ಆ್ಯಕ್ಷನ್ ಅವತಾರ ತಾಳಿದ ಸಮಂತಾ- ‘ಸಿಟಾಡೆಲ್ ಹನಿ ಬನಿ’ ಟ್ರೈಲರ್ ಔಟ್

ಸೌತ್ ನಟಿ ಸಮಂತಾ ಮತ್ತು ವರುಣ್ ಧವನ್  ಜೊತೆಯಾಗಿ ನಟಿಸಿರುವ ‘ಸಿಟಾಡೆಲ್ ಹನಿ ಬನಿ’  ವೆಬ್ ಸಿರೀಸ್ ಟ್ರೈಲರ್ ರಿಲೀಸ್ ಆಗಿದೆ. ವರುಣ್ ಜೊತೆ ಸಮಂತಾ  ಗನ್ ಹಿಡಿದು ಆ್ಯಕ್ಷನ್ ಅವತಾರ ತಾಳಿದಿದ್ದಾರೆ.

Oct 16, 2024 - 08:51
ಆ್ಯಕ್ಷನ್ ಅವತಾರ ತಾಳಿದ ಸಮಂತಾ- ‘ಸಿಟಾಡೆಲ್ ಹನಿ ಬನಿ’ ಟ್ರೈಲರ್ ಔಟ್

ಸೌತ್ ನಟಿ ಸಮಂತಾ ಮತ್ತು ವರುಣ್ ಧವನ್  ಜೊತೆಯಾಗಿ ನಟಿಸಿರುವ ‘ಸಿಟಾಡೆಲ್ ಹನಿ ಬನಿ’  ವೆಬ್ ಸಿರೀಸ್ ಟ್ರೈಲರ್ ರಿಲೀಸ್ ಆಗಿದೆ. ವರುಣ್ ಜೊತೆ ಸಮಂತಾ  ಗನ್ ಹಿಡಿದು ಆ್ಯಕ್ಷನ್ ಅವತಾರ ತಾಳಿದಿದ್ದಾರೆ.‘ಸಿಟಾಡೆಲ್ ಹನಿ ಬನಿ’ ವೆಬ್ ಸಿರೀಸ್‌ನಲ್ಲಿ ಒಂದು ಮಗುವಿನ ತಾಯಿಯಾಗಿ ಮತ್ತು ರಾ ಏಜೆಂಟ್ ಪಾತ್ರದಲ್ಲಿ ಸಮಂತಾ ನಟಿಸಿದ್ದಾರೆ. ವರುಣ್ ಮತ್ತು ಸಮಂತಾ ಗನ್ ಹಿಡಿದು ಖಡಕ್ ಆಗಿ ನಟಿಸಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ನಟಿ ಮಿಂಚಿದ್ದಾರೆ. ಟ್ರೈಲರ್ ನೋಡಿ ಫ್ಯಾನ್ಸ್ ಕಾಯುತ್ತಿದ್ದಾರೆ.ಈ ವೆಬ್ ಸರಣಿಗೆ ರಾಜ್ ಮತ್ತು ಡಿಕೆ ನಿರ್ದೇಶನ ಮಾಡಿದ್ದಾರೆ. ಹಾಲಿವುಡ್‌ನ ‘ಸಿಟಾಡೆಲ್’ ವೆಬ್ ಸರಣಿಯಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ ಪಾತ್ರದಲ್ಲೇ ಸಮಂತಾ ಕಾಣಿಸಿಕೊಂಡಿದ್ದಾರೆ. ನವೆಂಬರ್ 7ರಂದು ‘ಸಿಟಾಡೆಲ್ ಹನಿ ಬನಿ’ ಒಟಿಟಿಯಲ್ಲಿ ರಿಲೀಸ್ ಆಗಲಿದೆ.ಇನ್ನೂ ಈ ಹಿಂದೆ ಸಮಂತಾ ಜೊತೆ ಡೈರೆಕ್ಟರ್ ರಾಜ್ ಮತ್ತು ಡಿಕೆ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ಕೆಲಸ ಮಾಡಿದ್ದರು. ದಿ ಫ್ಯಾಮಿಲಿ ಮ್ಯಾನ್ 2ಗೆ ಮತ್ತು ಸಮಂತಾ ನಟನೆಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.