ದೀಪಾವಳಿಗೆ ತ್ರಿಬಲ್‌ ಧಮಾಕ, ಒಟಿಟಿಗೆ ಬರ್ತಿವೆ 3 ಸೂಪರ್ ಹಿಟ್‌ ಸಿನಿಮಾಗಳು!

ಸಿನಿ ಪ್ರೇಕ್ಷಕರಿಗೆ ಈ ದೀಪಾವಳಿಗೆ  ಗುಡ್‌ ನ್ಯೂಸ್‌‌

Oct 22, 2024 - 12:58
ದೀಪಾವಳಿಗೆ ತ್ರಿಬಲ್‌ ಧಮಾಕ, ಒಟಿಟಿಗೆ ಬರ್ತಿವೆ 3 ಸೂಪರ್ ಹಿಟ್‌ ಸಿನಿಮಾಗಳು!

ಸಿನಿ ಪ್ರೇಕ್ಷಕರಿಗೆ ಈ ದೀಪಾವಳಿಗೆ  ಗುಡ್‌ ನ್ಯೂಸ್‌‌  ಇದೆ. ಹಬ್ಬದ ಸಮಯದಲ್ಲಿ ವೀಕ್ಷಕರು ಮನೆಮಂದಿ ಜತೆ ಹಿಟ್‌ ಸಿನಿಮಾಗಳನ್ನು ನೋಡಬಹುದಾಗಿದೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಸಿನಿಮಾಗಳೂ ಬಿಡುಗಡೆಯಾಗುತ್ತಿವೆ.ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾ ಆಗಸ್ಟ್‌ 15ರಂದು ಅದ್ಧೂರಿಯಾಗಿ ತೆರೆ ಕಂಡಿತ್ತು. ಈ ಸಿನಿಮಾ ಹಾಡುಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಇದೀಗ ಸಿನಿಮಾ ಒಟಿಟಿ ಎಂಟ್ರಿ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ. ಸಿನಿಮಾ ದೀಪಾವಳಿ ಸಮಯದಲ್ಲಿ ಅಮೇಜಾನ್‌ ಪ್ರೈಂನಲ್ಲಿ ಸ್ಟ್ರೀಮಿಂಗ್‌ ಆಗಲಿದೆ ಎಂದು ವರದಿಯಾಗಿದೆ. ಈ ಬಗ್ಗೆ ಚಿತ್ರತಂಡ ಇದುವರೆಗೂ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.ಮೊದಲ ದಿನದಿಂದಲೂ ಪ್ರೇಕ್ಷಕರ ಮೆಚ್ಚುಗೆ ಪಡೆದು ಭರ್ಜರಿ ಪ್ರದರ್ಶನ ಕಂಡಿತ್ತು. ಫ್ಯಾಮಿಲಿ ಆಡಿಯನ್ಸ್ ಚಿತ್ರವನ್ನು ಮೆಚ್ಚಿಕೊಂಡಿದ್ದರು. ಹಿಂದೆ ಕ್ರೈಂ ಥ್ರಿಲ್ಲರ್ ಸಿನಿಮಾಗಳನ್ನು ಕಟ್ಟಿಕೊಟ್ಟು ಗೆದ್ದಿದ್ದ ನಿರ್ದೇಶಕರು ಈ ಬಾರಿ ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್  ಸಿನಿಮಾ ಕೊಟ್ಟಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್‌ ಮೊಟ್ಟ ಮೊದಲಬಾರಿಗೆ ಶ್ರೀನಿವಾಸ್ ರಾಜು ಜೊತೆಗೆ ಕೆಲಸ ಮಾಡಿದ್ದಾರೆ. ಶ್ರೀನಿವಾಸ್ ರಾಜು ಕ್ರೈಂ ಆಧರಿಸಿದ ದಂಡುಪಾಳ್ಯ ಸಿನಿಮಾ ಮಾಡಿದ್ದಾರೆ

.

ತಮಿಳಿನ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ‘ಲಬ್ಬರ್ ಪಂದು’ ಕಾಲಿವುಡ್‌‌ನಲ್ಲಿ ಸಖತ್‌ ಸೆನ್ಷೇಷನ್‌ ಕ್ರಿಯೇಟ್‌‌ ಮಾಡಿದ ಸಿನಿಮಾ. ಹರೀಶ್ ಕಲ್ಯಾಣ್ ಮತ್ತು ಅಟ್ಟಕತ್ತಿ ದಿನೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಸೆಪ್ಟೆಂಬರ್ 20 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬರುತ್ತಿರುವುದು ಕನ್‌ಫರ್ಮ್‌ ಆಗಿದೆ. ಅಕ್ಟೋಬರ್ 31 ರಂದು ಡಿಸ್ನಿ+ ಹಾಟ್‌ಸ್ಟಾರ್ OTT ನಲ್ಲಿ ಲಬ್ಬರ್ ಪಂದು ಸ್ಟ್ರೀಮ್ ಆಗಲಿದೆ.ಡಿಸ್ನಿ+ ಹಾಟ್‌ಸ್ಟಾರ್  ಸಿನಿಮಾದ ಪ್ರೋಮೋ ಕೂಡ ಶೇರ್‌ ಮಾಡಿಕೊಂಡಿದೆ.  ತಮಿಳಿನ ಹೊರತಾಗಿ, ಚಿತ್ರವು ಅಕ್ಟೋಬರ್ 31 ರಂದು ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸ್ಟ್ರೀಮ್ ಆಗಲಿದೆ. ರೀಶ್ ಕಲ್ಯಾಣ್ ಜೊತೆಗೆ ಅಟ್ಟಕತ್ತಿ ದಿನೇಶ್, ಸ್ವಸ್ತಿಕಾ, ಸಂಜನಾ ಕೃಷ್ಣಮೂರ್ತಿ, ಬಾಲ ಸರವಣನ್, ಕಾಳಿ ವೆಂಕಟ್, ಗೀತಾ ಕೈಲಾಸಂ, ದೇವ ದರ್ಶಿನಿ ಮತ್ತು ಜೆನ್ಸನ್ ದಿವಾಕರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.ಚಿಯಾನ್ ವಿಕ್ರಮ್ ಅವರ ಬಹು ನಿರೀಕ್ಷಿತ ಚಿತ್ರ ತಂಗಲಾನ್, ಒಟಿಟಿಗೆ ಬರಲಿದೆ ಎನ್ನಲಾಗುತ್ತಿದೆ. ಒಟಿಟಿಗೆ ಬರ್ತಿದೆ ಲಬ್ಬರ್ ಪಂದು 

ಚಿತ್ರವು ನವೆಂಬರ್ 12, 2024 ರಂದು   Netflix ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ ಎನ್ನಲಾಗಿದೆ. ಇನ್ನೂ ಕೆಲವು ಮೂಲಗಳ ಪ್ರಕಾರ ಸಿನಿಮಾ ದೀಪಾವಳಿ ದಿನದಂದೇ ರಿಲೀಸ್‌ ಆಗಲಿದೆ ಎನ್ನಲಾಗಿದೆ. ಆದರೆ ಅಧಿಕೃತ ಮಾಹಿತಿ ರಿವೀಲ್‌ ಆಗಿಲ್ಲ.  ಆಗಸ್ಟ್‌ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ, ವೀಕ್ಷಕರಿಂದಲೂ ಮೆಚ್ಚುಗೆ ಪಡೆದಿತ್ತು

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.