Expert PU College: ನೀಟ್.. ಎಕ್ಸ್‌ಪರ್ಟ್ ಕಾಲೇಜು ಐತಿಹಾಸಿಕ ಮೈಲುಗಲ್ಲು, ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳು

Expert PU College: ನೀಟ್ ಪ್ರವೇಶ ಪರೀಕ್ಷೆಯಲ್ಲಿ ಎಕ್ಸ್‌ಪರ್ಟ್ ಪದವಿ-ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

Jul 18, 2026 - 10:59
Jul 18, 2026 - 11:12
Expert PU College: ನೀಟ್.. ಎಕ್ಸ್‌ಪರ್ಟ್ ಕಾಲೇಜು ಐತಿಹಾಸಿಕ ಮೈಲುಗಲ್ಲು, ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳು

ಮಂಗಳೂರು: ನೀಟ್ ಪ್ರವೇಶ ಪರೀಕ್ಷೆಯಲ್ಲಿ ಎಕ್ಸ್‌ಪರ್ಟ್ ಪದವಿ-ಪೂರ್ವ ಕಾಲೇಜಿಗೆ (Expert PU College) ಸೇರಿದ 60 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಧೀರಜ್ ಎಸ್ 677 ಹಾಗೂ ಅಂಕಿತ್ ಅಶೋಕ್ ದೊಡವಾಡ 676 ಅಂಕ ಗಳಿಸಿ, ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.

ಈ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು 675 ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ. 10 ಮಂದಿ 650, 34 ಜನ 625, 60 ಮಂದಿ 600 ಹಾಗೂ 141 ಜನ 575 ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. 

ಇದರೊಂದಿಗೆ 169 ಜನ 550, 258 ಮಂದಿ 525, 356 ಜನ 500, 477 ಮಂದಿ 475, 614 ಜನ 450, 726 ಮಂದಿ 425 ಮತ್ತು 853 ವಿದ್ಯಾರ್ಥಿಗಳು 400 ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ ಎಂದು ಸಂಸ್ಥೆ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ತಿಳಿಸಿದ್ದಾರೆ.

ಉಜ್ವಲ್ ಶಿವಾನಂದ ಬೊಡಿಹಾಲ್ 667, ಸಮಯ್ ಎ.ಎಸ್. 665, ನಂದನ್ ಜಿ ಪಾಟೀಲ್ 661, ನಿಶಾಂತ್ ಎಂ ಗೌಡ 660, ಕೃತಿಕಾ ಮಲ್ಲಿಕಾರ್ಜುನ್ ಪಾಟೀಲ್ 660, ಯಶಸ್ ಎನ್.ಎಂ 660, ಮಿಲನ್ ಮಾದೇಶ ಎಸ್ 655, ಸಂಸ್ಕಾರ್ ರಂಜಿತ್ ಶಿಂದೆ 655 ಅಂಕ ಗಳಿಸಿದ್ದಾರೆ.

ನಿಖಿಲ್ ಭೂಷಣ್ ಶ್ರೀನಿವಾಸ್ (649), ದೀಪಕ್ ಗೌಡ ಎಂ (645), ಮೊಹಮ್ಮದ್ ಶಾರೂಬ್ (645), ಮುಕ್ತಾ ಎಸ್ (645), ತುಷಾರ್ ನಾರಾಯಣ (643), ಎಸ್. ರಿಷಿತ್ (641), ಅಮೋಘವರ್ಷ ಜಿ. (640), ಭವಿಷ್ ಬಿನಾ ಕೆ.ಎಸ್ (640), ಅರಳಿ ವಿರೂಪಾಕ್ಷಿ (640), ನಿಹಾಲ್ ಜಕ್ಕನಗೌಡರು (640), ವೀರ್ ರತ್ನಲ್ (639), ಸಿದ್ಧರಾಮ ಹೊಸಳ್ಳಿ (637), ಆನ್ಯಾ ಅಮೀನ್ (637), ಸೃಷ್ಟಿ ಶೆಟ್ಟಿ (636), ಪಾವನ ಪ್ರಸಾದ್ (636), ಧನುಷ್ ಯಾದವ್ ಟಿ.ಸಿ (634), ಅಮಿತ್ ಅಭಯ್ ಕಾಮತ್ (633), ನಾಗರಾಜ್ (632), ಸಾತ್ವಿಕ್ ಎಂ.ಮೋಕಾಶಿ (632) ಹಾಗೂ ರಿಷಿಕಾ ಕೆ.ಎಸ್ (630) ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಾಗಿದ್ದಾರೆ.

ಅಲ್ಲದೆ, ಪ್ರಜ್ಞಾ ಕೆ (627), ಫ್ರಾನ್ಸಿಸ್ ಎ.ಸಿ (627), ವರುಣ್ ಚಾಕೋಟೆ (625), ಅರ್ನವ್ ಅಗರ್ವಾಲ್ (625), ಶಿವ ಭರತ್‌ಕುಮಾರ್ ಮರ್ದಾ (624), ಚಂದನ್ ಎಚ್.ಆರ್ (623), ಗೌರಿ ಸರ್ಜಾ (623), ಸುಪ್ರೀತ್ ಜಿ ಗ್ರಾಮಪುರೋಹಿತ್ (623), ಅಮೋಘ್ ಬಿ ಲೋಕ (621), ಪ್ರೇರಣಾ ಪಾಟೀಲ್ (620) ಜಗನ್ ನಂದೀಶ್‌ಗೌಡ ಬಿ.ಆರ್ (618), ಜೀವನ್ ಫ್ರಾನ್ಸಿಸ್ ಫರ್ನಾಂಡಿಸ್ (617), ಕದಮ್ ಸಾತ್ವಿಕ್ ಸುನೀಲ್ (615), ಪಲ್ಲವಿ (613), ಅನಿಕೇತನ (613), ದೀಕ್ಷಾ ಶೆಟ್ಟಿ (612), ಜಿ.ಸಿಂಚನಾ (610), ನಂದನ್ ನಾಯಕ್ (610), ರಿಯಾ ಶಶಿಕಾಂತ ಚನ್ನವಾರ (608), ಯಶಸ್ವಿನಿ ಜಿ.ಎನ್ (606), ಸುಜನ್ ಜಿ (605), ಆದಿತ್ಯ ಪಾಟೀಲ್ (605), ಮೋಹಿತ್ ಎಸ್ (602), ನವನೀತ್ ಎನ್ ಪ್ರೈ (602), ವತ್ಸ ಎಂ (601), ಆರ್ಯನ್ ಪ್ರೀತಂ ಹೆಚ್ (600), ಸುಮೇಧಾ ಎಂ (600), ಆರ್ಯನ್ ಸಾರಂಗ್ ಅಂಬಲೀಕರ್ (600) ಹೆಜಮಾಡಿ ತಾ ಅದಿತಿ ರಾವ್ (600) ಮತ್ತು ಸಮನ್ವಿ ಎನ್ ಶೆಟ್ಟಿ (600) ಗರಿಷ್ಠ ಅಂಕ ಪಡೆದು ಸಾಧನೆ ಮಾಡಿದ್ದಾರೆ. ಶ್ರೀತಂ ಸಂಕನ್ ಪಿಡಬ್ಲ್ಯೂಡಿ ವಿಭಾಗದಲ್ಲಿ 32ನೇ ರ‍್ಯಾಂಕ್‌ ಪಡೆದಿದ್ದಾರೆ.