ದಿನ ಭವಿಷ್ಯ

10-11-2025

Nov 11, 2025 - 13:20
ದಿನ ಭವಿಷ್ಯ


               ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ 1

೧.ಮೇಷ: 

 ಗತ ಸಪ್ತಾಹದ ಸಿಂಹಾವಲೋಕನ.  ಉದ್ಯೋಗ ಕ್ಷೇತ್ರದಲ್ಲಿ ಕಾರ್ಯ ಮಧ್ಯಮ. ಸರಕಾರಿ ನೌಕರರಿಗೆ ಕೆಲಸದ ಹೊರೆ. ಬಹುರಾಷ್ಟ್ರೀಯ ಕಂಪೆನಿ ನೌಕರರಿಗೆ ಉದ್ವೇಗ. ಎಲ್ಲದರಲ್ಲೂ ಸಾವಧಾನ ಅವಶ್ಯ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.


೨.ವೃಷಭ:
  ಸ್ವಂತ  ವ್ಯವಹಾರಸ್ಥರಿಗೆ  ಸಮಯದ ಅಭಾವ. ಉದ್ಯೋಗಸ್ಥರಿಗೆ ಸ್ವಲ್ಪ ನೆಮ್ಮದಿ. ಕಟ್ಟಡ ನಿರ್ಮಾಣ, ವಸ್ತ್ರೋದ್ಯಮ,  ಸ್ಬರ್ಣೋದ್ಯಮ  ಮೊದಲಾದ ಉದ್ಯಮಗಳಿಗೆ ಲಾಭ. ಕುಟುಂಬದಲ್ಲ್ಲಿ ಸಾಮರಸ್ಯ, ಆರೋಗ್ಯಭಾಗ್ಯ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೩.ಮಿಥುನ:
  ಆದಾಯ- ವೆಚ್ವ ಸಮತೋಲನ ಇರಲಿ. ಮನೆಯಲ್ಲಿ ಅನುಕೂಲದ  ವಾತಾವರಣ. ಉದ್ಯೋಗಸ್ಥರಿಗೆ ಹಿತವಾದ ಸನ್ನಿವೇಶ. ವಾಗ್ವಾದಗಳಿಗೆ ಅವಕಾಶ ನೀಡದಿರಿ. ಸಂಜೆ ಶಿವಾಲಯಕ್ಕೆ ಭೇಟಿ. ಗಣೇಶ ಪಂಚರತ್ನ, ಮಹಾಲಕ್ಷ್ಮಿ ಅಷ್ಟಕ, ನವಗ್ರಹ ಮಂಗಲಾಷ್ಟಕ ಓದಿ.

೪.ಕರ್ಕಾಟಕ:
ನಿಮ್ಮ ಕನಸುಗಳು ದೊಡ್ಡದಾಗಿರಲಿ. ಉದ್ಯಮಿಗಳ ಉತ್ಪನ್ನಗಳಿಗೆ ಮಧ್ಯಮ ಬೇಡಿಕೆ. ಕಲೋಪಾಸಕರಿಗೆ ಮನಸ್ಸಂತೋಷ, ವಿದ್ವಾಂಸರಿಗೆ ಜನಮನ್ನಣೆ. ಗೃಹಿಣಿಯರ ಸ್ವೋದ್ಯೋಗ  ಯೋಜನೆಗಳಿಗೆ ಪ್ರಚಾರ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ಗುರುಸ್ತೋತ್ರ ಓದಿ.

೫.ಸಿಂಹ:

 ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿತ  ಯಶಸ್ಸು. ಅಧಿಕಾರಿಗಳಿಗೆ ಅವಧಿಗಿಂತ ಮೊದಲೇ ವರ್ಗಾವಣೆ ಸಂಭವ.  ಲೇವಾದೇವಿ ವ್ಯವಹಾರಸ್ಥರಿಗೆ ಹಿನ್ನಡೆ. ರಾಜಕಾರಣಿಗಳಿಗೆ ಅಪವಾದ ಬರುವ ಸಾಧ್ಯತೆ. ಕೇಟರಿಂಗ್ ವ್ಯವಹಾರಸ್ಥರು ಗುಣಮಟ್ಟದ ಬಗ್ಗೆ ಎಚ್ಚರಿಕೆ ವಹಿಸಲಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


 
೬. ಕನ್ಯಾ:

