ಈ ದಿನದ ರಾಶಿ ಭವಿಷ್ಯ

ರಾಶಿ ಭವಿಷ್ಯ

Dec 9, 2024 - 05:13
Dec 7, 2024 - 17:55
ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ

 ದಿನ ಭವಿಷ್ಯ
ಅದೃಷ್ಟ ಸಂಖ್ಯೆ  9

1.ಮೇಷ:
ರಜೆಯ ಸೌಖ್ಯವನ್ನು ಅನುಭವಿಸಿದ ಬಳಿಕ ಸಪ್ತಾಹದ ಆರಂಭ..ಉದ್ಯೋಗ, ವ್ಯವಹಾರಗಳಲ್ಲಿ ಗುರಿಮುಟ್ಟಿದ ಸಮಾಧಾನ. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಾಮಾನ್ಯ ತೃಪ್ತಿ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.ಸಣ್ಣ ವ್ಯಾಪಾರಸ್ಥರಿಗೆ ಶುಭದಿನ.ಗಣಪತಿ ಅಥರ್ವಶೀರ್ಷ, ಶಿವಸಹಸ್ರನಾಮ, ನವಗ್ರಹ ಕವಚ ಓದಿ.


2.ವೃಷಭ:
ದೈವಾನುಗ್ರಹದಿಂದ  ಜೀವನ ಸುಲಭ. ಅನೇಕ ಮಂದಿ  ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ. ಸರಕಾರಿ  ನೌಕರರಿಗೆ ಸಪ್ತಾಹ ಆರಂಭವಾಗಿದ್ದರೂ ಆರಾಮದ ಭಾವ. ಮನೆಯಲ್ಲಿ ನೆಮ್ಮದಿಯ ವಾತಾವರಣ. ಹಿರಿಯರು, ಗೃಹಿಣಿಯರು,, ಮಕ್ಕಳಿಗೆ ನಿಶ್ಚಿಂತೆ.ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

3.ಮಿಥುನ:
ವಾರದ ಮೊದಲ  ದಿನ ಫಲಗಳು ಉತ್ತಮ ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ. ಉದ್ಯೋಗಸ್ಥರ  ಕಾರ್ಯ ನಿರ್ವಹಣೆ  ನಿರಾತಂಕ. ದೃಢವಾದ  ಆತ್ಮವಿಶ್ವಾಸದಿಂದ ಕಾರ್ಯಜಯ. ಅಪರೂಪದ ವ್ಯಕ್ತಿಯೊಂದಿಗೆ ಭೇಟಿ. ಗಣೇಶ ಪಂಚರತ್ನ. ಶಿವಕವಚ. ನವಗ್ರಹ ಮಂಗಲಾಷ್ಟಕ ಓದಿ.


4.ಕರ್ಕಾಟಕ:
ನಿಯೋಜಿತ ಕಾರ್ಯಗಳು ಮುಗಿದ ಸಂತೃಪ್ತಿ. ಪಾಲುದಾರಿಕೆ ವ್ಯವಹಾರ ಸುಧಾರಣೆ. ಕಟ್ಟಡ ನಿರ್ಮಾಣ-ಮಾರಾಟ  ವ್ಯವಹಾರಸ್ಥರಿಗೆ   ಉತ್ತಮ ಲಾಭ. ಅಧ್ಯಾಪಕ ವರ್ಗದವರಿಗೆ ಮಕ್ಕಳ ಸಾಧನೆಯಿಂದ ಹರ್ಷ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟವಾಗುವ ಭೀತಿ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.


5.ಸಿಂಹ:
ದಿನದ ಆರಂಭದಲ್ಲಿ ಮಂದಗತಿ, ಉತ್ತರಾರ್ಧದಲ್ಲಿ ವೇಗದ ಓಟ. ಉಡುಪು ತಯಾರಿ ಉದ್ದಿಮೆಯವರಿಗೆ ಅಪಾರ ಲಾಭ. ಗೃಹಿಣಿಯರ ಸ್ವಾವಲಂಬನೆ ಯತ್ನಕ್ಕೆ  ಯಶಸ್ಸು. ಭೂವ್ಯವಹಾರ ಸಂಬಂಧ ಮಾತುಕತೆ ಕೊನೆಯ ಹಂತಕ್ಕೆ. ಗಣೇಶ ದ್ವಾದಶನಾಮ ಸ್ತೋತ್ರ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

6.ಕನ್ಯಾ:
ಉದ್ಯೋಗಸ್ಥರಿಗೆ  ಮೇಲಿನವರಿಂದ ಉತ್ತೇಜನ. ವ್ಯವಹಾರಸ್ಥರಿಗೆ  ಹೊಸ ಅವಕಾಶಗಳು ಲಭ್ಯ. ಉದ್ಯೋಗಾಪೇಕ್ಷಿಗಳಿಗೆ ಯೋಗ್ಯ ಅವಕಾಶ ಗೋಚರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.ಔಷಧರಹಿತ ಚಿಕಿತ್ಸಕರಿಂದ ಸಹಾಯ. ಗಣೇಶ ಕವಚ, ನರಸಿಂಹ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

