ದಿನ ಭವಿಷ್ಯ
28-07-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 1
೧. ಮೇಷ:
ಶುಭ ಸೋಮವಾರ ಎಲ್ಲವೂ ಶುಭ. ಹೊಸ ವಿಭಾಗದ ಕಾರ್ಯಕ್ಕೆ ಪ್ರಶಂಸೆ. ಹಣದ ಬೆಳೆಗಳ ಫಸಲು ಉತ್ತಮ. ಹಿರಿಯರ ಆರೋಗ್ಯ ಚೇತರಿಕೆ. ವ್ಯವಹಾರದ ಸಂಬಂಧ ಸಮೀಪದ ಊರಿಗೆ ಪ್ರಯಾಣ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
೨. ವೃಷಭ:
ದೊಡ್ಡದಾಗಿ ಕಾಣುವ ಸಣ್ಣ ಸಮಸ್ಯೆಗೆ ಪರಿಹಾರ. ಉದ್ಯೋಗ ಸ್ಥಾನದಲ್ಲಿ ಪುನರ್ವ್ಯವಸ್ಥೆ. ಹೊಸದೊಂದು ಜ್ಞಾನಶಾಖೆಗೆ ಪ್ರವೇಶ. ಅಸಹಾಯಕ ವೃದ್ಧರಿಗೆ ನೆರವು. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಂತೋಷದ ಅನುಭವ. ಗಣಪತಿ ಅಥರ್ವಶೀರ್ಷ, ಶಿವಕವಚ, ಗುರುಸ್ತೋತ್ರ ಓದಿ.
೩.ಮಿಥುನ:
ಉದ್ಯೋಗ, ಉದ್ಯಮ ಎರಡರಲ್ಲೂ ಕೀರ್ತಿ. ಮನೋಬಲದಿಂದ ಕಾರ್ಯಸಿದ್ದಿ. ವಾಹನ ದುರಸ್ತಿಗೆ ಹಣ ಖರ್ಚು. ವಸ್ತ್ರ, ಉಡುಪು ವ್ಯಾಪಾರಿಗಳಿಗೆ ಲಾಭ. ಅಪರೂಪದಲ್ಲಿ ಅತಿಥಿ ಸತ್ಕಾರ ಯೋಗ. ಗಣೇಶ ಅಷ್ಟಕ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೪.ಕರ್ಕಾಟಕ:
ಉದ್ಯೋಗ ಖಾಯಂ ಆದ ಸೂಚನೆ. ದೂರದಲ್ಲಿರುವ ಹಿತೈಷಿಗಳಿಂದ ಸಹಾಯ. ಕನ್ಯೆ, ಉದ್ಯೋಗ ಅನ್ವೇಷಕರಿಗೆ ದೈವ ಸಹಾಯ. ಆಭರಣ, ಯಂತ್ರೋಪಕರಣ ವ್ಯಾಪಾರಿಗಳಿಗೆ ಶುಭದಿನ. ಬಹುಮಟ್ಟಿಗೆ ಶುಭಫಲಗಳ ಅನುಭವ. ಗಣೇಶ ಪಂಚರತ್ನ, ಶಿವಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
೫.ಸಿಂಹ:
ಸಕಾಲಿಕ ಕ್ರಮದಿಂದ ಕ್ಷಿಪ್ರ ಫಲ. ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ. ವೃತ್ತಿಪರರಿಗೆ ಸಕಾಲದಲ್ಲಿ ಕಾರ್ಯ ಮುಗಿದು ಸಂತಸ. ಪತ್ರಕರ್ತರಿಗೆ , ಮಾಧ್ಯಮದವರಿಗೆ ಸತ್ತ್ವಪರೀಕ್ಷೆ. ಹಿರಿಯರ ಆರೋಗ್ಯ ಸುಧಾರಣೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಆದಿತ್ಯ ಹೃದಯ ಓದಿ.
೬. ಕನ್ಯಾ:
ಕೆಲವು ವರ್ಗದ ವ್ಯವಹಾರಸ್ಥರಿಗೆ ಅಭೂತಪೂರ್ವ ಲಾಭ. ಹೊಲಿಗೆ, ಮರದ ಕೆಲಸ ಬಲ್ಲವರಿಗೆ ಉದ್ಯೋಗಕ್ಕೆ ಕರೆ. ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸಹಾಯ. ಗೃಹಿಣಿಯರ ಸ್ವೋದ್ಯೋಗ ಯೋಜನೆ ಮುನ್ನಡೆ. ವಿವಾಹ ಪ್ರಸ್ತಾವ ಸ್ವೀಕಾರದಿಂದ ಶುಭ. ಗಣೇಶ ಕವಚ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಕವಚ ಓದಿ.
