KSRTC: ಮಂಗಳೂರು ವಿಭಾಗದಿಂದ 'ದಸರಾ ದರ್ಶನ' ವಿಶೇಷ ಟೂರ್ ಪ್ಯಾಕೇಜ್.. ಇಲ್ಲಿದೆ ಡೀಟೇಲ್ಸ್
KSRTC: ಮಂಗಳೂರು ವಿಭಾಗ ವತಿಯಿಂದ, 5ನೇ ವರ್ಷದ 'ದಸರಾ ದರ್ಶನ' ವಿಶೇಷ ಟೂರ್ ಪ್ಯಾಕೇಜ್‌ನ್ನು ನಾಳೆಯಿಂದ (ಅ.11) ಶುರು ಮಾಡಲಾಗುತ್ತದೆ.
ದಕ್ಷಿಣ ಕನ್ನಡ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಮಂಗಳೂರು ವಿಭಾಗ ವತಿಯಿಂದ, 5ನೇ ವರ್ಷದ 'ದಸರಾ ದರ್ಶನ' ವಿಶೇಷ ಟೂರ್ ಪ್ಯಾಕೇಜ್‌ನ್ನು ನಾಳೆಯಿಂದ (ಅ.11) ಶುರು ಮಾಡಲಾಗುತ್ತದೆ.
ಬೆಳಗ್ಗೆ 06.30ಕ್ಕೆ 'ಮಂಗಳೂರು ಬಸ್ ನಿಲ್ದಾಣ'ದ ಗಣಪತಿ ದೇವಸ್ಥಾನದ ಬಳಿ ಯಾತ್ರಾರ್ಥಿಗಳು ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಸಮ್ಮುಖದಲ್ಲಿ ಸಾಂಕೇತಿಕವಾಗಿ ಪೂಜೆ ಸಲ್ಲಿಸಿ, ಟೂರ್ ಪ್ಯಾಕೇಜ್‌ಗೆ ಚಾಲನೆ ನೀಡಲಾಗುತ್ತದೆ ಎಂದು ಹಿರಿಯ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ತಿಳಿಸಿದ್ದಾರೆ.
ಟೂರ್ ಪ್ಯಾಕೇಜ್‌ನ ವಿವರ
ಮಂಗಳೂರು ಪ್ಯಾಕೇಜ್: ಮರೋಳಿ ಸೂರ್ಯನಾರಾಯಣ ದೇವಸ್ಥಾನ, ಬೋಳಾರು ಮಾರಿಯಮ್ಮ, ಮಂಗಳಾದೇವಿ, ಪೊಳಲಿ ರಾಜರಾಜೇಶ್ವರಿ, ಕೊಡ್ಯಡ್ಕ ಅನ್ನಪೂರ್ಣೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಬಪ್ಪನಾಡು ದುರ್ಗಾಪರಮೇಶ್ವರಿ, ಸಸಿ ಹಿತ್ಲು ಭಗವತಿ, ಚಿತ್ತಾಪುರದ ದುರ್ಗಾಪರಮೇಶ್ವರಿ, ಊರ್ವ ಮಾರಿಯಮ್ಮ ಮತ್ತು ಕುದ್ರೋಳಿ ಗೋಕರ್ಣನಾಥ ದೇವರ ದರ್ಶನ.
ಶೃಂಗೇರಿ ಪ್ಯಾಕೇಜ್: ಕೊಡ್ಯಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನ, ಶೃಂಗೇರಿ ಶಾರದಾಂಬೆ, ಹರಿಹರಪುರ ಮಠ ಹಾಗೂ ಋಷ್ಯಶೃಂಗ ಸ್ವಾಮಿ ದರ್ಶನ.
ಮಡಿಕೇರಿ ಪ್ಯಾಕೇಜ್: ಭಾಗಮಂಡಲದ ಭಗಂಡೇಶ್ವರ ದೇವಾಲಯ, ತಲಕಾವೇರಿ, ಅಬ್ಬಿ ಫಾಲ್ಸ್, ರಾಜ ಸೀಟ್ ಮತ್ತು ಪುತ್ತೂರು ಮಾಲಿಂಗೇಶ್ವರ ಸ್ವಾಮಿ ದರ್ಶನ.
ಕೊಲ್ಲೂರು ಪ್ಯಾಕೇಜ್: ಉಚ್ಚಿಲ ಮಹಾಲಕ್ಷ್ಮಿ ,ಕಾಪು ಮಾರಿಗುಡಿ, ಮಂದಾರ್ತಿ ದುರ್ಗಾಪರಮೇಶ್ವರಿ, ಕಮಲಶಿಲೆ ದುರ್ಗಾಪರಮೇಶ್ವರಿ, ಕೊಲ್ಲೂರು ಮೂಕಾಂಬಿಕೆ ಹಾಗೂ ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ ದರ್ಶನ.
ಸಿಗಂದೂರು ಪ್ಯಾಕೇಜ್: ಸಿಗಂದೂರು ಚೌಡೇಶ್ವರಿ ಕೊಲ್ಲೂರು ಮೂಕಾಂಬಿಕೆ ದರ್ಶನ.