Ambika PU College: ನೀಟ್-2026, ಅಂಬಿಕಾ ಪಿಯು ಕಾಲೇಜಿನ ವಿದ‍್ಯಾರ್ಥಿಗಳ ಅಮೋಘ ಸಾಧನೆ

Ambika PU College: ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ‍್ಷೆ ನೀಟ್‍-2026 ಫಲಿತಾಂಶ ಪ್ರಕಟಗೊಂಡಿದೆ. ಅಂಬಿಕಾ ಪದವಿ-ಪೂರ್ವ ಕಾಲೇಜು ವಿದ‍್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.

Jul 18, 2026 - 13:32
Jul 18, 2026 - 13:34
Ambika PU College: ನೀಟ್-2026, ಅಂಬಿಕಾ ಪಿಯು ಕಾಲೇಜಿನ ವಿದ‍್ಯಾರ್ಥಿಗಳ ಅಮೋಘ ಸಾಧನೆ

ಪುತ‍್ತೂರು: ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ‍್ಷೆ ನೀಟ್‍-2026 ಫಲಿತಾಂಶ ಪ್ರಕಟಗೊಂಡಿದೆ. ಇಲ್ಲಿನ ನಟ‍್ಟೋಜ ಫೌಂಡೇಶನ್ ಟ್ರಸ್ಟ್ ಮನ್ನಡೆಸುತ್ತಿರುವ ಅಂಬಿಕಾ ಪದವಿ-ಪೂರ್ವ ಕಾಲೇಜು (Ambika PU College) ವಿದ‍್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.

ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳ ವಿವರ:
  
ಸಾಮೆತ್ತಡ್ಕದ ಪ್ರಶಾಂತ್ ಕೆ.ಜಿ ಮತ‍್ತು ಪೂರ್ಣ ಚಂದ್ರಿಕಾ ದಂಪತಿಯ ಪುತ್ರಿ ಚಿತ್ರಾ ಕೆ.ಪಿ (591), ಬೆಳ‍್ಳಾರೆ ಇಂದಿರಾನಗರದ ರವೀಂದ್ರನಾಥ್ ಹಾಗೂ ಸುಗುಣ ಎ ದಂಪತಿಯ ಪುತ್ರಿ ಶಾರ್ವರಿ ಆರ್.ಎಸ್ (591), ಗದಗ ಜಿಲ‍್ಲೆಯ ಬೂದಿಹಾಳದ ಶಿವರುದ್ರಯ್ಯ ಪಟದಯ್ಯ ಹಿರೇಮಠ ಮತ‍್ತು ಶೈಲಾ ಶಿವರುದ್ರಯ್ಯ ಹಿರೇಮಠ ದಂಪತಿಯ ಪುತ್ರ ಪ್ರತೀಕ ಶಿವರುದ್ರಯ್ಯ ಹಿರೇಮಠ (540), ಪುತ‍್ತೂರು ಹಾರಾಡಿಯ ದಾಮೋದರ ಎನ್ ಹಾಗೂ ನವೀನ ಕುಮಾರಿ ಕೆ.ಎಸ್ ದಂಪತಿಯ ಪುತ್ರ ತ್ರಿಶೂಲ್ ಎನ್ಡಿ. (534), ಬಂಟ‍್ವಾಳ ಅಡ್ಯನಡ್ಕದ ಶ್ರೀಕೃಷ್ಣ ಭಟ್ ಎಸ್ ಹಾಗೂ ಜಯಶ್ರೀ ಕೆ. ಆರ್ ದಂಪತಿಯ ಪುತ್ರಿ ಹರ್ಷ ಎಸ್ (515), ಪುತ‍್ತೂರು ಭಕ್ತಕೋಡಿ ಪಿಲಿಗುಂಡಿಯ ಕೃಷ್ಣಪ್ಪ ಮತ್ತು ಪುಷ್ಪ ದಂಪತಿಯ ಪುತ್ರ ಪಿ.ಕೆ ರಕ‍್ಷಿತ್ (513), ಸುಳ್ಯ ಬೆಳ‍್ಳಾರೆಯ ಬಿ.ಆರ್ ಲಕ‍್ಷೀನಾರಾಯಣ ಹಾಗೂ ಶ್ರೀದೇವಿ ದಂಪತಿಯ ಪುತ್ರಿ ಅಲಂಕೃತಾ ಎಲ್ (509) ಉತ್ತಮ ಗಳಿಸಿದ್ದಾರೆ.

