ದಿನ ಭವಿಷ್ಯ

08-11-2025

Nov 8, 2025 - 03:00
ದಿನ ಭವಿಷ್ಯ

               ಜ್ಯೋತಿರ್ಮಯ.

ಅದೃಷ್ಟ ಸಂಖ್ಯೆ 8

೧. ಮೇಷ:


 ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆಯ ವಾತಾವರಣ. ವ್ಯವಹಾರದಲ್ಲಿ ವಿಶೇಷ ಯಶಸ್ಸು. ಸರಕಾರಿ ಉದ್ಯೋಗಸ್ಥರಿಗೆ ಸಣ್ಣಪುಟ್ಟ ಸಮಸ್ಯೆಗಳು. ಭವಿಷ್ಯದ ಹೂಡಿಕೆಗಳ ಕುರಿತು ಚಿಂತನೆ. ಗೃಹೋದ್ಯಮಗಳ ವಿಸ್ತರಣೆಗೆ ವಿಘ್ನ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ ಶನಿಮಹಾತ್ಮೆ ಓದಿ.


೨.ವೃಷಭ:

   ಈಗಲೇ ಡ್ರಾ, ಈಗಲೇ ಬಹುಮಾನ ಎನ್ನುವ ಯೋಜನೆಗಳು ಬೇಡ. ಅನ್ವೇಷಕರೆದುರು ವಿಶಿಷ್ಟ ಅವಕಾಶಗಳು. ಖಾದಿಯ ಸಿದ್ಧ ಉಡುಪು ಉದ್ಯಮಕ್ಕೆ ಲಾಭ. ಪ್ರಮುಖರೊಂದಿಗೆ ಪಾಲುದಾರಿಕೆಯ ಅವಕಾಶ. ಕುಟುಂಬದಲ್ಲಿ, ಹೊಂದಾಣಿಕೆ, ಸಾಮರಸ್ಯಕ್ಕೆ ಪ್ರಯತ್ನ. ಗಣೇಶ ಅಷ್ಟಕ, ಕಾರ್ತಿಕೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೩.ಮಿಥುನ:
  ನೆನೆಗುದಿಯಲ್ಲಿದ್ದ ಯೋಜನೆ ಕಾರ್ಯಾರಂಭ. ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ. ಯುವಜನರಿಗೆ ವೃತ್ತಿಪರ ಶಿಕ್ಷಣ ಆಯೋಜನೆ. ವ್ಯವಹಾರ  ಸಂಬಂಧ ಸಣ್ಣ ಪ್ರವಾಸ. ದೇವತಾರ್ಚನೆಯಿಂದ ಸಮಸ್ಯೆ ಪರಿಹಾರ.
ಗಣೇಶ ಪಂಚರತ್ನ, ಆಂಜನೇಯ ಸ್ತೋತ್ರ, ಆದಿತ್ಯ ಹೃದಯ ಓದಿ.

೪. ಕರ್ಕಾಟಕ:

  ಕೆಲಸ ಹೆಚ್ಚಾದಷ್ಟೂ ವೃದ್ಧಿಯಾಗುವ ಕ್ರಿಯಾಶೀಲತೆ.  ಕಿರಿಯ ಉದ್ಯಮಿಗಳ ಸ್ನೇಹಕೂಟ ಆಯೋಜನೆ. ಹಿರಿಯರಿಗೆ ಸರಕಾರಿ  ಸೌಲಭ್ಯಗಳನ್ನು ದೊರಕಿಸುವ ಪ್ರಯತ್ನ. ಮಹಿಳೆಯರ ಸ್ವೋದ್ಯೋಗ  ಉತ್ಪನ್ನಗಳಿಗೆ ಒಳ್ಳೆಯ ಹೆಸರು. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.


೫.ಸಿಂಹ:

 ಸ್ವಾಭಿಮಾನಕ್ಕೆ ಇಂಬುಗೊಡುವ ವಾತಾವರಣ. ಹೊಸ ಕಾರ್ಯಕ್ಷೇತ್ರಗಳಿಗಾಗಿ ಹುಡುಕಾಟ. ಶಿಕ್ಷಿತ  ಕುಶಲಕರ್ಮಿಗಳಿಗೆ  ಶೀಘ್ರ ಉದ್ಯೋಗ. ಕುಟುಂಬದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ, ನೆಮ್ಮದಿಯ ಅನುಭವ. ಸಮಾಜದ ಹಿರಿಯರ ಕ್ಷೇಮಕ್ಕೆ ಯೋಜನೆ. ಸಂಕಷ್ಟನಾಶನ ಗಣೇಶ ಸ್ತೋತ್ರ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಕನಕಧಾರಾ ಸ್ತೋತ್ರ ಓದಿ.

೬. ಕನ್ಯಾ:
  ಮನಸ್ಸಿಗೆ ಒಪ್ಪುವ ಉದ್ಯೋಗ ಪ್ರಾಪ್ತಿ. ಹಿರಿಯರ ಆಸ್ತಿ ನಿರ್ವಹಣೆಗೆ ಯೋಗ್ಯ ವ್ಯವಸ್ಥೆ‌. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ  ಭರವಸೆ. ಪತ್ರಕರ್ತರು,ಸಾಹಿತ್ಯ ವ್ಯವಸಾಯಿಗಳಿಗೆ ಅನುಕೂಲ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಗಣಪತಿ ಅಥರ್ವಶೀರ್ಷ, ಶಿವ ಸಹಸ್ರನಾಮ, ಲಕ್ಷ್ಮೀಸ್ತೋತ್ರ ಓದಿ.