  ಸರ್ವತ್ರ ಯಶಸ್ಸಿನಿಂದ   ಸಮಾಜದಲ್ಲಿ ಗೌರವ. ಉದ್ಯೋಗಸ್ಥರ ಸಾಧನೆಗೆ ಮೇಲಧಿಕಾರಿಗಳ ಪ್ರಶಂಸೆ. ವಸ್ತ್ರದ ವ್ಯಾಪಾರಿಗಳಿಗೆ ಉತ್ತಮ ಲಾಭ. ಉತ್ತರ ದಿಕ್ಕಿನಿಂದ ಶುಭವಾರ್ತೆ. ಮಕ್ಕಳಿಗೆ ಸಂತಸದ ಸನ್ನಿವೇಶ. ಸಂಕಷ್ಟನಾಶನ ಗಣೇಶ ಸ್ತೋತ್ರ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೭.ತುಲಾ:   
  ಸಜ್ಜನರ  ಹೆಸರು ಕೆಡಿಸುವ ಸಂಚು.  ಸ್ವಂತ  ಉದ್ಯಮದ ಉತ್ಪನ್ನಗಳಿಗೆ ಬೇಡಿಕೆ ವೃದ್ಧಿ. ಕೃಷಿ ಉತ್ಪನ್ನಗಳು, ತರಕಾರಿ, ಹಣ್ಣು ವ್ಯಾಪಾರಿಗಳಿಗೆ ಮಧ್ಯಮ ಲಾಭ. ಹಿರಿಯರು, ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಉತ್ತಮ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಭುಜಂಗಸ್ತೋತ್ರ, ಶನಿಸ್ತೋತ್ರ ಓದಿ.

೮.ವೃಶ್ಚಿಕ:

 ದೇಹಾರೋಗ್ಯದ  ಕಡೆಗೆ ಗಮನವಿರಲಿ. ಲೆಕ್ಕ ಪರಿಶೋಧಕರು, ಸಿವಿಲ್ ಎಂಜಿನಿಯರರಿಗೆ ಸಮಯದ ಒತ್ತಡ. ದೀರ್ಘಕಾಲದಿಂದ ಪೀಡಿಸುತ್ತಿದ್ದ ಸಮಸ್ಯೆಗೆ  ಪರಿಹಾರ. ಕುಶಲ ಕರ್ಮಿಗಳಿಗೆ  ಉತ್ತಮ ಆದಾಯ. ಗೃಹೋದ್ಯಮ ಉತ್ಪನ್ನಗಳಿಗೆ ಶುಭದಿನ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.


೯. ಧನು:

ಸಂದರ್ಭಕ್ಕೆ ಸರಿಯಾದ ಸ್ಪಂದನ ಇರಲಿ. ಸ್ವಂತ ಉದ್ಯಮದ ಉತ್ಪನ್ನಗಳಿಗೆ ಬೇಡಿಕೆ ವೃದ್ಧಿ. ವೈದ್ಯರಿಗೆ ವೃತ್ತಿಯಲ್ಲಿ ಯಶಸ್ಸಿನೊಂದಿಗೆ ಒಳ್ಳೆಯ ಹೆಸರು. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂತೋಷದ ವಾತಾವರಣ. ಪಾಲುದಾರಿಕೆ ಉದ್ಯಮದಲ್ಲಿ ಸೇರಲು ಆಹ್ವಾನ. ಗಣೇಶ ದ್ವಾದಶನಾಮ, ನರಸಿಂಹ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೦.ಮಕರ:

 ಪ್ರಾಪಂಚಿಕ ಕರ್ತವ್ಯಗಳ ಸೆಳೆತ. ನಿಗದಿತ ಸಮಯದಲ್ಲಿ ಕೆಲಸವನ್ನು ಮುಗಿಸುವ ಒತ್ತಡ.  ದೀರ್ಘಾವಧಿ ಯೋಜನೆಗಳಲ್ಲಿ ಹಣ ಹೂಡಿಕೆ. ಹಿತಶತ್ರುಗಳಿಂದ ಅಭಿವೃದ್ಧಿ ಯೋಜನೆಗಳಿಗೆ ವಿಘ್ನ. ಹಿರಿಯರ ಸಹಕಾರದಿಂದ  ಜಯ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
 

೧೧. ಕುಂಭ:

  ಸೇವೆಯ ಮೂಲಕ ಸಮಾಜದ ಋಣ ಸಂದಾಯ. ಉದ್ಯೋಗ ಕ್ಷೇತ್ರದ ಸಾಧನೆಗೆ ಮೇಲಿನವರಿಂದ ಶ್ಲಾಘನೆ. ಸ್ವಂತ ಉದ್ಯಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ಅಧ್ಯಾಪಕರು, ವೈದ್ಯರು ಮೊದಲಾದವರಿಗೆ ಸಮಾಜದಲ್ಲಿ  ಗೌರವ ವೃದ್ಧಿ. ದತ್ತಾತ್ರೇಯನ ಉಪಾಸನೆಯಿಂದ ಶುಭ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ


೧೨.ಮೀನ:
 ನಿಗದಿತ ಸಮಯದ ಮೊದಲೇ ಕಾರ್ಯ ಪೂರೈಸಿದ ತೃಪ್ತಿ. ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತ ಯಶಸ್ಸು.ಸರಕಾರಿ ಕಚೇರಿಗಳಲ್ಲಿ ನೌಕರ ವರ್ಗದವರಿಂದ ಉತ್ತಮ ಸ್ಪಂದನ. ಕಟ್ಟಡ ನಿರ್ಮಾಣ ಕಾರ್ಯ ವೇಗವರ್ಧನೆ. ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಳ. ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ  ಓದಿ.