ಪುತ‍್ತೂರು ದರ್ಬೆಯ ದಿನೇಶ್ ಕುಮಾರ್ ಪಿ ಮತ‍್ತು ಪೂರ್ಣಿಮಾ ಬಿ ದಂಪತಿಯ ಪುತ್ರಿ ಖುಷಿ ಪಿ ಡಿ (502), ಪುತ‍್ತೂರು ಪೆರ್ಲಂಪಾಡಿಯ ದಾಮೋದರ ಗೌಡ ಕೆ ಹಾಗೂ ಹರಿಣಾಕ‍್ಷಿ ಕೆ ದಂಪತಿಯ ಪುತ್ರಿ ವಿದ‍್ಯಾ ಕೆ (501), ವಿಟ್ಲ ಬಸವನಗುಡಿಯ ಡಾ. ಗಿರಿಧರ ಎನ್ ಮತ‍್ತು ಶ್ರೀದೇವಿ ಪಿ ಜಿ ದಂಪತಿಯ ಪುತ್ರಿ ಎನ್ ತನ‍್ವಿ ಗೌರಿ (479), ಕೊಡಗು ಚೆನ್ನಯನಕೋಟೆಯ ಚಿ.ಟಿ ಪೊನ್ನಪ್ಪ ಹಾಗೂ ವೀಣಾ ಪೊನ್ನಪ್ಪ ಪುತ್ರ ಸಿ.ಪಿ ರಿಷಿ ಪೊನ್ನಪ್ಪ (476), ಮೈಸೂರು ಎಚ್.ಡಿ.ಕೋಟೆಯ ಮರುಗೇಶ್ ಎಸ್ ಮತ್ತು ಕನಕೇಶ್ವರಿ ವಿ ದಂಪತಿಯ ಪುತ್ರ ಎಂ ಶ್ರೀಶೈಲ್ (460), ಪುತ‍್ತೂರು ಆರ್ಯಾಪಿನ ಸೀತಾರಾಮ ಶೆಟ‍್ಟಿ ಹಾಗೂ ಪ್ರಮೀಳಾ ದಂಪತಿಯ ಪುತ್ರಿ ಹಿತಾ ಶೆಟ‍್ಟಿ (452), ಬೆಂಗಳೂರಿನ ಸುರೇಶ್ ಕೆ.ಆರ್ ಮತ‍್ತು ಶುಭಶ್ರೀ ದಂಪತಿಯ ಪುತ್ರಿ ಶ್ರೀಲಕ‍್ಷ‍್ಮಿ ಸುರೇಶ್ (439) ಗರಿಷ್ಠ ಅಂಕ ಪಡೆದಿದ್ದಾರೆ.

