ವಿದ್ಯಾಭಾರತಿ ಜಿಲ್ಲಾಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ: ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಹನುಮಗಿರಿಯ ವಿದ್ಯಾರ್ಥಿನಿಯರಿಗೆ ಹಲವು ಪ್ರಶಸ್ತಿ

Shree Gajanana School-ಜಿಲ್ಲಾ ಮಟ್ಟದ ಅಥ್ಲೆಟಿಕ್ ಕೂಟದಲ್ಲಿ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಈಶ್ವರಮಂಗಲದ ವಿದ್ಯಾರ್ಥಿನಿಯರಿಗೆ ಹಲವು ಪ್ರಶಸ್ತಿಗಳು ಲಭಿಸಿದೆ.

Jul 18, 2026 - 21:47
Jul 19, 2026 - 16:41
ವಿದ್ಯಾಭಾರತಿ ಜಿಲ್ಲಾಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ: ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಹನುಮಗಿರಿಯ ವಿದ್ಯಾರ್ಥಿನಿಯರಿಗೆ ಹಲವು ಪ್ರಶಸ್ತಿ

ಪುತ್ತೂರು: ನೆಹರುನಗರ ವಿವೇಕಾನಂದ ವಿದ್ಯಾಸಂಸ್ಥೆಗಳ ಮೈದಾನದಲ್ಲಿ ನಡೆದ 2026-27 ಸಾಲಿನ ವಿದ್ಯಾ ಭಾರತಿ ಜಿಲ್ಲಾ ಮಟ್ಟದ ಅಥ್ಲೆಟಿಕ್ ಕೂಟದಲ್ಲಿ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಈಶ್ವರಮಂಗಲದ ವಿದ್ಯಾರ್ಥಿನಿಯರಿಗೆ ಹಲವು ಪ್ರಶಸ್ತಿಗಳು ಲಭಿಸಿದೆ.


 ಶನ್ಮಿತಾ 9ನೇ ತರಗತಿ 3000 ಮೀಟರ್, 1500 ಮೀಟರ್, 800 ಮೀಟರ್ ಪ್ರಥಮ ಸ್ಥಾನದೊಂದಿಗೆ ವೈಯಕ್ತಿಕ ಚಾಂಪಿಯನ್ನಾಗಿ ಹೊರಹೊಮ್ಮಿದ್ದಾರೆ.
 ಸಾನ್ವಿ ಜೆ.ಯು. 9ನೇ ತರಗತಿ 3000 ಮೀಟರ್,,800 ಮೀಟರ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.


ಅರ್ಪಿತ ಡಿ'ಸೋಜಾ  9ನೇ ತರಗತಿ ಲಾಂಗ್ ಜಂಪ್, ಹೈ ಜಂಪ್ ದ್ವಿತೀಯ, ಸಾನ್ವಿ ಎಸ್ ರೈ 9ನೇ ತರಗತಿ ಟ್ರಿಪಲ್ ಜಂಪ್ ದ್ವಿತೀಯ, ತ್ವಿಷಾ ವಿ ಎಚ್ ಎಂಟನೇ ತರಗತಿ ಲಾಂಗ್ ಜಂಪ್, ಹೈ ಜಂಪ್ ನಲ್ಲಿ ತೃತೀಯ ಸ್ಥಾನವನ್ನು ಪಡೆದು 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸಮಗ್ರ ತಂಡ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗೂ ಈ ವಿದ್ಯಾರ್ಥಿಗಳು ಇದೇ ತಿಂಗಳ 29, 30, 31ನೇ ತಾರೀಕಿನಂದು ಕಲ್ಬುರ್ಗಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಶಾಂತ್ ರೈ ಮತ್ತು ಹರ್ಷಿತ್ ಕೆ ಕ್ರೀಡಾ ತರಬೇತಿಯನ್ನು ನೀಡಿದ್ದಾರೆ.