೭. ತುಲಾ:
ನಿರುತ್ಸಾಹಕ್ಕೆ ವಿದಾಯ ಕೋರಿಕೆ ಅವಶ್ಯ. ಉತ್ಪನ್ನಗಳ ಗುಣಮಟ್ಟ ಸುಧಾರಣೆಮಕ್ಕಳ ವಿದ್ಯಾರ್ಜನೆ ಆಸಕ್ತಿ ವೃದ್ಧಿ ಕೇಟರಿಂಗ್ ವ್ಯವಹಾರಸ್ಥರಿಗೆ ಶುಭದಿನ. ವ್ಯವಹಾರದ ಸಂಬಂಧ ಪ್ರಯಾಣ ಅನಿವಾರ್ಯ. ಗಣೇಶ ಪಂಚರತ್ನ, ಮಹಿಷಮರ್ದಿನಿ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೮.ವೃಶ್ಚಿಕ:
ಸಾಕಷ್ಟು ವಿಮರ್ಶಿಸದೆ ಮಾತು ಕೊಡಬೇಡಿ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಗಣನಾರ್ಹ ಸುಧಾರಣೆ. ಜನಸೇವಾ ಕಾರ್ಯಗಳಲ್ಲಿಆಸಕ್ತಿ. ನೆರೆಯವರೊಡನೆ ಸದ್ಭಾವನಾ ಸಂಬಂಧ. ಆಪ್ತ ಸಲಹೆಯಿಂದ ಆತ್ಮವಿಶ್ವಾಸ ವೃದ್ಧಿ. ಗಣಪತಿ ಅಥರ್ವಶೀರ್ಷ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಗುರುಸ್ತೋತ್ರ ಓದಿ.
೯.ಧನು:
ಹೊಸ ಪರಿಚಿತರಿಂದ ಸಕಾಲಿಕ ಸಹಾಯ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ. ಕುಶಲಕರ್ಮಿಗಳಿಗೆ ಶೀಘ್ರ ಉದ್ಯೋಗ ಪ್ರಾಪ್ತಿ. ಉಳಿತಾಯ ಯೋಜನೆ ಏಜೆಂಟರಿಗೆ ಶುಭದಿನ. ಹಿರಿಯರು,ಗೃಹಿಣಿಯರು, ಮಕ್ಕಳಿಗೆ ಸಂತಸ. ಗಣೇಶ ದ್ವಾದಶನಾಮ ಸ್ತೋತ್ರ, ನರಸಿಂಹ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೧೦.ಮಕರ:
ಮನೆಯೊಳಗೆ ವಿರಸಕ್ಕೆ ಎಡೆಗೊಡದಿರಿ. ಸಣ್ಣ ಉದ್ಯಮಿಗಳ ಆದಾಯ ಹೆಚ್ಚಳ. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಪ್ರಮಾಣದ ಲಾಭ. ಮಹಿಳೆಯರ ಗೃಹೋದ್ಯಮಗಳಿಗೆ ಪ್ರಚಂಡ ಯಶಸ್ಸು. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೧೧. ಕುಂಭ:
ಯೋಗ್ಯತೆಯರಿತು ಸಹಾಯ ಮಾಡಿ. ಕಿರಿಯರಿಗೆ ಮಾರ್ಗದರ್ಶನ, ಹಿರಿಯರಿಗೆ ಸಂದರ್ಭೋಚಿತ ಸಲಹೆ. ಪ್ರಾಮಾಣಿಕತೆಯಿಂದ ಸಮಾಜದಲ್ಲಿ ಗೌರವ ಮತ್ತು ಜನಪ್ರಿಯತೆ ವೃದ್ಧಿ. ವೃತ್ತಿಪರರಿಗೆ ಸರ್ವತ್ರ ಶ್ಲಾಘನೆ. ಶಿವಕ್ಷೇತ್ರ ದರ್ಶನದಿಂದ ಶುಭ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಶನಿಮಹಾತ್ಮೆ ಓದಿ.
೧೨. ಮೀನ:
ನಿತ್ಯದ ಕಾರ್ಯಗಳಲ್ಲಿ ಪ್ರಗತಿ. ವ್ಯವಹಾರ ವಿಧಾನದಲ್ಲಿ ಬದಲಾವಣೆ. ಹಣಕಾಸು ವ್ಯವಹಾರ ಉತ್ತಮ. ಸರಕಾರಿ ಇಲಾಖೆಗಳಿಂದ ಅನುಕೂಲದ ಸ್ಪಂದನ. ಬಾಕಿ ಕೆಲಸಗಳನ್ನು ಮುಗಿಸುವ ಪ್ರಯತ್ನ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.