ದಿನ ಭವಿಷ್ಯ

12-09-2025

Sep 12, 2025 - 16:52
ದಿನ ಭವಿಷ್ಯ

                  ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 3


         

೧. ಮೇಷ:

 ಗುರುವಿನ ಅನುಗ್ರಹದಿಂದ ಬೆಳೆಯುತ್ತಿರುವ ಕಾರ್ಯಕ್ಷೇತ್ರ. ಹೋಟೆಲ್ ಉದ್ಯಮಿಗಳಿಗೆ ಆದಾಯ ವೃದ್ಧಿ. ದೂರ ದೇಶದಲ್ಲಿರುವ ಬಂಧುಗಳಿಂದ  ವಿಶೇಷ ಸಮಾಚಾರ. ಮಹಿಳಾ ಉದ್ಯಮಿಗಳಿಗೆ ಯಶಸ್ಸು. ವಾಹನ ಚಾಲನೆಯಲ್ಲಿ ಎಚ್ಚರ ಇರಲಿ. ಗಣೇಶ ಪಂಚರತ್ನ, ವಿಷ್ಷು ಸಹಸ್ರನಾಮ,  ಶನಿಮಹಾತ್ಮೆ ಓದಿ.


೨.ವೃಷಭ:

 ಪ್ರತಿಭೆಯ ಸದುಪಯೋಗಕ್ಕೆ  ಅವಕಾಶ.  ಖಾದಿಯ  ಉಡುಪುಗಳು ಹಾಗೂ ವಸ್ತ್ರ ವ್ಯಾಪಾರಿಗಳಿಗೆ  ಲಾಭ.   ಶಿಕ್ಷಿತ ವೃತ್ತಿಪರಿಣತರಿಗೆ  ಉದ್ಯೋಗಾವಕಾಶ. ವಾಹನ ಸಂಬಂಧಿ ವ್ಯವಹಾರಸ್ಥರಿಗೆ ಅನುಕೂಲ. ಅಲ್ಪಕಾಲದ ಹೂಡಿಕೆ ಬೇಡ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

೩.ಮಿಥುನ:
 ಆದಷ್ಟು ಶೀಘ್ರ ಕಾರ್ಯಪ್ರವೃತ್ತರಾಗಿ. ಉದ್ಯೋಗಸ್ಥರಲ್ಲಿ ಕೆಲವರಿಗೆ  ಅತಂತ್ರ ಸ್ಥಿತಿ. ಅಪಾತ್ರರಿಗೆ ಸಲಹೆ ನೀಡಿ  ಅವಮಾನ ಹೊಂದದಿರಿ. ಯುವಜನರಿಗೆ ಧಾರ್ಮಿಕ ಮಾರ್ಗದರ್ಶನದ  ನೇತೃತ್ವ. ಸಣ್ಣದೊಂದು ತೀರ್ಥಯಾತ್ರೆಯ ಯೋಗ. ಗಣೇಶ ಅಷ್ಡಕ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.


೪. ಕರ್ಕಾಟಕ:


 ಉದ್ಯೋಗಸ್ಥರಿಗೆ  ಹೊಸ ಸೌಲಭ್ಯಗಳು. ಉದ್ಯಮಗಳ ಅಭಿವೃದ್ಧಿಗೆ ಪೂರಕ ವಾತಾವರಣ.  ಕೆಲವು ಸರಕಾರಿ   ವ್ಯವಸ್ಥೆಗಳ ಸುಧಾರಣಾ ಕ್ರಮ. ಮಹಿಳೆಯರ ಸ್ವೋದ್ಯೋಗ ಯೋಜನೆ  ಉತ್ಪನ್ನಗಳಿಗೆ ಕೀರ್ತಿ. ಕೇಟರಿಂಗ್ ವೃತ್ತಿಯವರಿಗೆ ಅನುಕೂಲದ ದಿನ. ಸಂಕಷ್ಟನಾಶನ ಗಣೇಶ ಸ್ತೋತ್ರ, ದೇವೀ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.


೫.ಸಿಂಹ:

 ಏಕಕಾಲದಲ್ಲಿ ಹಲವು ವ್ಯವಹಾರಗಳು. ಉದ್ಯೋಗಸ್ಥರಿಗೆ ಘಟಕದ‌ ನೇತೃತ್ವ ಲಭ್ಯ. ಉದ್ಯಮಕ್ಕೆ ಹೊಸ ರೂಪ ನೀಡುವ ಪ್ರಯತ್ನ. ಪಿತೃ ಋಣ ತೀರಿಸುವ ಕಾರ್ಯದಲ್ಲಿ ಭಾಗಿ. ಹಿರಿಯರು, ಗೃಹಿಣಿಯರು, ಮಕ್ಕಳು ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ದ್ವಾದಶನಾಮ ಸ್ತೋತ್ರ, ನರಸಿಂಹ ಕವಚ, ಮಹಾಲಕ್ಷ್ಮಿ ಅಷ್ಟಕ ಓದಿ.