7.ತುಲಾ:
ಕಳೆದ ವಾರ ಕಾಡುತ್ತಿದ್ದ ಅನಾರೋಗ್ಯ ಪರಿಹಾರ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚುವರಿ ಜವಾಬ್ದಾರಿ. ಆಹಾರಪದಾರ್ಥ ವ್ಯಾಪಾರದಲ್ಲಿ ಪ್ರಗತಿ.ಕೃಷಿ ಉತ್ಪನ್ನಗಳಿಂದ  ಆದಾಯ ವೃದ್ಧಿ. ಗೃಹಿಣಿಯರಿಗೆ  ಉಲ್ಲಾಸದ ವಾತಾವರಣ.  ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

8.ವೃಶ್ಚಿಕ:
ವ್ಯವಹಾರಗಳು ನಿರೀಕ್ಷೆಯಂತೆ ನಡೆದು ಸಮಾಧಾನ. ಮಾಲಿಕ- ನೌಕರರ ಬಾಂಧವ್ಯ ಸುಧಾರಣೆ.ಆಸ್ತಿ ಖರೀದಿ, ಮಾರಾಟ ಮಾತುಕತೆ ಫಲಪ್ರದ. ಲೇವಾದೇವಿ ವ್ಯವಹಾರಸ್ಥರಿಗೆ ಸ್ವಲ್ಪಮಟ್ಟಿನ ಲಾಭ.  ಚಿನ್ನ, ಬೆಳ್ಳಿ ವ್ಯಾಪಾರಿಗಳಿಗೆ  ಉತ್ತಮ ಲಾಭ.ಗಣೇಶ ಕವಚ, ಮಹಿಷಮರ್ದಿನಿ ಸ್ತೋತ್ರ, ನವಗ್ರಹ ಕವಚ, ಓದಿ.

೯.ಧನು:
ದೈವಾನುಗ್ರಹ,  ಕಾರ್ಯನಿಷ್ಠೆ ಜೊತೆಗೂಡಿ ಯಶಸ್ಸು. ಸಹೋದ್ಯೋಗಿಗಳ ಅಸೂಯೆಗೆ ಗುರಿಯಾಗದಿರಿ. ಕಾರ್ಯದಕ್ಷತೆಗೆ ಮೇಲಧಿಕಾರಿಗಳಿಂದ ಪ್ರಶಂಸೆ. ವ್ಯವಹಾರ ಸಂಬಂಧ ಪ್ರಯಾಣ ಸಂಭವ. ಸಂಗಾತಿಯ ಆರೋಗ್ಯದ ಕಡೆಗೆ ಗಮನವಿರಲಿ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಗುರುಸ್ತೋತ್ರ ಓದಿ.


10.ಮಕರ:
ಉದ್ಯೋಗ ಸ್ಥಾನದಲ್ಲಿ ಸಮಾಧಾನ. ಕೆಲವರಿಗೆ ಅಯಾಚಿತ ಧನಪ್ರಾಪ್ತಿ. ಪಾಲುದಾರಿಕೆ ವ್ಯವಹಾರಸ್ಥರಿಗೆ ಸಾಮಾನ್ಯ ಲಾಭ. ಕೆಲವು ವರ್ಗಗಳ ವ್ಯಾಪಾರಿಗಳಿಗೆ ಹೆಚ್ಚು ಅನುಕೂಲ. ಹೆಚ್ಚಿನವರಿಗೆ ಮಿಶ್ರಫಲ ಕೊಡುವ ದಿನ. ಗಣೇಶ ಕವಚ, ಶಿವಕವಚ, ಶನಿಸ್ತೋತ್ರ ಓದಿ.


11.ಕುಂಭ:
ಸಾಮಾಜಿಕ ಚಟುವಟಿಕೆಗಳ ಒತ್ತಡ. ಉದ್ಯೋಗ ರಂಗದಲ್ಲಿ ಪ್ರಶಂಸೆಯ ಯೋಗ. ದಿನವಿಡೀ ಬಿಡುವಿಲ್ಲದ ಚಟುವಟಿಕೆಗಳು. ಹೊಸ ವ್ಯವಹಾರ ಆರಂಭಕ್ಕೆ ಸಿದ್ಧತೆ. ಗೃಹಿಣಿಯರ ಉದ್ಯಮಗಳ ಜನಪ್ರಿಯತೆ ವೃದ್ಧಿ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ಶನಿಸ್ತೋತ್ರ ಓದಿ

12.ಮೀನ:
ಸಪ್ತಾಹದ ನಿರ್ದಿಷ್ಟ ಕಾರ್ಯಗಳು ಮುಕ್ತಾಯದ ಹಂತಕ್ಕೆ. ಕಾರ್ಯಕ್ಷೇತ್ರದಲ್ಲಿ ಅನುಕೂಲಕರ ಸ್ಪಂದನ. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ಸಮಾನ ಆಸಕ್ತಿಯುಳ್ಳವರಿಂದ ಸಹಕಾರ. ಗೃಹಾಲಂಕಾರ ಸಾಮಗ್ರಿ ಖರೀದಿ.ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಸ್ತೋತ್ರ ಓದಿ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.