೂರನೇ ದಿನವಾದ ಭಾನುವಾರವು ಉತ್ತಮವಾದ ಗಳಿಕೆ ಮಾಡಿದೆ.
ಕನ್ನಡದ ಬಹುನಿರೀಕ್ಷಿತ ಸಿನಿಮಾ ಅಯೋಗ್ಯ-2 (Ayogya-2), ಇದೇ ಆಗಸ್ಟ್ 7 ಶುಕ್ರವಾರದಂದು ಬಿಡುಗಡೆಯಾಗಿದೆ. ಈ ಚಿತ್ರ ಮೂರನೇ ದಿನವಾದ ಭಾನುವಾರವು ಉತ್ತಮವಾದ ಗಳಿಕೆ ಮಾಡಿದೆ.
ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ವೆಬ್‌ಸೈಟ್ 'ಸ್ಯಾಕ್ನಿಲ್ಕ್' ಪ್ರಕಾರ, ರೂ.1.06 ಕೋಟಿ (ನೆಟ್) ಬಾಚಿದೆ. ಇದರೊಂದಿಗೆ ರೂ.2.53 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಇದು 2018 ರಲ್ಲಿ ಬಿಡುಗಡೆಗೊಂಡ 'ಅಯೋಗ್ಯ' ಚಿತ್ರದ ಸೀಕ್ವೆಲ್ ಆಗಿದೆ. ಈ ಸಿನಿಮಾ ಮುದ್ದು ಮುದ್ದು ಪುಟ್ಟಲಕ್ಷ್ಮಿ.. ಅಣ್ಣ ಬಂದ್ರೆ.. ಹಾಗೂ ಮಿಲ್ಕಿ ಬ್ಯೂಟಿ.. ಹಾಡುಗಳು ಹಿಟ್ ಆಗಿದ್ದು, ಪ್ರೇಕ್ಷಕರು ಲೈಕ್ ಮಾಡಿದ್ದಾರೆ.
ಸತೀಶ್ ನೀನಾಸಂ, ರಚಿತಾ ರಾಮ್, ರವಿಶಂಕರ್ ಹಾಗೂ ಸಾಧು ಕೋಕಿಲ ಮುಖ್ಯಭೂಮಿಕೆಯಲ್ಲಿದ್ದಾರೆ. ನಿರ್ದೇಶನ ಎಸ್.ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳಿದ್ದು, 'ಎಸ್ವಿಸಿ ಫಿಲಂಸ್' ಬ್ಯಾನರ್‌ನಡಿ ಎಂ.ಮುನೇಗೌಡ ನಿರ್ಮಿಸಿದ್ದಾರೆ.
ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಮಾಸ್ತಿ ಉಪ್ಪಾರಹಳ್ಳಿ ಡೈಲಾಗ್ ಬರೆದಿದ್ದಾರೆ. ವಿಶ್ವಜಿತ್ ರಾವ್ ಕ್ಯಾಮೆರಾ ವರ್ಕ್ ಮಾಡಿದ್ದು, ಸುರೇಶ್ ಆರ್ಮುಗಂ ಸಂಕಲನಕಾರರಾಗಿದ್ದಾರೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.