೬ ಕನ್ಯಾ:

 ಹೊಸ ಕಾರ್ಯಕ್ಷೇತ್ರದ ಅಭಿವೃದ್ಧಿಗೆ ಪರಿಶ್ರಮ. ಸರಕಾರಿ ಅಧಿಕಾರಿಗಳಿಗೆ ತಿರುಗಾಟ. ಕೃಷಿ, ತೋಟಗಾರಿಕೆ ಆಸಕ್ತರಿಗೆ ಶುಭದಿನ. ಹಿರಿಯರ ಮನೆಯಲ್ಲಿ ಪಿತೃಕಾರ್ಯ. ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ಕವಚ, ಶಿವ ಸಹಸ್ರನಾಮ, ಮಹಿಷಮರ್ದಿನಿ‌  ಸ್ತೋತ್ರ ಓದಿ.


೭.ತುಲಾ:

  ಮಂದಮತಿಗಳ ಸಹವಾಸದಿಂದ ದೂರವಿರಿ. ಉದ್ಯಮಿಗಳಿಗೆ ಎದುರಾಳಿಗಳಿಂದ ಮಾಮೂಲು ಪೈಪೋಟಿ. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ  ಶುಭ ಸೂಚನೆ. ಲೇವಾದೇವಿ ವ್ಯವಹಾರದಿಂದ ದೂರವಿರಿ. ಕುಶಲಕಲೆಗಳಲ್ಲಿ ಆಸಕ್ತಿಯಿಂದ ಸಂತೃಪ್ತಿ. ಗಣಪತಿ ಅಥರ್ವಶೀರ್ಷ, ವೆಂಕಟೇಶ್ವರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೮. ವೃಶ್ಚಿಕ:

 ತೀರ ಚಂಚಲವಾದ  ಪರಿಸ್ಥಿತಿ. ಉದ್ಯೋಗಸ್ಥರ ಸ್ಥಾನ ಗೌರವಕ್ಕೆ ಹಾನಿಯಿಲ್ಲ. ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆಯ ಆತಂಕ.  ಭ್ರಷ್ಟ ರಾಜಕಾರಣಿಗಳಿಗೆ ಇಕ್ಕಟ್ಟಿನ ಪರಿಸ್ಥಿತಿ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳಿಗಾಗಿ ಖರ್ಚು. ಗಣೇಶ ಸ್ತೋತ್ರ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.

೯. ಧನು:

 ಉದ್ಯೋಗಸ್ಥರಿಗೆ ಘಟಕದ  ಸುಧಾರಣೆಯ ಜವಾಬ್ದಾರಿ. ಉದ್ಯಮದ ಹೊಸ ವಿಭಾಗಗಳಲ್ಲಿ ಲಾಭದ ಸೂಚನೆ.  ಹಿರಿಯ ನಾಗರಿಕರಿಗೆ ಸರಕಾರಿ ನೆರವು ದೊರಕಿಸಲು ಸಹಾಯ. ವ್ಯವಹಾರದ ನಿಮಿತ್ತ  ಪ್ರಯಾಣ  ಮುಂದೂಡಿಕೆ. ಹಿರಿಯ ಬಂಧುಗಳ  ಆಗಮನದ ಸಾಧ್ಯತೆ. ಗಣೇಶ ದ್ವಾದಶನಾಮ ಸ್ತೋತ್ರ, ದಾರಿದ್ರ್ಯದಹನ ಶಿವ ಸ್ತೋತ್ರ, ನವಗ್ರಹ ಪೀಡಾ ಪರಿಹಾರ ಸ್ತೋತ್ರ ಓದಿ.

೧೦. ಮಕರ:

ನೆಮ್ಮದಿಯ ದಿನಗಳು ಆರಂಭ. ಉದ್ಯೋಗ ಸ್ಥಾನದ  ಪರೀಕ್ಷೆಗಳಲ್ಲಿ  ವಿಜಯ. ಉದ್ಯಮಿಗಳಿಗೆ ಅನಿರೀಕ್ಷಿತ ಲಾಭದ ಸಾಧ್ಯತೆ. ಗೃಹೋಪಯೋಗಿ ಸಾಧನಗಳ ಖರೀದಿಗೆ ಧನವ್ಯಯ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ. ಗಷೇಶ ಕವಚ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೧.ಕುಂಭ:

 ಅನುದಿನವೂ ನಡೆಯುವ ಸೇವಾಕಾರ್ಯಗಳು. ಉದ್ಯೋಗಸ್ಥರಿಗೆ ಪ್ರೋತ್ಸಾಹದ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆಯ ಅನುಭವ.ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆಯಲ್ಲಿ ಲಾಭ. ಪಿತೃಕಾರ್ಯದಲ್ಲಿ ಭಾಗಿಯಾಗಿ ಸಂತೃಪ್ತಿ. ಗಣೇಶ ಪಂಚರತ್ನ, ಶಿವ ಪಂಚಾಕ್ಷರ ಸ್ತೋತ್ರ, ಶನಿಮಹಾತ್ಮೆ ಓದಿ 


೧೨. ಮೀನ:

 ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ.  ಇಲಾಖೆಯವರ ಸಹಕಾರದಿಂದ ಕೆಲಸಗಳು ಯಶಸ್ವಿ. ನವೀಕೃತ ಉದ್ಯಮ ಸ್ಥಾನದಲ್ಲಿ ಕಾರ್ಯಾರಂಭ.  ದೇವತಾ ಸಾನ್ನಿಧ್ಯಕ್ಕೆ ಭೇಟಿ. ಅನುಭವಸ್ಥರಿಂದ ಸೂಕ್ತ ಮಾರ್ಗದರ್ಶನ..
ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.