ಹಾಸನ ಬೇಲೂರಿನ ವೀರೇಂದ್ರ ಎನ್.ಹೆಚ್ ಮತ‍್ತು ಆಶಾ ಬಿ.ಎಸ್ ದಂಪತಿಯ ಪುತ್ರಿ ಪುಣ್ಯ ಎನ್.ವಿ (428), ಬಂಟ‍್ವಾಳ ಶಂಭೂರಿನ ಕೆ ರತ‍್ನಾಕರ ಹಾಗೂ ಕಿಶೋರಿ ಕೆ ದಂಪತಿಯ ಪುತ್ರಿ ಮೋಕ್ಷ (423), ಸುಳ್ಯ ಬೆಳ‍್ಳಾರೆಯ ರಾಜೇಶ ಜಿ ಮತ‍್ತು ವಿನಯಶ್ರೀ ಕೆ ದಂಪತಿಯ ಪುತ್ರ ಆದಿತ್ಯ ನಾರಾಯಣ ಜಿ (423), ಪುತ‍್ತೂರು ಸಂಪ್ಯದ ಶೇಖರ ರೈ ಕೆ ಹಾಗೂ ಸೌಮ್ಯ ದಂಪತಿಯ ಪುತ್ರಿ ವೃದ‍್ಧಿ ರೈ (423), ಚಿಕ್ಕಮಗಳೂರು ಕಡೂರಿನ ರಾಜಪ್ಪ ಹೆಚ್.ಜಿ ಮತ‍್ತು ಭಾಗ್ಯ ಹೆಚ್ ವೈ ದಂಪತಿಯ ಪುತ್ರಿ ಪ್ರಾರ್ಥನಾ ಹೆಚ್ ಜಿ (420), ಪುತ‍್ತೂರು ಹಾರಾಡಿಯ ಲಕ‍್ಷ‍್ಮೀಕಾಂತ್ ಬಿ ಆಚಾರ್ಯ ಮತ‍್ತು ವೇದಾ ಲಕ‍್ಷ‍್ಮೀಕಾಂತ್ ದಂಪತಿಯ ಪುತ್ರಿ ಅರುಂಧತಿ ಎಲ್ ಆಚಾರ್ಯ (410), ಏತಡ್ಕ ಕಾಸರಗೋಡು ಜಿಲ‍್ಲೆಯ ಕೃಷ್ಣಕುಮಾರ್.ಪಿ.ಕೆ ಹಾಗೂ ಶುಭ.ಎಂ  ದಂಪತಿಯ ಪುತ್ರ ತೇಜಸ‍್ವಿ ಕೆ (409), ಪುತ‍್ತೂರು ಕೊಡಿಪ‍್ಪಾಡಿಯ ಹರಿಶ್ಚಂದ್ರ ಕೆ ಮತ‍್ತು ತೇಜಾಕ‍್ಷಿ ದಂಪತಿಯ ಪುತ್ರಿ ಯಶಸ‍್ವಿ ಹೆಚ್ ಸುವರ್ಣ (406), ಬಂಟ‍್ವಾಳ ಮಾಣಿಯ ಅಶೋಕ ಬಿ ಕೊಂಡೆ ಹಾಗೂ ಮಧುರಾ ಪಿ ದಂಪತಿಯ ಪುತ್ರಿ ವೃದ‍್ಧಿ ಎ ಕೊಂಡೆ (405) ಅಂಕದೊಂದಿಗೆ, ವೈದ್ಯಕೀಯ ಕೋರ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ನೀಟ್ ರಿಪೀಟರ್ಸ್ ಬ‍್ಯಾಚ್: 

ನೀಟ್ ರಿಪೀಟರ್ಸ್ ಬ‍್ಯಾಚ್‍ನ ವಿದ‍್ಯಾರ್ಥಿಗಳಲ‍್ಲಿ ಶೇಕಡ 65 ಕ‍್ಕಿಂತಲೂ ಅಧಿಕ ವಿದ‍್ಯಾರ್ಥಿಗಳಿಗೆ 50ಕ‍್ಕಿಂತ ಹೆಚ‍್ಚು ಅಂಕಗಳು ಲಭಿಸಿದೆ. ನೀಟ್ ರಿಪೀಟರ್ಸ್ ಬ‍್ಯಾಚ್ ದಾಖಲಾತಿ ಆರಂಭಗೊಂಡಿದ‍್ದು ಸೀಮಿತ ವಿದ‍್ಯಾರ್ಥಿಗಳಿಗೆ ಅವಕಾಶಗಳಿವೆ. ರಿಪೀಟರ್ಸ್ ಬ‍್ಯಾಚ್ ಸೇರಲು ಇಚ‍್ಛಿಸುವ ವಿದ‍್ಯಾರ್ಥಿಗಳು 8431285970, 9482822800 ಅಥವಾ 9448835488 ಸಂಖ‍್ಯೆಗೆ ಸಂಪರ್ಕಿಸಬಹುದು ಎಂದು ಸಂಸ‍್ಥೆ ಪ್ರಕಟಿಸಿದೆ.