Toxic: ಟಾಕ್ಸಿಕ್ ಟ್ರೇಲರ್ ಬಿಡುಗಡೆ.. ಯಶ್ ಅಬ್ಬರ
Toxic: ರಾಕಿಂಗ್ ಸ್ಟಾರ್ ಯಶ್ ನಟನೆಯ ಪ್ಯಾನ್-ಇಂಡಿಯಾ ಸಿನಿಮಾ 'ಟಾಕ್ಸಿಕ್' ಟ್ರೇಲರ್ ಇಂದು ಅದ್ದೂರಿಯಾಗಿ ಬಿಡುಗಡೆಗೊಂಡಿದೆ.
ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ಪ್ಯಾನ್-ಇಂಡಿಯಾ ಸಿನಿಮಾ 'ಟಾಕ್ಸಿಕ್' (Toxic), ಟ್ರೇಲರ್ ಇಂದು ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಬೆಂಗಳೂರಿನ ಎಎಂಬಿ ಮಾಲ್‌ನಲ್ಲಿ ನಡೆದ ಈವೆಂಟ್‌ನಲ್ಲಿ ಸಂಜೆ 7.01 ಗಂಟೆಗೆ ಈ ಟ್ರೇಲರ್ ಲಾಂಚ್ ಆಗಿದೆ. ಏಕಕಾಲದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಹೊರತರಲಾಗಿದೆ.
ಈ ಚಿತ್ರದಲ್ಲಿ ಯಶ್ ಅಬ್ಬರ ಜೋರಾಗಿದ್ದು, ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಲಿವುಡ್‌ಗೆ ಪೈಪೋಟಿ ನೀಡುವಂತೆ ನಿರ್ಮಾಣಗೊಂಡಿದ್ದು, ಸಖತ್ ರಿಚ್ ಆಗಿದೆ. ಈಗಾಗಲೇ 'ಕೆವಿಎನ್' ಯೂಟ್ಯೂಬ್ ಚಾನೆಲ್‌ನಲ್ಲಿರುವ ಕನ್ನಡ ಭಾಷೆ ಟ್ರೇಲರ್, ಕೆಲವೇ ನಿಮಿಷಗಳಲ್ಲಿ 6 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಸಿನಿಪ್ರೇಮಿಗಳು ಮನಸೊತ್ತಿದ್ದಾರೆ.
ಟ್ರೇಲರ್ ಲಾಂಚ್ ಈವೆಂಟ್‌ಗೆ ಮುಖ್ಯ ಅಥಿತಿಯಾಗಿ ನಟ ಡಾ.ಶಿವರಾಜ್‌ಕುಮಾರ್ ಆಗಮಿಸಿದ್ದಾರೆ. ನಟ ಯಶ್, ನಟಿಯರಾದ ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ, ಕಿಯಾರಾ ಅಡ್ವಾನಿ & ನಿರ್ದೇಶಕಿ ಗೀತು ಮೋಹನ್‌ದಾಸ್ ಸೇರಿದಂತೆ ಫುಲ್ 'ಟಾಕ್ಸಿಕ್' ಚಿತ್ರತಂಡ ಭಾಗವಹಿಸಿದೆ.
ಈ ಮೊದಲು ಇದೇ ಸಿನಿಮಾದ ಮನಮೋಹಕ.. ಹಾಗೂ ತಬಾಹಿ.. ಸಾಂಗ್ ಹಿಟ್ ಆಗಿದ್ದವು. ಆಗಸ್ಟ್ 26 ರಂದು 'ಟಾಕ್ಸಿಕ್' ವಿಶ್ವದಾದ್ಯಂತ ರಿಲೀಸ್ ಆಗಲಿದೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.