೭.ತುಲಾ:

  ದೈವಾನುಗ್ರಹದಿಂದ ಬಗೆಹರಿದ ಸಮಸ್ಯೆ‌ ಉದ್ಯಮಿಗಳಿಗೆ ಎದುರಾಳಿಗಳ ಪೈಪೋಟಿ ಶಮನ. ಉದ್ಯೋಗ ಅರಸುವವರಿಗೆ  ಶುಭ ವಾರ್ತೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಹಳೆಯ ಒಡನಾಡಿಯ ಮನೆಯಲ್ಲಿ ಶುಭಕಾರ್ಯ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ಸುಬ್ರಹ್ಮಣ್ಯ ಕವಚ ಓದಿ.

೮. ವೃಶ್ಚಿಕ:

  ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ. ಉದ್ಯೋಗಸ್ಥರ ಸ್ಥಾನ ಗೌರವ ಭದ್ರ. ಹಿರಿಯ ಅಧಿಕಾರಿಗಳಿಗೆ ನೆಮ್ಮದಿ ಕಡಿಮೆ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಸಂಸಾರದಲ್ಲಿ ಹುಳಿ ಹಿಂಡುವವರಿಗೆ ಮುಖಭಂಗ. ಗಣೇಶ ದ್ವಾದಶನಾಮ ಸ್ತೋತ್ರ, ನರಸಿಂಹ ಸ್ತೋತ್ರ, ಅನ್ಮಪೂರ್ಣಾ ಸ್ತೋತ್ರ ಓದಿ.

೯. ಧನು:

  ಪಟ್ಟು ಬಿಡದ ಪ್ರಯತ್ನದಿಂದ ಕಾರ್ಯ ಸುಧಾರಣೆ. ಉದ್ಯಮದ ವೈವಿಧ್ಯೀಕರಣ ಯೋಜನೆ ಮುಂದುವರಿಕೆ. ಮಕ್ಕಳ ಪ್ರತಿಭೆ ವಿಕಸನಕ್ಕೆ  ಪ್ರೋತ್ಸಾಹ. ಅಶಕ್ತರ ನೆರವಿನ ಯೋಜನೆಗಳಲ್ಲಿ ಭಾಗಿ. ಹಳೆಯ ಪಾಲುದಾರರ ಸಂಪರ್ಕ ನವೀಕರಣ. ಗಣೇಶ ಪಂಚರತ್ನ, ವೇದಸಾರ ಶಿವಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


೧೦. ಮಕರ:

 ಕಾಲಮಿತಿಯ ಕೆಲಸಗಳ ಸರಮಾಲೆ.  ಉದ್ಯಮಿಗಳಿಗೆ ನಷ್ಟವಾಗುವ ಭೀತಿ. ಯಂತ್ರೋಪಕರಣ ಉದ್ಯಮಿಗಳಿಗೆ ಮುಟ್ಟಿದ್ದೆಲ್ಲಾ ಚಿನ್ನ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ. ಮನೆಮಂದಿಯೊಂದಿಗೆ ದೇವಾಲಯ ಸಂದರ್ಶನ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ,  ಹನುಮಾನ್ ಚಾಲೀಸಾ ಓದಿ.

೧೧.ಕುಂಭ:

 ಸರಾಗವಾಗಿ  ಸಾಗುವ  ಕೆಲಸ, ಕಾರ್ಯಗಳು. ಉದ್ಯೋಗಸ್ಥರಿಗೆ ಹಿತಕರವಾದ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆ. ಕೃಷ್ಯುತ್ಪಾದನೆ ವೃದ್ಧಿಯಲ್ಲಿ ಯಶಸ್ಸು. ಟೈಲರಿಂಗ್, ವೈಂಡಿಂಗ್ ಬಲ್ಲವರಿಗೆ ಅಧಿಕ ಆದಾಯ. ಕಲಾರಾಧಕರಿಗೆ ಅನುಕೂಲದ ವಾತಾವರಣ.ಸಂಕಷ್ಟನಾಶನ ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವ ಸ್ತೋತ್ರ, ಶನಿಮಹಾತ್ಮೆ ಓದಿ.


೧೨. ಮೀನ:

ಆಲಸ್ಯದಿಂದ ಬಿಡುಗಡೆಯಾಗಿ ಹೊಸ ಹುಮ್ಮಸ್ಸು. ಹೊಸ ಸವಾಲುಗಳು, ಜವಾಬ್ದಾರಿಗಳು.  ಸಾಮೂಹಿಕ ಕಾರ್ಯಗಳಲ್ಲಿ ಸಕ್ರಿಯ ಪಾತ್ರ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ. ಇಲಾಖೆಗಳಿಂದ ಅನುಕೂಲಕರ ಸ್ಪಂದನ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.