Vivo T5 Lite 5G: ವಿವೋ ಟಿ5 ಲೈಟ್ 5ಜಿ ಫೋನ್‌ ಬಿಡುಗಡೆ.. ಬೆಲೆ ಇಷ್ಟೇನಾ?

Vivo T5 Lite 5G: ಹೊಚ್ಚ ಹೊಸ 'ವಿವೋ ಟಿ5 ಲೈಟ್ 5ಜಿ' ಸ್ಮಾರ್ಟ್‌ಫೋನ್‌ ಬಿಡುಗಡೆಗೊಂಡಿದೆ.

Jul 18, 2026 - 14:47
Vivo T5 Lite 5G: ವಿವೋ ಟಿ5 ಲೈಟ್ 5ಜಿ ಫೋನ್‌ ಬಿಡುಗಡೆ.. ಬೆಲೆ ಇಷ್ಟೇನಾ?

ಬೆಂಗಳೂರು: ಹೊಚ್ಚ ಹೊಸ ವಿವೋ ಟಿ5 ಲೈಟ್ 5ಜಿ (Vivo T5 Lite 5G) ಸ್ಮಾರ್ಟ್‌ಫೋನ್‌ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೊಂಡಿದೆ. ಜುಲೈ 22 ರಿಂದ ಫ್ಲಿಪ್‌ಕಾರ್ಟ್‌ ಹಾಗೂ ವಿವೋ ಪ್ಲಾಟ್‌ಫಾರ್ಮ್‌ನಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. 

ಇದು 4GB + 128GB, 6GB + 128GB ಹಾಗೂ 6GB + 256GB ಇಂಟರ್ನಲ್ ಸ್ಟೋರೇಜ್‌ನ್ನು ಹೊಂದಿದೆ. ಕ್ರಮವಾಗಿ ರೂ.19,999, ರೂ.21,999 ಮತ್ತು ರೂ.24,999 ದರವನ್ನು ಪಡೆದಿದೆ. 

ಈ ಸ್ಮಾರ್ಟ್‌ಫೋನ್‌ 6,500mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. 44W ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಬೆಂಬಲಿಸುತ್ತದೆ. 50MP ಮುಖ್ಯ ಕ್ಯಾಮೆರಾ ಹಾಗೂ ಸೆಲ್ಫಿಗಾಗಿ 5MP ಕ್ಯಾಮೆರಾವನ್ನು ಪಡೆದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಪ್ರೊಸೆಸರ್‌ನ್ನು ಹೊಂದಿದೆ.

ಇದು 6.74-ಇಂಚಿನ HD+ ಎಲ್‌ಸಿಡಿ ಡಿಸ್‌ಪ್ಲೇಯನ್ನು ಪಡೆದಿದ್ದು, ಟ್ವಿಲೈಟ್ ಶ್ಯಾಡೋ & ವೇವ್ ಬ್ಲೂಎಂಬ ಬಣ್ಣಗಳೊಂದಿಗೂ ಸಿಗುತ್ತದೆ.